ಕಬ್ಬು ಬೆಳೆಗಾರರಿಗೆ ಜಾಕ್ ಪಾಟ್, 3,600 ಕೋಟಿ ರೂ. ಸಬ್ಸಿಡಿ; ಸ್ಪೆಕ್ಟ್ರಂ ಹರಾಜಿಗೆ ಕೇಂದ್ರ ಸಂಪುಟ ಸಭೆ ಅನುಮೋದನೆ

ರೈತರ ಪ್ರತಿಭಟನೆ ನಡುವೆಯೇ ಕೇಂದ್ರ ಸಚಿವ ಸಂಪುಟ ಬುಧವಾರ ಸಭೆ ಸೇರಿ ಕೃಷಿ, ದೂರಸಂಪರ್ಕ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನೇಕ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್

ನವದೆಹಲಿ: ರೈತರ ಪ್ರತಿಭಟನೆ ನಡುವೆಯೇ ಕೇಂದ್ರ ಸಚಿವ ಸಂಪುಟ ಬುಧವಾರ ಸಭೆ ಸೇರಿ ಕೃಷಿ, ದೂರಸಂಪರ್ಕ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನೇಕ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
 
ಮತ್ತೊಂದು ಮಹತ್ವದ ಘೋಷಣೆಯಲ್ಲಿ, ಸ್ಪೆಕ್ಟ್ರಂ ಹಂಚಿಕೆಯ ಮುಂದಿನ ಸುತ್ತಿನ ಹರಾಜು ಕೂಡ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಕೊನೆಯ ಹರಾಜು 2016ರಲ್ಲಿ ನಡೆದಿತ್ತು.

'700 MHz, 800 MHz, 900 MHz, 1800 MHz, 2100 MHz, 2300 MHz ಮತ್ತು 2500 MHz ಆವರ್ತನ ಬ್ಯಾಂಡ್ʼಗಳಲ್ಲಿ ಸ್ಪೆಕ್ಟ್ರಮ್ ಹರಾಜು 20 ವರ್ಷಗಳ ವ್ಯಾಲಿಡಿಟಿ ಅವಧಿಗೆ ಸಂಪುಟ ಅನುಮೋದನೆ ನೀಡಿದೆ. ಒಟ್ಟು 2251.25 ಮೆಗಾಹರ್ಟ್ಸ್ ಒಟ್ಟು 3,92,332.70 ಕೋಟಿ ರೂ.ಗಳ ಒಟ್ಟು ಮೌಲ್ಯವನ್ನ ನೀಡಲಾಗುತ್ತಿದೆ ಎಂದೂ ಸಚಿವರು ತಿಳಿಸಿದರು.

ಕಳೆದ ಸಚಿವ ಸಂಪುಟ ಸಭೆ ಇದೆ 9ರಂದು ನಡೆದಿದ್ದು, ಔಪಚಾರಿಕ ವಲಯದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಮತ್ತು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ 3.0 ಅಡಿಯಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಉತ್ತೇಜನ ನೀಡಲು ಸಚಿವ ಸಂಪುಟವು ಭಾರತ್ ರೋಜ್ಗಾರ್ ಯೋಜನೆಗೆ ಚಾಲನೆ ನೀಡುವುದಾಗಿ ಹೇಳಿತ್ತು.

ಕಬ್ಬು ಬೆಳೆಗಾರರಿಗೆ ಜಾಕ್ ಪಾಟ್!
60 ಲಕ್ಷ ಟನ್ ಸಕ್ಕರೆಗೆ ಸಚಿವ ಸಂಪುಟ ಸಬ್ಸಿಡಿ ನೀಡಲಿದೆ. ಇದರಿಂದ 5 ಕೋಟಿ ರೈತರು ಮತ್ತು 5 ಲಕ್ಷ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

2020-21ರ ಮಾರುಕಟ್ಟೆ ವರ್ಷದಲ್ಲಿ(ಅಕ್ಟೋಬರ್-ಸೆಪ್ಟೆಂಬರ್ ) 60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು 3,600 ಕೋಟಿ ರೂ.ಗಳ ಸಬ್ಸಿಡಿ ನೀಡಲು ಆಹಾರ ಸಚಿವಾಲಯ ಉದ್ದೇಶಿಸಿದೆ. ಇನ್ನು ಸಬ್ಸಿಡಿ ಮೊತ್ತವನ್ನ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com