ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ: ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ ವ್ಯವಸ್ಥೆ

ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ ಸೌಲಭ್ಯವನ್ನು ವೀಲ್ಸ್ಐ ಸಂಸ್ಥೆಯು ಕಲ್ಪಿಸಿದೆ.
ಫಾಸ್ಟ್ ಟ್ಯಾಗ್
ಫಾಸ್ಟ್ ಟ್ಯಾಗ್

ಬೆಂಗಳೂರು: ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ ಸೌಲಭ್ಯವನ್ನು ವೀಲ್ಸ್ಐ ಸಂಸ್ಥೆಯು ಕಲ್ಪಿಸಿದೆ. 

ಕೇವಲ 3 ರಿಂದ 7 ದಿನಗಳ ವಳಗಾಗಿ ಕಡಿತಗೊಂಡ ಹಣವು ರೀಫಂಡ್ ಆಗಲಿದೆ. ಇದರಿಂದ ಲಕ್ಷಾಂತರ ಟ್ರಕ್ ಡ್ರೈವರ್ ಗಳಿಗೆ ಅನುಕೂಲವಾಗಲಿದೆ.  ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಬ್ಯಾಂಕುಗಳೊಂದಿಗೆ ಕೈಜೋಡಿಸುವ ಮೂಲಕ ಫಾಸ್ಟ್‌ ಟ್ಯಾಗ್ ವಹಿವಾಟುಗಳಿಗೆ ಸ್ವಯಂ ಮರುಪಾವತಿ ಮಾಡ್ಯೂಲ್ ಅನ್ನು ರಚಿಸಿದ ಮೊದಲ ಕಂಪನಿ ವೀಲ್ಸ್ಐ.

"ಡಬಲ್ ಅಥವಾ ತಪ್ಪು ಟೋಲ್ ಕಡಿತವು ಟ್ರಕ್ ಮಾಲೀಕರಿಗೆ ನಿರೀಕ್ಷೆಗಿಂತ ದೊಡ್ಡ ಸಮಸ್ಯೆಯಾಗಿದೆ. ಹೋಮ್‌ ಗ್ರಾನ್‌ ಸ್ಟಾರ್ಟಪ್‌ ನಿಂದ ಈ ರೀತಿಯ ನಾವೀನ್ಯತೆ ಬರುತ್ತಿರುವುದನ್ನು ನೋಡಿ ರೋಮಾಂಚನಗೊಂಡಿದೆ" ಎಂದು ಐಡಿಎಫ್‌ಸಿ ಬ್ಯಾಂಕ್ ವಕ್ತಾರರು ತಿಳಿಸಿದ್ದಾರೆ.

ಫಾಸ್ಟ್ಯಾಗ್ ಮೂಲಕ ದೈನಂದಿನ ಟೋಲ್ ಸಂಗ್ರಹವು ಸುಮಾರು 70 ಕೋಟಿ ರೂ. ಇದರಲ್ಲಿ ವಾಣಿಜ್ಯ ವಾಹನ ಮಾಲೀಕರು ಸುಮಾರು 60 ಕೋಟಿ ರೂ. 5 ಲಕ್ಷ ಫಾಸ್ಟ್‌ ಟ್ಯಾಗ್ ಖಾತೆಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದೈನಂದಿನ ಟೋಲ್ ವಹಿವಾಟಿನ ಸುಮಾರು ಶೇಕಡ 3 ದೋಷಯುಕ್ತವಾಗಿದೆ. ಸ್ವಯಂಚಾಲಿತ ಮರುಪಾವತಿ ವೈಶಿಷ್ಟ್ಯವು ದಿನಕ್ಕೆ 2 ಕೋಟಿ ರೂ.ಗಳ ಟೋಲ್ ವಹಿವಾಟುಗಳನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com