ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾಗೆ ಇವೈ ‘ವರ್ಷದ ಉದ್ಯಮಿ’ ಪ್ರಶಸ್ತಿ

ಬಯೋಕಾನ್‌ನ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಅವರಿಗೆ 2019 ರ ವರ್ಷದ ಪ್ರತಿಷ್ಠಿತ ಇವೈ ವರ್ಷದ ಉದ್ಯಮಿ ಪ್ರಶಸ್ತಿ ಲಭಿಸಿದೆ.
 

Published: 21st February 2020 04:29 PM  |   Last Updated: 21st February 2020 04:29 PM   |  A+A-


ಕಿರಣ್ ಮಜುಂದಾರ್ ಶಾ

Posted By : Raghavendra Adiga
Source : Online Desk

ಬಯೋಕಾನ್‌ನ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಅವರಿಗೆ 2019 ರ ವರ್ಷದ ಪ್ರತಿಷ್ಠಿತ ಇವೈ ವರ್ಷದ ಉದ್ಯಮಿ ಪ್ರಶಸ್ತಿ ಲಭಿಸಿದೆ.

2020 ರ ಜೂನ್ 4-6 ರ ನಡುವೆ ಮಾಂಟೆ ಕಾರ್ಲೊದಲ್ಲಿ ನಡೆಯಲಿರುವ ಇವೈ ವರ್ಲ್ಡ್ ಎಂಟರ್‌ಪ್ರೆನೂರ್ ಆಫ್ ದಿ ಇಯರ್ ಅವಾರ್ಡ್ (ಡಬ್ಲ್ಯುಇಒವೈ)  ಕಾರ್ಯಕ್ರಮದಲ್ಲಿ ಶಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ತನ್ನ ಹೂಡಿಕೆಯ ಮೂಲಕ ಜೀವರಕ್ಷಕ ಔಷಧಿಗಳ ಕೈಗೆಟುಕುವ ದರದಲ್ಲಿ ಸಿಗುವಂತೆ ಂಆಡಿದ್ದ ಅವರ ಸಾಧನೆಗಾಗಿ ಶಾ ಅವರಿಗೆ ಈ ಗೌರವ ದೊರಕಿದೆ. ಗಿವಿಂಗ್ ಪ್ಲೆಡ್ಜ್‌ಗೆ  ಸಹಿ ಹಾಕಿದ ಬಾರತೀಯರಲ್ಲಿ ಶಾ ಸಹ ಒಬ್ಬರಾಗಿದ್ದು  ತನ್ನ ಬಹುಪಾಲು ಸಂಪತ್ತನ್ನು ಲೋಕೋಪಕಾರಕ್ಕೆ ಅರ್ಪಿಸುವ ಜಾಗತಿಕ ಬದ್ಧತೆ ಅಭಿಯಾನವಿದಾಗಿದೆ. 

ಗೋದ್ರೇಜ್ ಸಮೂಹ ಸಂಸ್ಥ್ಯ ಅಧ್ಯಕ್ಷ ಆದಿ ಗೋದ್ರೆಜ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 

ಈ ಪ್ರಶಸ್ತಿಗಳು, ಜೀವ ವಿಜ್ಞಾನ ಮತ್ತು ಹೆಲ್ತ್ ಕೇರ್  ನಿಂದ ಹಿಡಿದು ಹಣಕಾಸು ಸೇವೆಗಳವರೆಗಿನಒಂಬತ್ತು ವಿಭಾಗಗಳಲ್ಲಿ ನೀಡಲ್ಪಡಲಿದೆ,

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp