ಕೊರೋನಾ ಮಹಾಘಾತ: ಭಾರತದ ಟಾಪ್ 1 ಶ್ರೀಮಂತ ಮುಕೇಶ್ ಕಳೆದುಕೊಂಡಿದ್ದು 5 ಬಿಲಿಯನ್ ಡಾಲರ್!

ಚೀನಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಮರಣ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಎಫೆಕ್ಟ್ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ

ನವದೆಹಲಿ: ಚೀನಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಮರಣ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಎಫೆಕ್ಟ್ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಯ ಅಧ್ಯಕ್ಷ ಮುಕೇಶ್ ಅಂಬಾನಿ ಬರೋಬ್ಬರಿ 5 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿದ್ದಾರೆ. ಇದೇ ವೇಳೆ ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ 884 ಮಿಲಿಯನ್ ಡಾಲರ್, ವಿಪ್ರೋ ಅಧ್ಯಕ್ಷ ಆಜೀಮ್ ಪ್ರೇಮ್ ಜೀ 869 ಮಿಲಿಯನ್ ಡಾಲರ್ ಮತ್ತು ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ 496 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ.

ಚೀನಾ, ದಕ್ಷಿಣ ಕೊರಿಯಾ, ಇಟಲಿ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಉಂಟಾಗಿರುವ ಕೊರೋನಾ ವೈರಸ್ ಭೀತಿ ಉತ್ಪಾದನಾ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರ ದುಷ್ಪರಿಣಾಮ ಇದೀಗ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದೆ. ಇಂದು ಷೇರುಮಾರುಕಟ್ಟೆ ವಹಿವಾಟಿನ ವಾರದ ಕೊನೆಯ ದಿನವಾಗಿದ್ದು, ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 1101 ಅಂಕಗಳ ಕಳೆದುಕೊಂಡಿತು. ಆ ಮೂಲಕ 38,661.81ಅಂಕಗಳಿಗೆ ಸೆನ್ಸೆಕ್ಸ್ ಕುಸಿಯಿತು. ಮಾರುಕಟ್ಟೆಯಲ್ಲಿ ಈ ದಿಢೀರ್ ನಕಾರಾತ್ಮಕ ಬೆಳವಣಿಗೆಯಿಂದಾಗಿ ಹೂಡಿಕೆದಾರರು ಬರೊಬ್ಬರಿ 5 ಲಕ್ಷ ಕೋಟಿ ರೂಗಳ ನಷ್ಟ ಅನುಭವಿಸುವಂತಾಗಿದೆ.

ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ, ನಿಫ್ಟಿ 348 ಅಂಕ ಕುಸಿದು, 11,285 ಕ್ಕೆ ಇಳಿದಿದೆ. ವಾರದ ಕೊನೆಯ ದಿನದ ಆರಂಭಿಕ ವಹಿವಾಟು 39087.47 ಅಂಕದೊಂದಿಗೆ  ಆರಂಭವಾಯಿತು. ಕೆಲವೇ ಹೊತ್ತಿನಲ್ಲಿ ಮಾರಾಟದ ಒತ್ತಡದಿಂದ 38600.81 ಕ್ಕೆ ಕುಸಿಯಿತು.
  
ಒಟ್ಟಾರೆ ಮಾರಾಟ ಒತ್ತಡದಿಂದ ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ, ನಿಫ್ಟಿ 300 ಅಂಕ ಕುಸಿಯಿತು. ಸದ್ಯ, 290 ಅಂಕ ಕುಸಿತದೊಂದಿಗೆ 11,343ರಲ್ಲಿ ವಹಿವಾಟು ನಡೆಯುತ್ತಿದೆ. ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಎಚ್‌ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗಳು ಭಾರಿ ನಷ್ಠ ಅನುಭವಿಸಿದ್ದು, ಈ ಸಂಸ್ಥೆಗಳ ಷೇರುಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.

ಇನ್ನು ಕೊರೋನಾ ವೈರಸ್ ದಾಳಿಯಿಂದಾಗಿ ಗಂಭೀರ ಪರಿಣಾಮ ಎದುರಿಸುತ್ತಿರುವ ಚೀನಾದಲ್ಲಿ ನಿನ್ನೆ ಒಂದೇ ದಿನ ಮತ್ತೆ 44 ಮಂದಿ ಮೃತರಾಗಿದ್ದಾರೆ. ಆ ಮೂಲಕ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,788ಕ್ಕೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com