ಏರ್ ಇಂಡಿಯಾ ಖರೀದಿಗೆ ಕಣ್ಣು: ಏರ್ ಏಷ್ಯಾ ಇಂಡಿಯಾ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದ ಟಾಟಾ ಗ್ರೂಪ್!
ಮಲೇಷಿಯಾ ಮೂಲದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ ಗ್ರೂಪ್ ಬರ್ಹಡ್ ಶೇಕಡಾ 32.67ರಷ್ಟು ಷೇರುಗಳನ್ನು ಏರ್ ಏಷ್ಯಾ ಇಂಡಿಯಾಗೆ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೆ 37.7 ಡಾಲರ್ ಮಿಲಿಯನ್ ಗಳನ್ನು ಷೇರುಗಳನ್ನು ಟಾಟಾ ಸನ್ಸ್ ಗೆ ಮಾರಾಟ ಮಾಡಲು ನಿಶ್ಚಯಿಸಿದೆ.
Published: 30th December 2020 02:15 PM | Last Updated: 30th December 2020 03:08 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಮಲೇಷಿಯಾ ಮೂಲದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ ಗ್ರೂಪ್ ಬರ್ಹಡ್ ಶೇಕಡಾ 32.67ರಷ್ಟು ಷೇರುಗಳನ್ನು ಏರ್ ಏಷ್ಯಾ ಇಂಡಿಯಾಗೆ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೆ 37.7 ಡಾಲರ್ ಮಿಲಿಯನ್ ಗಳನ್ನು ಷೇರುಗಳನ್ನು ಟಾಟಾ ಸನ್ಸ್ ಗೆ ಮಾರಾಟ ಮಾಡಲು ನಿಶ್ಚಯಿಸಿದೆ.
ಇದರಿಂದಾಗಿ ಟಾಟಾ ದ ಷೇರುಗಳು ಏರ್ ಏಷ್ಯಾ ಇಂಡಿಯಾದಲ್ಲಿ ಶೇಕಡಾ ಶೇಕಡಾ 51ರಿಂದ ಶೇಕಡಾ 83.6ಕ್ಕೆ, ಮತ್ತು ಏರ್ ಏಷ್ಯಾ ಗ್ರೂಪ್ ನ ಷೇರುಗಳು ಶೇಕಡಾ 49ರಿಂದ ಶೇಕಡಾ 16.33ಕ್ಕೆ ಇಳಿಕೆಯಾಗಲಿದೆ. ಟಾಟಾ ಮತ್ತಷ್ಟು ಷೇರುಗಳನ್ನು ಖರೀದಿಸಲಿದೆ. ಶೇಕಡಾ 16.33ರಷ್ಟು ಪಡೆಯಲಿದೆ.
ಏರ್ ಇಂಡಿಯಾದಲ್ಲಿ ತನ್ನ ಹೂಡಿಕೆಗೆ ಆಸಕ್ತಿ ತೋರಿಸಿ ಎರಡು ವಾರಗಳ ಹಿಂದೆ ಟಾಟಾ ಗ್ರೂಪ್ ಬಿಡ್ ಸಲ್ಲಿಸಿತ್ತು. ನಿನ್ನೆ ಈ ಬಿಡ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಏರ್ ಇಂಡಿಯಾ ಖರೀದಿಸಲು ಟಾಟಾ ಏರ್ ಏಷ್ಯಾ ಇಂಡಿಯಾವನ್ನು ಬಳಸುವ ಸಾಧ್ಯತೆಯಿದೆ.
ಕೋವಿಡ್-19 ಸಾಂಕ್ರಾಮಿಕ ಸಂಬಂಧಿತ ಸಮಸ್ಯೆಗಳಿಂದಾಗಿ ಏರ್ ಏಷ್ಯಾ ಈ ಹಿಂದೆ ಜಪಾನ್‌ನಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಏರ್‌ಏಷಿಯಾ ಗ್ರೂಪ್‌ನ ಅಧ್ಯಕ್ಷ (ಏರ್‌ಲೈನ್ಸ್) ಬೊ ಲಿಂಗಮ್, “ಈ ವಹಿವಾಟು ನಮಗೆ ಆಸಿಯಾನ್‌ನಲ್ಲಿನ ನಮ್ಮ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಹಣವನ್ನು ಬಳಸುವುದರ ಜೊತೆಗೆ ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ವಿಯೆಟ್ನಾಂಗಳಲ್ಲಿ ನಮ್ಮ ಭವಿಷ್ಯದ ವಿಸ್ತರಣೆಗೆ ಅವಕಾಶ ನೀಡುತ್ತದೆ ಎಂದಿದ್ದಾರೆ.