ವಿಶೇಷ ಚೇತನರು ಉದ್ಯೋಗ ಹುಡುಕಲು ಮೈಕ್ರೋಸಾಫ್ಟ್ ಮತ್ತು ಎಸ್‌ಬಿಐ ಜಂಟಿ ತರಬೇತಿ!

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ(ಬಿಎಫ್‌ಎಸ್‌ಐ) ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಉದ್ಯೋಗಿಗಳಿಗೆ ತರಬೇತಿ ನೀಡಲು ಪ್ರಮುಖ ಜಾಗತಿಕ ತಂತ್ರಜ್ಞಾನ ಸಂಸ್ಧೆ ಮೈಕ್ರೋಸಾಫ್ಟ್-ಎಸ್‌ಬಿಐ ಜೊತೆ ಸಹಭಾಗಿತ್ವವನ್ನು ಪ್ರಕಟಿಸಿದೆ.
ಉದ್ಯೋಗ
ಉದ್ಯೋಗ

ಮುಂಬೈ: ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ(ಬಿಎಫ್‌ಎಸ್‌ಐ) ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಉದ್ಯೋಗಿಗಳಿಗೆ ತರಬೇತಿ ನೀಡಲು ಪ್ರಮುಖ ಜಾಗತಿಕ ತಂತ್ರಜ್ಞಾನ ಸಂಸ್ಧೆ ಮೈಕ್ರೋಸಾಫ್ಟ್-ಎಸ್‌ಬಿಐ ಜೊತೆ ಸಹಭಾಗಿತ್ವವನ್ನು ಪ್ರಕಟಿಸಿದೆ.

ಸಹಯೋಗದ ಮೊದಲ ವರ್ಷದಲ್ಲಿ 500ಕ್ಕೂ ಹೆಚ್ಚು ವಿಶೇಷ ಚೇತನರಿಗೆ ತರಬೇತಿ ನೀಡಲಾಗುತ್ತದೆ. "ಇದು ಆದರ್ಶ ಪಾಲುದಾರಿಕೆಯಾಗಿದೆ. ಇದು ಯಾವುದೇ ರೀತಿಯ ಅಂಗವೈಕಲ್ಯವನ್ನು ಹೊಂದಿರುವವರು ಉದ್ಯೋಗವನ್ನು ಪಡೆಯುವವರಿಗೆ ತರಬೇತಿ ನೀಡಲಾಗುತ್ತಿದೆ ಅವರೊಂದಿಗೆ ನಮ್ಮ ಅನುಭವ ಅದ್ಭುತವಾಗಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದರು.

ಭಾರತದಲ್ಲಿ 26 ಮಿಲಿಯನ್ ವಿಶೇಷ ಚೇತನರಿದ್ದಾರೆ ಮತ್ತು 21ನೇ ಶತಮಾನದ ಆರ್ಥಿಕತೆಯಲ್ಲಿ ಭಾಗವಹಿಸಲು ತಂತ್ರಜ್ಞಾನವನ್ನು ಬಳಸಲು ಹೊಸ ಮಾರ್ಗಗಳನ್ನು ಬಳಸುವುದು ಅತ್ಯಗತ್ಯ ಎಂದು ಮೈಕ್ರೋಸಾಫ್ಟ್ನ ಜಾಗತಿಕ ಮಾರಾಟ, ಮಾರುಕಟ್ಟೆ ಮತ್ತು ಕಾರ್ಯಾಚರಣೆಗಳ ಅಧ್ಯಕ್ಷ ಜೀನ್-ಫಿಲಿಪ್ ಕೋರ್ಟೊಯಿಸ್ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com