ಐದೇ ದಿನಗಳಲ್ಲಿ 32 ಲಕ್ಷ ಗ್ರಾಹಕರಿಗೆ 1.1 ಕೋಟಿ ಸರಕುಗಳನ್ನು ಮಾರಾಟ ಮಾಡಿದ ಮಿಂತ್ರ!

ಫ್ಯಾಷನ್ ಇ-ಕಾಮರ್ಸ್ ವೇದಿಕೆಯಾಗಿರುವ ಮಿಂತ್ರ ಕೇವಲ 5 ದಿನಗಳಲ್ಲಿ 32 ಲಕ್ಷ ಗ್ರಾಹಕರಿಗೆ 1.1 ಕೋಟಿ ಸರಕುಗಳನ್ನು ಮಾರಾಟ ಮಾಡಿದೆ. 
ಮಿಂತ್ರ ಸಿಇಒ
ಮಿಂತ್ರ ಸಿಇಒ

ಬೆಂಗಳೂರು: ಫ್ಯಾಷನ್ ಇ-ಕಾಮರ್ಸ್ ವೇದಿಕೆಯಾಗಿರುವ ಮಿಂತ್ರ ಕೇವಲ 5 ದಿನಗಳಲ್ಲಿ 32 ಲಕ್ಷ ಗ್ರಾಹಕರಿಗೆ 1.1 ಕೋಟಿ ಸರಕುಗಳನ್ನು ಮಾರಾಟ ಮಾಡಿದೆ. 

ಡಿ.24 ರಂದು ಅಂತ್ಯಗೊಂಡ 13 ನೇ ಆವೃತ್ತಿಯ 5 ದಿನಗಳ ರೀಸನ್ ಸೇಲ್ ನಲ್ಲಿ ಭರ್ಜರಿ 1.1 ಕೋಟಿ ಮೌಲ್ಯದ ಸರಕನ್ನು 32 ಲಕ್ಷ ಮಂದಿ ಗ್ರಾಹಕರಿಗೆ ಮಾರಾಟ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ. 

ಕಳೆದ ಚಳಿಗಾಲದ ಅವಧಿಗಿಂತಲೂ ಫ್ಯಾಷನ್ ಕಾರ್ನಿವಲ್ ಗಿಂತಲೂ ಈ ಬಾರಿ ಶೇ.51 ರಷ್ಟು ಏರಿಕೆಯಾಗಿದ್ದು 50 ಲಕ್ಷಕ್ಕೂ ಮೀರಿದ ಆರ್ಡರ್ ಗಳು ಬಂದಿವೆ.

ಪ್ರತಿ ನಿಮಿಷಕ್ಕೆ 19,000 ಸರಕುಗಳು ಮಾರಾಟವಾಗಿತ್ತು ಇದು ವ್ಯಾಪಾರದ ಉತ್ತಂಗವಾಗಿತ್ತು. ಹತ್ತಿರ ಹತ್ತಿರ 4.3 ಕೋಟಿ ಯುನೀಕ್ ವಿಸಿಟರ್ ಗಳು ಮಿಂತ್ರಾ ವೇದಿಕೆಗೆ ಭೇಟಿ ನೀಡಿದ್ದು, ಶೇ.54 ರಷ್ಟು ಹೊಸ ಗ್ರಾಹಕರು ಟಯರ್ 2, 3 ಕ್ಕಿಂತ ಹೆಚ್ಚು ನಗರಗಳಿಂದ ವ್ಯಾಪಾರ ವಹಿವಾಟುಗಳನ್ನು ನಡೆಸಿದ್ದಾರೆ ಎಂದು ಹೇಳಿದ್ದಾರೆ. 2.5 ಮಿಲಿಯನ್ ಗೂ ಸರಕುಗಳು ಮಹಿಳೆಯರಿಗೆ ಸಂಬಂಧಿಸಿದ ಪಾಶ್ಚಿಮಾತ್ಯ ಉಡುಗೆಗಳಾಗಿದ್ದು, ಗ್ರಾಹಕರಿಗೆ ನೆಚ್ಚಿನದ್ದಾಗಿತ್ತು ಎಂದು ಮಿಂತ್ರಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com