ಗ್ರಾಹಕರೇ ಬಿಲ್ ಕೇಳಿ! ಜಿಎಸ್‌ಟಿ ಲಾಟರಿ ಬಹುಮಾನವನ್ನು 10 ಲಕ್ಷದಿಂದ 1 ಕೋಟಿ ರೂಗೆ ಹೆಚ್ಚಿಸಲು ಸರ್ಕಾರ ಚಿಂತನೆ

ಗ್ರಾಹಕರು ಖರೀದಿಸಿದ ವತುಗಳ ಬಿಲ್ ಗಳನ್ನು ಕೇಳೀ ಪಡೆದುಕೊಳ್ಳುವಂತೆ ಮಾಡುವ ಸಲುವಾಗಿ ಸಾರ್ವಜನಿಕರನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ  ಜಿಎಸ್‌ಟಿ ಅಡಿಯಲ್ಲಿ ಲಾಟರಿ ಕೊಡುಗೆಗಳನ್ನು 10 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಏರಿಸಲು ಸರ್ಕಾರ ಯೋಜಿಸಿದೆ.

Published: 04th February 2020 05:07 PM  |   Last Updated: 04th February 2020 05:07 PM   |  A+A-


Posted By : Raghavendra Adiga
Source : PTI

ನವದೆಹಲಿ: ಗ್ರಾಹಕರು ಖರೀದಿಸಿದ ವತುಗಳ ಬಿಲ್ ಗಳನ್ನು ಕೇಳೀ ಪಡೆದುಕೊಳ್ಳುವಂತೆ ಮಾಡುವ ಸಲುವಾಗಿ ಸಾರ್ವಜನಿಕರನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ  ಜಿಎಸ್‌ಟಿ ಅಡಿಯಲ್ಲಿ ಲಾಟರಿ ಕೊಡುಗೆಗಳನ್ನು 10 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಏರಿಸಲು ಸರ್ಕಾರ ಯೋಜಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಡಳಿತದಡಿ ಪ್ರತಿ ಬಿಲ್ ಸಹ ಗ್ರಾಹಕರಿಗೆ ಲಾಟರಿ ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ ಮತ್ತು ಇದು ತೆರಿಗೆ ಪಾವತಿಸಲು ಅವರಿಗೆ ಉತ್ತೇಜನಕಾರಿಯಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ (ಸಿಬಿಐಸಿ) ಸದಸ್ಯ ಜಾನ್ ಜೋಸೆಫ್ ಹೇಳಿದರು. .ನಾವು ಹೊಸ ಲಾಟರಿ ವ್ಯವಸ್ಥೆ ಪರಿಚಯಿಸಲು ಯೋಜಿಸಿದ್ದೇವೆ.ಜಿಎಸ್‌ಟಿಅಡಿಯಲ್ಲಿ ಪ್ರತಿ ಬಿಲ್ ಸಹ  ಲಾಟರಿ ಟಿಕೆಟ್ ನಂತೆ ಇರಲಿದೆ. ಇದು ಡ್ರಾಗೆ ಹೋಗಲಿದ್ದು ಇದಕ್ಕೆ ಬಹುಮಾನವಾಗಿ  1 ಕೋಟಿಗೆಲ್ಲುವ ಅವಕಾಶ ಒದಗಿಸಲಾಗುವುದು.  ಇದು ಗ್ರಾಹಕರ ನಡವಳಿಕೆಯನ್ನು ಬದಲಿಸುವ ಪ್ರಯತ್ನವಾಗಿದೆ"

ಯೋಜನೆಯ ಪ್ರಕಾರ, ಖರೀದಿಸಿದ ಬಿಲ್ ಅನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಡ್ರಾ ಸ್ವಯಂಚಾಲಿತವಾಗಿ ನಡೆಯುವುದಲ್ಲದೆ ವಿಜೇತರಿಗೆ ಅದರ ಮಾಹಿತಿ ಲಭಿಸಲಿದೆ. ಲ್ಕು ಹಂತದ ಜಿಎಸ್‌ಟಿ ಅಡಿಯಲ್ಲಿ ಸರಕು ಮತ್ತು ಸೇವೆಗಳಿಗೆ ಶೇ 5, 12, 18 ಮತ್ತು 28 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದಲ್ಲದೆ, ಅತಿ ಹೆಚ್ಚು ತೆರಿಗೆ ದರದ ಮೇಲೆ ಐಷಾರಾಮಿ,ಸಿನ್ ಹಾಗೂ  ಡಿಮೆರಿಟ್ ಸರಕುಗಳ ಮೇಲೆ ಸೆಸ್ ವಿಧಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಸಹವರ್ತಿಗಳನ್ನು ಒಳಗೊಂಡ ಜಿಎಸ್ಟಿ ಕೌನ್ಸಿಲ್ ಪ್ರಸ್ತಾವಿತ ಲಾಟರಿ ಯೋಜನೆ ಪರಿಶೀಲನೆ ನಡೆಸಲಿದೆ. 

ಲಾಟರಿಯಲ್ಲಿ ಸೇರಿಸಲಾಗುವ ಬಿಲ್ ಗಳಿಗೆ ಕನಿಷ್ಠ ಮಿತಿಯನ್ನು ಕೌನ್ಸಿಲ್ ನಿರ್ಧರಿಸುತ್ತದೆ.ಯೋಜನೆಯ ಪ್ರಕಾರ, ಲಾಟರಿಗಾಗಿ ಹಣವು ಗ್ರಾಹಕ ಕಲ್ಯಾಣ ನಿಧಿಯಿಂದ ಬರುತ್ತದೆ, ಅಲ್ಲಿ ಆಂಟಿ ಪ್ರಾಫಿಟ್ ಬಿಲ್ ಆದಾಯವನ್ನು ವರ್ಗಾಯಿಸಲಾಗುತ್ತದೆ.ಜಿಎಸ್‌ಟಿಆದಾಯದಲ್ಲಿ ಸೋರಿಕೆ ತಡೆಯಲು ರವು ಲಾಟರಿಗಳು ಮತ್ತು ಕ್ಯೂಆರ್ ಕೋಡ್ ಆಧಾರಿತ ವಹಿವಾಟುಗಳನ್ನು ಉತ್ತೇಜಿಸುವುದು ಸೇರಿದಂತೆ  ಝಲವು ಕ್ರಮಗಳಿಗೆ ಮುಂದಾಗಿದೆ. 

Stay up to date on all the latest ವಾಣಿಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp