ಗುಣಮಟ್ಟಕ್ಕೆ ಹೆಸರುವಾಸಿಯಾದ ಗೋಲ್ಡ್ ವಿನ್ನರ್ ಈಗ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯನ್ನು ತನ್ನ ಸಮೂಹಕ್ಕೆ ಸ್ವಾಗತಿಸುತ್ತಿದೆ
ಕಾಳೀಶ್ವರಿ ರಿಫೈನರಿ ಪ್ರೈವೇಟ್ ಲಿಮಿಟೆಡ್, 1973 ರಲ್ಲಿ ಪ್ರಾರಂಭವಾದಾಗಿನಿಂದ ಮಾರುಕಟ್ಟೆಯನ್ನು ಅಗಾಧವಾಗಿ ವ್ಯಾಪಿಸಿಕೊಂಡಿದೆ. ಸಮೂಹವು ಖಾದ್ಯ, ಸಂಸ್ಕರಿಸಿದ, ದೀಪದೆಣ್ಣೆ ಮತ್ತು ಇನ್ನೂ ಹೆಚ್ಚಿನವುಗಳವರೆಗಿನ ಉನ್ನತ-ಮಟ್ಟದ ಎಣ್ಣೆಗಳನ್ನು ಕೊಡುವ ಮೂಲಕ ಸಮಾಜಕ್ಕೆ 47 ವರ್ಷಗಳ ಶ್ರದ್ಧಾಪೂರ್ವಕ ಸೇವೆಯನ್ನು ನೀಡಿದೆ.
Published: 21st December 2020 06:59 PM | Last Updated: 22nd December 2020 05:01 PM | A+A A-

ಗೋಲ್ಡ್ ವಿನ್ನರ್ ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ
ಕಾಳೀಶ್ವರಿ ರಿಫೈನರಿ ಪ್ರೈವೇಟ್ ಲಿಮಿಟೆಡ್, 1973 ರಲ್ಲಿ ಪ್ರಾರಂಭವಾದಾಗಿನಿಂದ ಮಾರುಕಟ್ಟೆಯನ್ನು ಅಗಾಧವಾಗಿ ವ್ಯಾಪಿಸಿಕೊಂಡಿದೆ. ಸಮೂಹವು ಖಾದ್ಯ, ಸಂಸ್ಕರಿಸಿದ, ದೀಪದೆಣ್ಣೆ ಮತ್ತು ಇನ್ನೂ ಹೆಚ್ಚಿನವುಗಳವರೆಗಿನ ಉನ್ನತ-ಮಟ್ಟದ ಎಣ್ಣೆಗಳನ್ನು ಕೊಡುವ ಮೂಲಕ ಸಮಾಜಕ್ಕೆ 47 ವರ್ಷಗಳ ಶ್ರದ್ಧಾಪೂರ್ವಕ ಸೇವೆಯನ್ನು ನೀಡಿದೆ. ನಮ್ಮ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ, ನಮಗೆ ಹಲವು ವರ್ಷಗಳಿಂದ ಗೊತ್ತಿರುವ ಮತ್ತು ಪ್ರತಿ ಮನೆಯಲ್ಲೂ ಮಹತ್ವದ ಪಾತ್ರವನ್ನು ವಹಿಸಿರುವ ಗೋಲ್ಡ್ ವಿನ್ನರ್ ಕುಟುಂಬದಿಂದ ಬಂದಿದೆ. ಇವರು ಈಗ ಹೊಚ್ಚ ಹೊಸ ಗೋಲ್ಡ್ ವಿನ್ನರ್ ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದು 100% ಶುದ್ಧ ಮತ್ತು ನೈಸರ್ಗಿಕ ಕೊಬ್ಬರಿ ಎಣ್ಣೆಯಾಗಿದ್ದು, ಇದನ್ನು ಅತ್ಯುತ್ತಮವಾದ, ಆಯ್ಕೆ ಮಾಡಿದ ಕೊಬ್ಬರಿಗಳಿಂದ ತಯಾರಿಸಲಾಗುತ್ತದೆ.
