ಬೆಂಗಳೂರು-ಸೀಟೆಲ್ ನಡುವೆ ನೇರ ವಿಮಾನ ಸಂಚಾರ

ಅಮೆರಿಕನ್ ಏರ್ ಲೈನ್ಸ್  ಸಂಸ್ಥೆಯು ಇದೇ ಅಕ್ಟೋಬರ್ ನಿಂದ  ಬೆಂಗಳೂರು-ಸೀಟೆಲ್ ನಗರಗಳ ನಡುವೆ ನೇರ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ
ಅಮೆರಿಕಾ ಏರ್ ವೇಸ್
ಅಮೆರಿಕಾ ಏರ್ ವೇಸ್

ನವದೆಹಲಿ: ಅಮೆರಿಕನ್ ಏರ್ ಲೈನ್ಸ್  ಸಂಸ್ಥೆಯು ಇದೇ ಅಕ್ಟೋಬರ್ ನಿಂದ  ಬೆಂಗಳೂರು-ಸೀಟೆಲ್ ನಗರಗಳ ನಡುವೆ ನೇರ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ

ಸೀಟೆಲ್-ಬೆಂಗಳೂರು ನಡುವಿನ ಮೊದಲ ಮೊದಲ ವಿಮಾನಯಾನದ ಮುಂಗಡ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಈತಿಂಗಳಾಂತ್ಯಕ್ಕೆ ಪ್ರಾರಂಭ  ಮಾಡಲಾಗುವುದಾಗಿ  ಕಂಪೆನಿ ಹೇಳಿದೆ.

ಈ ಸೇವೆಯ ಮೂಲಕ ಭಾರತದ ಪ್ರಯಾಣಿಕರು, ನಾಗರಿಕರು  ಸೀಟೆಲ್ ನಗರ ತಲುಪಿ, ಅಲ್ಲಿಂದ ಅಮೆರಿಕದ ಬೇರೆ, ಬೇರೆ, 70 ನಗರಗಳಿಗೆ ಪ್ರಯಾಣ ಮಾಡುವ ಹೊಸ  ಅನುಕೂಲ, ಅವಕಾಶ ದೊರಕಲಿದೆ ಎಂದೂ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com