ಎಜಿಆರ್ ಶುಲ್ಕ ಪಾವತಿ ಬಾಕಿ: ಕಂಪೆನಿಗಳ ಹಿತ-ಸುಪ್ರೀಂ ಆದೇಶ ಪಾಲನೆಯ ಸಮತೋಲನ ಕಾಯಬೇಕಾದ ಸರ್ಕಾರ 

ಪ್ರಸ್ತುತ ಭಾರತೀಯ ದೂರಸಂಪರ್ಕ ವಲಯದಲ್ಲಿ ತೀವ್ರ ಬಿಕ್ಕಟ್ಟು ಕಂಡುಬರುತ್ತಿರುವಾಗ ಎಜಿಆರ್ ಶುಲ್ಕ ಬಾಕಿ ಪಾವತಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವುದು ಮತ್ತು ಖಾಸಗಿ ದೂರಸಂಪರ್ಕ ವಲಯದ ಪರಿಸ್ಥಿತಿಯನ್ನು ಸರಿತೂಗಿಸಿ ಗ್ರಾಹಕರ ಹಿತಕಾಯುವುದು ಕೂಡ ಸರ್ಕಾರಕ್ಕೆ ಮುಖ್ಯವಾಗಿದೆ.
ಎಜಿಆರ್ ಶುಲ್ಕ ಪಾವತಿ ಬಾಕಿ: ಕಂಪೆನಿಗಳ ಹಿತ-ಸುಪ್ರೀಂ ಆದೇಶ ಪಾಲನೆಯ ಸಮತೋಲನ ಕಾಯಬೇಕಾದ ಸರ್ಕಾರ 

ನವದೆಹಲಿ: ಪ್ರಸ್ತುತ ಭಾರತೀಯ ದೂರಸಂಪರ್ಕ ವಲಯದಲ್ಲಿ ತೀವ್ರ ಬಿಕ್ಕಟ್ಟು ಕಂಡುಬರುತ್ತಿರುವಾಗ ಎಜಿಆರ್ ಶುಲ್ಕ ಬಾಕಿ ಪಾವತಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವುದು ಮತ್ತು ಖಾಸಗಿ ದೂರಸಂಪರ್ಕ ವಲಯದ ಪರಿಸ್ಥಿತಿಯನ್ನು ಸರಿತೂಗಿಸಿ ಗ್ರಾಹಕರ ಹಿತಕಾಯುವುದು ಕೂಡ ಸರ್ಕಾರಕ್ಕೆ ಮುಖ್ಯವಾಗಿದೆ.


ಖಾಸಗಿ ಟೆಲಿಕಾಂ ಕಂಪೆನಿಗಳು ಕೊನೆಗೂ ಸುಪ್ರೀಂ ಕೋರ್ಟ್ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಅನುಸರಿಸಲು ಮುಂದಾಗಿವೆ. ನಿನ್ನೆ ವೊಡಾಫೋನ್ ಐಡಿಯಾ ಲಿಮಿಟೆಡ್ ಸಾವಿರ ಕೋಟಿ ರೂಪಾಯಿ ದಂಡ ಪಾವತಿಸಿದೆ. ಭಾರ್ತಿ ಏರ್ ಟೆಲ್ ನ ಸುನಿಲ್ ಮಿತ್ತಲ್ ಕೂಡ ಬಾಕಿ ಉಳಿಕೆ ಶುಲ್ಕವನ್ನು ಮಾರ್ಚ್ 17ರೊಳಗೆ ಪಾವತಿ ಮಾಡುವುದಾಗಿ ಹೇಳಿದ್ದಾರೆ. 


ಕಳೆದ ಬುಧವಾರ ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದ ಸುನಿಲ್ ಮಿತ್ತಲ್ ನಿನ್ನೆ ದೂರಸಂಪರ್ಕ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಸಹ ಭೇಟಿ ಮಾಡಿ ಕಂಪೆನಿಯ ಒಳಿತಿಗೆ ತೆರಿಗೆ ಕಡಿತ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.


ಭಾರತೀಯ ದೂರಸಂಪರ್ಕ ಇಲಾಖೆ ಪ್ರಕಾರ ವೊಡಾಫೋನ್ ಐಡಿಯಾ 53 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು ಅವುಗಳಲ್ಲಿ ಈಗ ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಸರ್ಕಾರಕ್ಕೆ ಪಾವತಿಸಿದೆ. ನಾಳೆಯೊಳಗೆ 3,500 ಕೋಟಿ ರೂಪಾಯಿ ಪಾವತಿಸಲಿದೆ ಎಂದು ಹೇಳಿದೆ. ಭಾರ್ತಿ ಏರ್ ಟೆಲ್ 10 ಸಾವಿರ ಕೋಟಿ ರೂಪಾಯಿ ಪಾವತಿಸಿದ್ದು, ಟಾಟಾ ಟೆಲಿಸರ್ವಿಸ್ 2,197 ಕೋಟಿ ರೂಪಾಯಿ ಪಾವತಿಸುವ ಮೂಲಕ ನಿನ್ನೆಯವರೆಗೆ ಸರ್ಕಾರಕ್ಕೆ ಖಾಸಗಿ ಟೆಲಿಕಾಂ ಕಂಪೆನಿಗಳಿಂದ 16 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನು ಹೆಚ್ಚುವರಿ ಹಣವನ್ನು ಮುಂದಿನ 7-8 ದಿನಗಳಲ್ಲಿ ಮಾಡುವುದಾಗಿ ಇನ್ನು ಕೆಲವು ಕಂಪೆನಿಗಳು ಹೇಳಿವೆ.


ಎಜಿಆರ್ ಶುಲ್ಕ ಹೊಣೆಗಾರಿಕೆ ಬಗ್ಗೆ ಮಾರ್ಚ್ 17ರೊಳಗೆ ಕೇಂದ್ರ ಸರ್ಕಾರ ಪರೀಕ್ಷಾ ತಪಾಸಣೆ ನಡೆಸಲಿದೆ. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಪ್ರಕಾರ ಖಾಸಗಿ ಕಂಪೆನಿಗಳು ಸರ್ಕಾರಕ್ಕೆ 1.47 ಲಕ್ಷ ಕೋಟಿ ರೂಪಾಯಿ ಎಜಿಆರ್ ಶುಲ್ಕ ಪಾವತಿಸಬೇಕು. ಆದರೆ ಇದರಲ್ಲಿ ತೆರಿಗೆ ಶುಲ್ಕ ತಗ್ಗಿಸಿ ಎಂದು ಖಾಸಗಿ ಕಂಪೆನಿಗಳು ಕೇಳುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com