ಎನ್‌ಪಿಎ ಬಿಕ್ಕಟ್ಟನ್ನು ಸೃಷ್ಟಿಸಿದವರಿಂದ ನಾವೇನೂ ಕಲಿಯಬೇಕಿಲ್ಲ: ಚಿದಂಬರಂಗೆ ವಿತ್ತ ಸಚಿವೆ ತಿರುಗೇಟು

 ಅವಳಿ ಬ್ಯಾಲೆನ್ಸ್ ಶಿಟ್ ಬಿಕ್ಕಟ್ಟಿನೊಡನೆ ಪರ್ವತ ಶಿಖರದಷ್ಟು ಎನ್‌ಪಿಎಯನ್ನು ನೀಡಿದವರಿಂದ ನಾವು ಕಲಿಯಬೇಕಾಗಿರುವುದು ಏನೂ ಇಲ್ಲ ಎಂದು  ಹಣಕಾಸು ಸಚಿವೆ ನಿರ್ಮಲಾ  ಸೀತಾರಾಮನ್ಹೇಳಿದ್ದಾರೆ. ಈ ಮೂಲಕ ಅವರು ಮಾಜಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರ ಆರ್ಥಿಕ ನೀತಿಗಳನ್ನು ಕುಟುಕಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಅವಳಿ ಬ್ಯಾಲೆನ್ಸ್ ಶಿಟ್ ಬಿಕ್ಕಟ್ಟಿನೊಡನೆ ಪರ್ವತ ಶಿಖರದಷ್ಟು ಎನ್‌ಪಿಎಯನ್ನು ನೀಡಿದವರಿಂದ ನಾವು ಕಲಿಯಬೇಕಾಗಿರುವುದು ಏನೂ ಇಲ್ಲ ಎಂದು  ಹಣಕಾಸು ಸಚಿವೆ ನಿರ್ಮಲಾ  ಸೀತಾರಾಮನ್ಹೇಳಿದ್ದಾರೆ. ಈ ಮೂಲಕ ಅವರು ಮಾಜಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರ ಆರ್ಥಿಕ ನೀತಿಗಳನ್ನು ಕುಟುಕಿದ್ದಾರೆ.

ರಾಜ್ಯಸಭೆಯಲ್ಲಿ 2020-21ರ ಬಜೆಟ್ ಕುರಿತ ಚರ್ಚೆಗೆ ಉತ್ತರಿಸಿದ ಅವರು "2012-13ರಲ್ಲಿ ಸಮರ್ಥ ವೈದ್ಯರ ಮಾರ್ಗದರ್ಶನದೊಡನೆ ಎಫ್‌ಡಿಐ  ದೇಶದಿಂದಲೇ ಓಟಕ್ಕಿತ್ತಿತ್ತು" ಎಂದರು. ಅಲ್ಲದೆ ಭಾರತದ ರಕ್ಷಣೆ ಪಾರ್ಶ್ವವಾಯುವಿಗೆ ತುತ್ತಾಗಿತ್ತು, ಆದರೆ ಯುಪಿಎ ಸರ್ಕಾರದಲ್ಲಿ ಅದನ್ನು ನಿಭಾಯಿಸುವ ಉಪಕರಣಗಳಿರಲಿಲ್ಲ ಎಂದಿದ್ದಾರೆ.

ಚಿದಂಬರಂ ಅವರ ಟೀಕೆಗಳಲ್ಲಿ ವಿಷಯಗಳಿಗಿಂತ ಹೆಚ್ಚು ವ್ಯಂಗ್ಯವಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು."ಯುಪಿಎಯ ತಪ್ಪುಗಳನ್ನು ಪುನರಾವರ್ತಿಸದ ನಾವು ಖಚಿತವಾಗಿ ಮುಂದಿದ್ದೇವೆ"

ಬ್ಯಾಂಕುಗಳು ಎದುರಿಸುತ್ತಿರುವ ಅವಳಿ ಬ್ಯಾಲೆನ್ಸ್ ಶೀಟ್ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಎನ್‌ಪಿಎ ಮತ್ತು ಪರಾರಿಯಾಗುವ ಆರ್ಥಿಕ ಅಪರಾಧಿಗಳ ಪಟ್ಟಿಯನ್ನು ಸಹ ಸೀತಾರಾಮನ್ ಪಟ್ಟಿ ಮಾಡಿದ್ದರು.ಅಲ್ಲದೆ, ಯುಪಿಎ ಜಾರಿಗೆ ತಂದ ಮುಕ್ತ ವ್ಯಾಪಾರ ಒಪ್ಪಂದಗಳು (ಎಫ್‌ಟಿಎ) ದೇಶಕ್ಕೆ ಮಾರಕವಾಗಿದೆ ಎಂದು ಅವರು ಹೇಳಿದ್ದಾರೆ.

ಕೈಗಾರಿಕಾ ವಲಯ ಇದೀಗ ಚೇತರಿಕೆಯನ್ನು ತೋರಿಸುತ್ತಿದೆ.ಚಿಗುರುಗಳು ಗೋಚರಿಸುತ್ತಿವೆ ಮತ್ತು ಪ್ರಸಕ್ತ ಹಣಕಾಸು ವರ್ಷದ ಆರು ತಿಂಗಳಲ್ಲಿ ಜಿಎಸ್ಟಿ ಸಂಗ್ರಹವು 1 ಲಕ್ಷ ಕೋಟಿ ರೂ. ದಾಟಿದೆ ಎಂದರು

ಮೋದಿ ಸರ್ಕಾರದ ಅಡಿಯಲ್ಲಿ ಆಹಾರ ಹಣದುಬ್ಬರವನ್ನು ನಿಯಂತ್ರಣದಲ್ಲಿರಿಸಲಾಗಿದ್ದು  ಹಣಕಾಸಿನ ವ್ಯವಹಾರ ಶಿಸ್ತುಬದ್ದವಾಗಿದೆಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com