ಭಾರತದ ಆರ್ಥಿಕತೆಯಲ್ಲಿ ತ್ವರಿತಗತಿಯ ಚೇತರಿಕೆ: ಕುಸಿತದ ಪ್ರಮಾಣ ಶೇ.8 ಕ್ಕೆ ಇಳಿಕೆ!
ಭಾರತದ ಆರ್ಥಿಕ ಚೇತರಿಕೆ ನಿರೀಕ್ಷೆಗಿಂತಲೂ ತ್ವರಿತಗತಿಯಲ್ಲಿ ಆಗಿದ್ದು, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) 2020-21 ರ ಆರ್ಥಿಕ ವರ್ಷದ ಕುಸಿತವನ್ನು ಶೇ.9 ರಿಂದ ಶೇ.8 ಕ್ಕೆ ಇಳಿಕೆ ಮಾಡಿದೆ.
Published: 10th December 2020 04:25 PM | Last Updated: 10th December 2020 05:04 PM | A+A A-

ಭಾರತದ ಆರ್ಥಿಕತೆಯಲ್ಲಿ ತ್ವರಿತಗತಿಯ ಚೇತರಿಕೆ: ಕುಸಿತದ ಪ್ರಮಾಣ ಶೇ.8 ಕ್ಕೆ ಇಳಿಕೆ!
ನವದೆಹಲಿ: ಭಾರತದ ಆರ್ಥಿಕ ಚೇತರಿಕೆ ನಿರೀಕ್ಷೆಗಿಂತಲೂ ತ್ವರಿತಗತಿಯಲ್ಲಿ ಆಗಿದ್ದು, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) 2020-21 ರ ಆರ್ಥಿಕ ವರ್ಷದ ಕುಸಿತವನ್ನು ಶೇ.9 ರಿಂದ ಶೇ.8 ಕ್ಕೆ ಇಳಿಕೆ ಮಾಡಿದೆ.
ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿರುವುದನ್ನು ಏಷ್ಯನ್ ಡೆವಲ್ಪ್ಮೆಂಟ್ ಔಟ್ ಲುಕ್ ನಲ್ಲಿ ಗಮನಿಸಲಾಗಿದ್ದು, ಎರಡನೇ ತ್ರೈಮಾಸಿಕದ ಕುಸಿತ ಶೇ.7.5 ರಷ್ಟಿದ್ದು, ನಿರೀಕ್ಷೆಗೂ ವೇಗವಾಗಿ ಚೇತರಿಕೆ ಕಂಡಿದೆ ಎಂದು ಹೇಳಿದೆ.
ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.23.9 ರಷ್ಟು ಕುಸಿತ ದಾಖಲಾಗಿತ್ತು.
2020 ರ ಆರ್ಥಿಕ ವರ್ಷದ ಜಿಡಿಪಿ ಮುನ್ನೋಟವನ್ನು ಶೇ.9.0ಯಿಂದ ಶೇ.8.0 ಕ್ಕೆ ಇಳಿಕೆ ಮಾಡಲಾಗಿದೆ. ಹೆಚ್2 ನಲ್ಲಿ ಜಿಡಿಪಿ ಕಳೆದ ವರ್ಷದ ಗಾತ್ರಕ್ಕೇ ಮರಳುವ ಸಾಧ್ಯತೆ ಇದೆ. 2021 ರ ಆರ್ಥಿಕ ವರ್ಷದ ಬೆಳವಣಿಗೆಯನ್ನು ಶೇ.8.0 ರಷ್ಟಕ್ಕೆ ಅಂದಾಜಿಸಲಾಗಿದೆ ಎಂದು ಎಡಿಬಿ ತಿಳಿಸಿದೆ.
ದಕ್ಷಿಣ ಏಷ್ಯಾದಲ್ಲಿ 2021-22 ರಲ್ಲಿ ಬೆಳವಣಿಗೆ ದರ ಶೇ.7.2 ರಷ್ಟಾಗಲಿದ್ದರೆ ಭಾರತದಲ್ಲಿ ಅದು ಶೇ.8 ರಷ್ಟು ಇರಲಿದೆ. ಇತ್ತೀಚೆಗೆ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದ ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಭಾರತದ ಆರ್ಥಿಕತೆ ನಿರೀಕ್ಷೆಗೂ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಆರ್ಥಿಕ ವರ್ಷದ ಉತ್ತರಾರ್ಧದಲ್ಲಿ ಸಕಾರಾತ್ಮಕಗೊಳ್ಳಲಿದೆ ಎಂದು ಹೇಳಿದ್ದರು.