ಫ್ಯೂಚರ್-ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ದೆಹಲಿ ಹೈಕೋರ್ಟ್

ಅಮೆಜಾನ್ ನಿಂದ ಎಫ್ ಆರ್ ಎಲ್ ಹಾಗೂ ರಿಲಯನ್ಸ್ ವಿರುದ್ಧ ಸಿವಿಲ್ ತಪ್ಪಾಗಿದೆ. ಒಂದು ವೇಳೆ ಇದರಿಂದ ನಷ್ಟ ಏರ್ಪಟ್ಟಲ್ಲಿ ಫ್ಯೂಚರ್-ರಿಲಯನ್ಸ್ ಕಂಪೆನಿಗಳು ಅಮೆಜಾನ್ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.
ಕಿಶೋರ್ ಬಿಯಾನಿ-ಮುಕೇಶ್
ಕಿಶೋರ್ ಬಿಯಾನಿ-ಮುಕೇಶ್

ನವದೆಹಲಿ: ಕಂಪೆನಿ ಕಾಯ್ದೆಯ ಕಾನೂನು ನಿಯಮಗಳು ಮತ್ತು ಸೆಬಿ ನಿಬಂಧನೆಗಳಿಗೆ ಎಲ್ಲಿಯ ತನಕ ಫ್ಯೂಚರ್ ರೀಟೇಲ್ ಲಿಮಿಟೆಡ್(ಎಫ್ಆರ್ ಎಲ್) ಸಲ್ಲಿಸಿದ ಯೋಜನೆ(ಸ್ಕೀಮ್) ಒಳಪಟ್ಟಿರುತ್ತದೋ ಅದನ್ನು ಸೆಬಿ ಮಂಜೂರು ಮಾಡಲೇಬೇಕು. ಅಮೆಜಾನ್ ಸಲ್ಲಿಸಿರುವ ಆಕ್ಷೇಪವು ಸೆಬಿಯನ್ನು ಸ್ಕೀಮ್ ಗೆ ಮಂಜೂರು ಮಾಡುವುದರಿಂದ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಎಫ್ ಆರ್ ಎಲ್ ಮಂಡಳಿಯು ನಿರ್ಣಯ ತೆಗೆದುಕೊಂಡು, ಸ್ಕೀಮ್ ಗೆ ಒಪ್ಪಿಕೊಂಡಿದೆ ಮತ್ತು ರಿಲಯನ್ಸ್ ಗೆ ವ್ಯವಹಾರ ಮಾರಾಟ ಮಾಡುವುದು ನ್ಯಾಯಬದ್ಧವಾಗಿದೆ ಮತ್ತು ಕಾನೂನು ನಿಯಮಾವಳಿಗೆ ಅನುಸಾರವಾಗಿದೆ. ಅಮೆಜಾನ್ ವಾದಿಸುತ್ತಿರುವಂತೆ ಕಾನೂನಿಗೆ ವಿರುದ್ಧವಾಗಿಲ್ಲ.

ಅಮೆಜಾನ್ ನಿಂದ ಫೆಮಾ ಮತ್ತು ಎಫ್ ಡಿಐ ನಿಯಮಾವಳಿ ಉಲ್ಲಂಘನೆ ಆಗಿದೆ. ಷೇರುದಾರರ ಒಪ್ಪಂದವನ್ನು ಒಟ್ಟಾಗಿ ನೋಡಿದರೆ, ಎಫ್ ಆರ್ ಎಲ್ ಮೇಲೆ "ಹತೋಟಿ" ಸಾಧಿಸಿರುವುದು ತಿಳಿಯುತ್ತದೆ. ಸರ್ಕಾರದ ಅನುಮತಿ ಇಲ್ಲದೆ ಇದು ಫೆಮಾ ಮತ್ತು ಎಫ್ ಡಿಐ ನಿಯಮಾವಳಿಗೆ ವ್ಯತಿರಿಕ್ತವಾಗಿದೆ. 

ಅಮೆಜಾನ್ ನಿಂದ ಎಫ್ ಆರ್ ಎಲ್ ಹಾಗೂ ರಿಲಯನ್ಸ್ ವಿರುದ್ಧ ಸಿವಿಲ್ ತಪ್ಪಾಗಿದೆ. ಒಂದು ವೇಳೆ ಇದರಿಂದ ನಷ್ಟ ಏರ್ಪಟ್ಟಲ್ಲಿ  ಆ ಎರಡೂ ಕಂಪೆನಿಗಳು ಅಮೆಜಾನ್ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಕಾನೂನು ಪ್ರಾಧಿಕಾರಗಳು- ಸೆಬಿಗೆ  ಅರ್ಜಿ/ಆಕ್ಷೇಪಣೆಗೆ ಕಾನೂನು ಅನ್ವಯ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಫ್ಯೂಚರ್ ಸಮೂಹವು ಆಗಸ್ಟ್‌ನಲ್ಲಿ ತನ್ನ ರಿಟೈಲ್ ಸಂಪತ್ತನ್ನು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ಗೆ 3.4 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ ವೇಳೆಯಿಂದ ಅಮೆಜಾನ್ ಹಾಗೂ ಫ್ಯೂಚರ್ ನಡುವೆ ಕಾನೂನಾತ್ಮಕ ತಿಕ್ಕಾಟ ನಡೆಯುತ್ತಿದೆ. ಈ ವ್ಯವಹಾರವು 2019ರಲ್ಲಿ ಫ್ಯೂಚರ್ ಸಮೂಹವು ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಮೆಜಾನ್ ದೂರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com