ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಚೀನಾ ಪಾನೀಯ ಕಂಪನಿ ದೊರೆ ಜಾಂಗ್ ಶನ್ಶನ್ ಈಗ 'ಏಷ್ಯಾದ ಅತ್ಯಂತ ಶ್ರೀಮಂತ'!

ಚೀನಾದ ಬಿಲಿಯನೇರ್ ಉದ್ಯಮಿ ಜಾಂಗ್ ಶನ್ಶನ್ ಇದೀಗ ಏಷ್ಯಾದ ಅತ್ಯಂತ ಶ್ರೀಮಂತನ ಪಟ್ಟಕ್ಕೇರಿದ್ದಾರೆ. ಭಾರತದ ಮುಖೇಶ್ ಅಂಬಾನಿ, ತಮ್ಮದೇ ದೇಶದ ಜಾಕ್ ಮಾ ಅವರನ್ನೂ ಹಿಂದಿಕ್ಕಿ ಈ ಸ್ಥಾನ ಅಲಂಕರಿಸಿದ್ದಾರೆ.
ಜಾಂಗ್ ಶನ್ಶನ್
ಜಾಂಗ್ ಶನ್ಶನ್

ಬೀಜಿಂಗ್: ಚೀನಾದ ಬಿಲಿಯನೇರ್ ಉದ್ಯಮಿ ಜಾಂಗ್ ಶನ್ಶನ್ ಇದೀಗ ಏಷ್ಯಾದ ಅತ್ಯಂತ ಶ್ರೀಮಂತನ ಪಟ್ಟಕ್ಕೇರಿದ್ದಾರೆ. ಭಾರತದ ಮುಖೇಶ್ ಅಂಬಾನಿ, ತಮ್ಮದೇ ದೇಶದ ಜಾಕ್ ಮಾ ಅವರನ್ನೂ ಹಿಂದಿಕ್ಕಿ ಈ ಸ್ಥಾನ ಅಲಂಕರಿಸಿದ್ದಾರೆ.

66 ವರ್ಷದ ಜಾಂಗ್ ಅವರ ನಿವ್ವಳ ಆಸ್ತಿ ಮೌಲ್ಯವು 2020 ರಲ್ಲಿ 70.9 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿ77.8 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಹೇಳಿದೆ.  ಈ ಪ್ರಕಾರ ಜಾಂಗ್ ಇದೀಗ ವಿಶ್ವದ 11 ನೇ ಶ್ರೀಮಂತ ವ್ಯಕ್ತಿ.

ಜಾಂಗ್ ಚೀನಾದ ಅತಿದೊಡ್ಡ ಪಾನೀಯ ಕಂಪನಿಯಾದ  'ನಾಂಗ್‌ಫು ಸ್ಪ್ರಿಂಗ್ ಕಂಪನಿ' ಸ್ಥಾಪಿಸಿದರು. ಅವರು ಚೀನಾದ ಪ್ರಮುಖ ಫಾರ್ಮಾ ಸಂಸ್ಥೆಯಾಗಿರುವ  ವಾಂಟೈ ಬಯೋಲಾಜಿಕಲ್ ಫಾರ್ಮಸಿ ಯ ಮಾಲೀಕರೂ ಆಗಿದ್ದಾರೆ.

ಬಾಟಲಿ ನೀರಿನ ತಯಾರಕ ಸಂಸ್ಥೆ ನಾಂಗ್‌ಫು ಹಾಂಗ್ ಕಾಂಗ್‌ನ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಸಂಸ್ಥೆ ಷೇರುಪೇಟೆ ಪ್ರವೇಶಿಸಿದಾಗಿನಿಂದ ಶೇಕಡಾ 155 ರಷ್ಟು ಜಿಗಿತ ಕಂಡಿದೆ. ಲಸಿಕೆ ಕಂಪನಿಯ ಷೇರುಗಳು ಶೇಕಡಾ 2,000 ಕ್ಕಿಂತ ಹೆಚ್ಚಾಗಿದೆ. ನಾಂಗ್‌ಫು  ಸ್ಟಾಕ್ ಮಾರ್ಕೆಟ್ ಬ್ಲಾಕ್‌ಬಸ್ಟರ್ ಜಾಂಗ್ ಅವರ ಸ್ಥಾನವನ್ನು ಬಲಪಡಿಸಿತು. ಅವರ ಲಸಿಕೆ ತಯಾರಿಸುವ ಸಂಸ್ಥೆ ಕೋವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹ ತೊಡಗಿಸಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಆಸ್ತಿ 76.9 ಬಿಲಿಯನ್ ಡಾಲರ್ ಆಗಿದೆ. ಜಾಗತಿಕವಾಗಿ, ಅವರು ಈಗ ವಿಶ್ವದ 12 ನೇ ಶ್ರೀಮಂತರಾಗಿದ್ದಾರೆ. ಅವರ ನಿವ್ವಳ ಮೌಲ್ಯವು 18.3 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com