ಈ ಉತ್ಪನ್ನಗಳು ಒಟ್ಟಾರೆ ಗ್ರಾಹಕರ ನೆಲೆಯನ್ನು ವಿಸ್ತರಿಸುವುದಲ್ಲದೆ, ಖರೀದಿದಾರರಿಗೆ ಪರಿಷ್ಕೃತ ಮತ್ತು ವಿಶ್ವಾಸಾರ್ಹ ಆಯ್ಕೆಗಳ ಒಂದು ಶ್ರೇಣಿಯನ್ನು ನೀಡುತ್ತದೆ. ತಮಿಳು ಚಲನಚಿತ್ರ ಇಮೈಕ್ಕಾ ನೋಡಿಗಳ್ ಚಿತ್ರದಲ್ಲಿ ನಟಿಸಿದ ನಮ್ಮ ಬ್ರಾಂಡ್ ರಾಯಭಾರಿ ರಾಶಿ ಖನ್ನಾ ಒಳಗೊಂಡ ಇತ್ತೀಚಿನ ಟಿವಿಸಿ (ಟೆಲಿವಿಷನ್ ಕಮರ್ಷಿಯಲ್) ಜನರ ಮೇಲೆ ವಿಶ್ವಾಸವನ್ನು ಮೂಡಿಸಲು ಶಾಶ್ವತ ಬಂಧವನ್ನು ಪುನರುಚ್ಚರಿಸಿತು.
ಈ ಉತ್ಪನ್ನದ ಮುಖ್ಯಾಂಶಗಳು
ದೇಶೀಯ ಬಳಕೆಗೆ ಬಂದಾಗ ಗೋಲ್ಡ್ ವಿನ್ನರ್ ಅತ್ಯಂತ ವಿಶ್ವಾಸಾರ್ಹ ತೈಲ ಬ್ರಾಂಡ್ ಆಗಿದೆ. ಕಾಳೀಶ್ವರಿ ರಿಫೈನರಿ ಪ್ಯಾಕೇಜ್ ಮಾಡಿ ಮಾರುಕಟ್ಟೆಗೆ ನೀಡಿರುವ ಪ್ರಮುಖ ಖಾದ್ಯ ತೈಲ ಇದಾಗಿದೆ. ಇದಲ್ಲದೆ, ಗಾತ್ರಗಳ ವಿಷಯದಲ್ಲಿ ಅವುಗಳ ವಿಭಿನ್ನ ರೀತಿಯ ರೂಪಾಂತರಗಳು ಅದನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತವೆ. ಅದು ಕೈಗೆಟುಕುವ ಬೆಲೆಗೆ ಸಿಗುವಂತೆ ಮತ್ತು ಶೇಖರಿಸಿ ಇಡಲು ಸುಲಭವಾಗಿಸುತ್ತದೆ.
ಅಂತೆಯೇ, ಬ್ರಾಂಡ್ ಈಗ ತನ್ನ ಕೊಬ್ಬರಿ ಎಣ್ಣೆ ಶ್ರೇಣಿಯನ್ನು ತನ್ನ ಪ್ರಮುಖ ಉತ್ಪನ್ನದೊಂದಿಗೆ ಸಂಯೋಜಿಸುತ್ತಿದೆ. ಗುಣಮಟ್ಟದ ಮಾನದಂಡಗಳು ಮತ್ತು ಪರಿಶುದ್ಧತೆಯ ದೃಷ್ಟಿಯಿಂದ ಎಲ್ಡಿಯಾ ಗೋಲ್ಡ್ ವಿನ್ನರ್‌ನ ಸಂಪೂರ್ಣ ಪ್ರತಿಬಿಂಬವಾಗಿದೆ. ಈ ಬ್ರಾಂಡ್‌ನ ಗ್ರಾಹಕರು ಶುದ್ಧ ಮತ್ತು ನೈಸರ್ಗಿಕ ಕೊಬ್ಬರಿ ಎಣ್ಣೆಯ ರೂಪದಲ್ಲಿರುವ ಈ ಸೊಗಸಾದ ಉತ್ಪನ್ನವನ್ನು ಬಳಸಿ ನೋಡಬಹುದು. ಉತ್ಪನ್ನದ ಸ್ವರೂಪವನ್ನು ನಮಗೆ ತಿಳಿಸುವ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅದರ ಉತ್ತಮ ಸುವಾಸನೆ. ಸುವಾಸನೆ ನವಿರಾಗಿದ್ದಷ್ಟು, ಅದರ ಪರಿಣಾಮ ಹೆಚ್ಚಾಗಿರುತ್ತದೆ, ಇದನ್ನು, ಎಲ್ಡಿಯಾ ಕೊಬ್ಬರಿ ಎಣ್ಣೆ ಪೂರೈಸುತ್ತದೆ.
