ದೇಶದ ಜಿಡಿಪಿ ಶೇ.8ಕ್ಕೆ ಕುಸಿಯುವ ಸಾಧ್ಯತೆ, ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಕಳಪೆ ಸಾಧನೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ 8ಕ್ಕೆ ಕುಸಿಯುವ ಸಂಭವವಿದ್ದು, ಮಾಲ್ಡೀವ್ಸ್ ಹೊರತುಪಡಿಸಿ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಟ್ಟ ಸಾಧನೆ ತೋರಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ 8ಕ್ಕೆ ಕುಸಿಯುವ ಸಂಭವವಿದ್ದು, ಮಾಲ್ಡೀವ್ಸ್ ಹೊರತುಪಡಿಸಿ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಟ್ಟ ಸಾಧನೆ ತೋರಿದೆ.

ಪುನಶ್ಚೇತನಗೊಂಡ ರಪ್ತಿನ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಬೆಳವಣಿಗೆ ದರ ಶೇ. 5.2 ರಷ್ಟು ಹೆಚ್ಚಾಗಿರುವುದಾಗಿ ಏಷ್ಯಾನ್  ಅಭಿವೃದ್ಧಿ ಬ್ಯಾಂಕ್ ಹೇಳಿದೆ.

ಈ ಹಿಂದೆ ದೇಶದ ಆರ್ಥಿಕತೆ ಶೇ. 9 ರಷ್ಟು ಇರಲಿದೆ ಎಂದು ಊಹಿಸಲಾಗಿತ್ತು. ಆದರೆ, ಅದು ಊಹೆಗಿಂತ ಕಡಿಮೆಯಾಗಲಿದ್ದು, ಶೇ.  8 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. 2021 ರಲ್ಲಿ ದೇಶದ ಆರ್ಥಿಕತೆಯು ಶೇ. 8 ರಷ್ಟು ಸಕಾರಾತ್ಮಕ ಬೆಳವಣಿಗೆ ಹಾದಿಗೆ ಮರಳಲಿದೆ ಎನ್ನಲಾಗುತ್ತಿದೆ.

2020ರ ಆರ್ಥಿಕ ವರ್ಷದಲ್ಲಿ ಶೇ. 23. 9 ರಿಂದ ಕುಸಿತ ಕಂಡಿದ್ದ ದೇಶದ ಆರ್ಥಿಕತೆ ಜೂನ್ ನಲ್ಲಿ ನಿರ್ಬಂಧ ಕ್ರಮಗಳಿಂದ ಸಾಮಾನ್ಯದತ್ತ ಹೊರಳಿತು ಎಂದು ಎಡಿಬಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com