ವೊಡಾಫೋನ್ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್: ಮಾ.17ಕ್ಕೆ ವಿಚಾರಣೆ ಮುಂದೂಡಿಕೆ 

ದೂರ ಸಂಪರ್ಕ ಇಲಾಖೆಗೆ ಸೋಮವಾರ 2ಸಾವಿರದ 500 ಕೋಟಿ ರೂಪಾಯಿ ಮತ್ತು ಬರುವ ಶುಕ್ರವಾರದ ವೇಳೆಗೆ ಸಾವಿರ ಕೋಟಿ ರೂಪಾಯಿ ಪಾವತಿಸುವ ವೊಡಾಫೋನ್ ಐಡಿಯಾ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 
ವೊಡಾಫೋನ್ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್: ಮಾ.17ಕ್ಕೆ ವಿಚಾರಣೆ ಮುಂದೂಡಿಕೆ 

ನವದೆಹಲಿ; ದೂರ ಸಂಪರ್ಕ ಇಲಾಖೆಗೆ ಸೋಮವಾರ 2ಸಾವಿರದ 500 ಕೋಟಿ ರೂಪಾಯಿ ಮತ್ತು ಬರುವ ಶುಕ್ರವಾರದ ವೇಳೆಗೆ ಸಾವಿರ ಕೋಟಿ ರೂಪಾಯಿ ಪಾವತಿಸುವ ವೊಡಾಫೋನ್ ಐಡಿಯಾ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 


ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ವೊಡಾಫೋನ್ ಕಂಪೆನಿಯ ಪ್ರಸ್ತಾವನೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.


ವೊಡಾಫೋನ್ ಕಂಪೆನಿ ಪರವಾಗಿ ನ್ಯಾಯಾಲಯದಲ್ಲಿ ಇಂದು ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೊಹಟ್ಗಿ, ಕಂಪೆನಿ ದೂರಸಂಪರ್ಕ ಇಲಾಖೆಗೆ ಇಂದು 2 ಸಾವಿರದ 500 ಕೋಟಿ ರೂಪಾಯಿ ಮತ್ತು ಮುಂದಿನ ಶುಕ್ರವಾರದ ಹೊತ್ತಿಗೆ ಸಾವಿರ ಕೋಟಿ ರೂಪಾಯಿಗಳನ್ನು ಪಾವತಿಸಲಿದೆ, ಕಂಪೆನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿಕೊಂಡರು.
ವೊಡಾಫೋನ್ ಕಂಪೆನಿ ಸರ್ಕಾರಕ್ಕೆ ಠೇವಣಿ ಇರಿಸಿದ ಬ್ಯಾಂಕ್ ಶ್ಯೂರಿಟಿಯನ್ನು ಸಹ ಹಣವಾಗಿ ಪರಿವರ್ತಿಸಬಾರದು ಎಂದು ಮನವಿ ಮಾಡಿಕೊಂಡರು. 


4 ಸಾವಿರದ 729 ಕೋಟಿ ರೂಪಾಯಿ ಸ್ಪೆಕ್ಟ್ರಮ್ ಶುಲ್ಕಬಾಕಿ ಮತ್ತು 28 ಸಾವಿರದ 309 ಕೋಟಿ ರೂಪಾಯಿ ಪರವಾನಗಿ ಶುಲ್ಕ ಒಳಗೊಂಡಂತೆ ಸುಮಾರು 53 ಸಾವಿರದ 038 ಕೋಟಿ ರೂಪಾಯಿಗಳನ್ನು ವೊಡಾಫೋನ್ ಐಡಿಯಾ ಕಂಪೆನಿ ಸರ್ಕಾರಕ್ಕೆ ಪಾವತಿಸಬೇಕಾಗಿದ್ದು ಅದನ್ನು ಪಾವತಿಸದಿದ್ದರೆ ಮುಚ್ಚಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. 


ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com