ಗೋಲ್ಡ್ ವಿನ್ನರ್‌ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ ನಮ್ಮ ದೇಶದ ಉತ್ಪನ್ನವಾಗಿದೆ. ಕೇಶ ರಕ್ಷಣೆ ಅಥವಾ ಚರ್ಮದ ರಕ್ಷಣೆಯ ವಿಷಯ ಬಂದಾಗಲೆಲ್ಲಾ, ನಮ್ಮ ಹಿರಿಯರು ಕೊಬ್ಬರಿ ಎಣ್ಣೆಯನ್ನು ಮಾತ್ರ ಎದುರು ನೋಡುತ್ತಿದ್ದರು, ಏಕೆಂದರೆ ಇದು ಬಹುವಿಧದ ಪ್ರಯೋಜನಗಳೊಂದಿಗೆ ಬರುತ್ತದೆ. ಇಲ್ಲಿ, ತೈಲ ತಯಾರಿಕೆಯ ಪ್ರಕ್ರಿಯೆಯ ಪ್ರತಿಯೊಂದು ಹಂತವು, ಅದರ ಪದಾರ್ಥಗಳಿಂದ ಹಿಡಿದು ಕೌಶಲ್ಯದವರೆಗೆ ಎಲ್ಲವೂ ಶುದ್ಧವಾಗಿರಬೇಕು. ನಾವು, ನಮ್ಮ ಸಂಸ್ಕರಣಾಗಾರದಲ್ಲಿ, ಉತ್ಪನ್ನದ ಗುಣಮಟ್ಟವನ್ನು ನೋಡಿಕೊಳ್ಳುವ ಬಗ್ಗೆ ಬಹಳ ಜಾಗರೂಕರಾಗಿರುತ್ತೇವೆ. ಎಲ್ಲಾ ಉತ್ಪನ್ನಗಳು, ವಿಶೇಷವಾಗಿ ನಮ್ಮ ಕೊಬ್ಬರಿ ಎಣ್ಣೆ ರಾಸಾಯನಿಕ ಮುಕ್ತವಾಗಿದೆ. ಪ್ರತಿಯೊಂದು ಉತ್ಪನ್ನದಲ್ಲೂ ನಾವು ಗುಣಮಟ್ಟವನ್ನು ವಿತರಿಸುವ ನಮ್ಮ ಬಲವಾದ ನಂಬಿಕೆಗೆ ತಕ್ಕಂತೆ ಇರಲು ಪ್ರಯತ್ನಿಸುತ್ತೇವೆ, ಹಾಗೇ, ನಾವು ನಮ್ಮ ಪ್ರತಿಯೊಂದು ಉತ್ಪನ್ನಗಳನ್ನು ಕೃತಜ್ಞತೆ ಮತ್ತು ಕಾಳಜಿಯಿಂದ ಪ್ಯಾಕೇಜ್ ಮಾಡುತ್ತೇವೆ.
ಕೊಬ್ಬರಿ ಎಣ್ಣೆ ಏಕೆ?
ಚರ್ಮ ಮತ್ತು ಕೇಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ನೀವು ಒಂದೆಡೆ ಪರಿಹಾರವನ್ನು ಹುಡುಕುತ್ತಿದ್ದರೆ, ಕೊಬ್ಬರಿ ಎಣ್ಣೆಗಿಂತ ಉತ್ತಮವಾದದ್ದು ಇನ್ನೇನು ಬೇಕು. ತೈಲ ಸಂಯುಕ್ತಗಳ ಆರೋಗ್ಯಕರ ರೂಪಗಳಲ್ಲಿರುವ ಇದು ಮನುಜ ಕುಲಕ್ಕೆ ಆಶೀರ್ವಾದವಾಗಿ ದೊರಕಿದೆ. ಉಷ್ಣವಲಯದ ಪ್ರದೇಶಗಳಲ್ಲಿ ಕೊಬ್ಬರಿ ಎಣ್ಣೆಯ ಉತ್ಪಾದನೆಯು ಅಪಾರವಾಗಿದೆ, ಆದ್ದರಿಂದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಉದ್ದವಾದ, ರೇಷ್ಮೆಯಂತಹ ಕೂದಲು ಇರುತ್ತದೆ. ಕೊಬ್ಬರಿ ಎಣ್ಣೆಯಿಂದಾಗಿ ಈ ಬೆಣ್ಣೆಯಂತಹ ವಿನ್ಯಾಸ ಸಿಗುತ್ತದೆ. ಇದು ಕೂದಲನ್ನು ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಎಳೆಗಳಿಗೆ ಹೊಳೆಯುವ ಹೊಳಪನ್ನು ನೀಡುತ್ತದೆ. ಕೊಬ್ಬರಿ ಎಣ್ಣೆಯ ಮತ್ತೊಂದು, ಆಸಕ್ತಿದಾಯಕ ವಿಷಯವೆಂದರೆ, ಇದನ್ನು ಜಗತ್ತಿನಾದ್ಯಂತ ಕೇಶ ಪೋಷಕ ಎಣ್ಣೆಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ, ಮತ್ತು ಹಲವಾರು ಕಂಡಿಷನರ್‌ಗಳು ಮತ್ತು ತಲೆಹೊಟ್ಟು-ನಿವಾರಕ ಲೋಷನ್‌ಗಳ ಉತ್ಪಾದನೆಗೆ ಇದು ಅತ್ಯಗತ್ಯ ಅಂಶವಾಗಿದೆ. ನಿಮ್ಮ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿ ನಿಯಮಿತವಾಗಿ ಮಸಾಜ್ ಮಾಡುವುದರಿಂದ ತಲೆಹೊಟ್ಟು ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ವ್ಯಾಪಕವಾಗಿ ಹೇಳಲಾಗುತ್ತದೆ. ಇದಲ್ಲದೆ, ನಿಮ್ಮ ತಲೆಗೆ ಮತ್ತು ಕೂದಲಿಗೆ ಹೇನು ಹತ್ತದಂತೆ ಸಹ ಇದು ಸಹಾಯ ಮಾಡುತ್ತದೆ.
ಚರ್ಮದ ರಕ್ಷಣೆಯ ಬಗ್ಗೆ ಹೇಳಬೇಕೆಂದರೆ, ಕೊಬ್ಬರಿ ಎಣ್ಣೆ ಎಲ್ಲಾ ರೀತಿಯ ಚರ್ಮಕ್ಕೂ ಅದ್ಭುತವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ನವಚೈತನ್ಯ ತುಂಬುವ, ಉತ್ಕರ್ಷಣ ನಿರೋಧಕ ಮತ್ತು ಉರಿಯೂತ-ವಿರೋಧಿ ಗುಣಲಕ್ಷಣಗಳು ಹೇರಳವಾಗಿದೆ. ಶುದ್ಧ ಕೊಬ್ಬರಿ ಎಣ್ಣೆಯು ಶುಷ್ಕ ಚರ್ಮ ಸೇರಿದಂತೆ ಎಲ್ಲಾ ರೀತಿಯ ಚರ್ಮಗಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ಸುಟ್ಟಗಾಯಗಳನ್ನು ಗುಣಪಡಿಸಲು ಇದು ಅಸಾಧಾರಣ ಅಂಶವಾಗಿದೆ. ನಿಯಮಿತವಾಗಿ ನಯವಾಗಿ ಹಚ್ಚುವುದರಿಂದ, ಗಾಯಗಳನ್ನು ಗುಣಪಡಿಸುವುದಲ್ಲದೆ ಕ್ರಮೇಣ ಚರ್ಮದ ಸುಟ್ಟ ಗುರುತು ತೆಗೆಯಲು ಸಹಾಯ ಮಾಡುತ್ತದೆ. ಚರ್ಮದ ಗುಣಮಟ್ಟವನ್ನು ಸುಧಾರಿಸುವಲ್ಲಿ ಈ ಎಣ್ಣೆಯದ್ದು ಪವಾಡಸದೃಶ ಕೆಲಸ ಎಂದೇ ಹೇಳಬಹುದು.
ಇಲ್ಲೇ ಗೋಲ್ಡ್ ವಿನ್ನರ್‌ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ ಕಾರ್ಯರೂಪಕ್ಕೆ ಬರುತ್ತದೆ. ಎಲ್ಡಿಯಾದ ಕಲಬೆರಕೆಯಿಲ್ಲದ ನೈಸರ್ಗಿಕ ಸುವಾಸನೆಯು ಅದರ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಆಶ್ಚರ್ಯವೇನಿಲ್ಲ, ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯನ್ನು ಶಿಶುಗಳಿಂದ ಹಿರಿಯರವರೆಗೆ ಮತ್ತು ನಗರಗಳಿಂದ ಉಪನಗರಗಳವರೆಗೆ, ಅವರ ಕೂದಲಿಗೆ ಮಾತ್ರವಲ್ಲ, ಒಣ ಚರ್ಮ, ದೇಹದ ಮಸಾಜ್ ಇತ್ಯಾದಿಗಳಿಗೂ ಸಹ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಚರ್ಮ ಮತ್ತು ಕೂದಲು ರೋಗಗಳ ವಿರುದ್ಧ ಕಲಸ ಮಾಡಲು ಸಹಾಯ ಮಾಡುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸ್ಪರ್ಶಿಸಲು ಮೃದುವಾಗಿರುತ್ತದೆ ಮತ್ತು ಅದರ ನವಿರಾದ ಮಸಾಜ್ ಮಗುವಿನ ಚರ್ಮವನ್ನು ಚೆನ್ನಾಗಿ ಪೋಷಿಸುತ್ತದೆ.
ಅತ್ಯಾಕರ್ಷಕ ಕೊಡುಗೆಗಳು
ನಾವು ಈಗ ಅತ್ಯಾಕರ್ಷಕ ಆಫರ್ ಗಳನ್ನು ಕೊಡುತ್ತಿದ್ದೇವೆ. ನೀವು ಗೋಲ್ಡ್ ವಿನ್ನರ್‌ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯ 200 ಎಂಎಲ್ ಬಾಟಲ್ ಖರೀದಿಸಿದರೆ ನೀವು 200 ಎಂಎಲ್ ಗೋಲ್ಡ್ ವಿನ್ನರ್ ಎಣ್ಣೆಯನ್ನು ಉಚಿತವಾಗಿ ಪಡೆಯುತ್ತೀರಿ, ಮತ್ತು ನೀವು ಗೋಲ್ಡ್ ವಿನ್ನರ್‌ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯ 100 ಎಂಎಲ್ ಬಾಟಲ್ ಖರೀದಿಸಿದಾಗ ನೀವು 100 ಎಂಎಲ್ ಗೋಲ್ಡ್ ವಿನ್ನರ್ ಎಣ್ಣೆಯನ್ನು ಉಚಿತವಾಗಿ ಪಡೆಯುತ್ತೀರಿ. ಎಲ್ಡಿಯಾ ಎಣ್ಣೆ ಈಗ ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿದೆ. ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ kaleesuwari.com ಆಫರ್ ಲಭ್ಯವಿದೆ.
ಈ ಲೇಖನವು ಪ್ರಾಯೋಜಿತ ವಿಷಯ ಕಾರ್ಯಕ್ರಮದ ಭಾಗವಾಗಿದೆ.