ದೇಶಾದ್ಯಂತ ಏಪ್ರಿಲ್ ತಿಂಗಳಿಂದ ಬಿ.ಎಸ್ - 6 ಗುಣಮಟ್ಟದ ಇಂಧನ ಪೂರೈಕೆ

ದೇಶ ಬಿಎಸ್-4 ರಿಂದ ನೇರವಾಗಿ ಬಿಎಸ್-6 ಇಂಧನ ಗುಣಮಟ್ಟಕ್ಕೆ ಜಿಗಿದಿದ್ದು, ಬಿಎಸ್-6 ಗುಣಮಟ್ಟವನ್ನು ಬರುವ ಏಪ್ರಿಲ್ 1ರಿಂದ ದೇಶದಾದ್ಯಂತ ಜಾರಿಗೊಳಿಸುತ್ತಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ರಾಜ್ಯ ಮುಖ್ಯಸ್ಥ  ಡಿ.ಎಲ್. ಪ್ರಮೋದ್ ತಿಳಿಸಿದ್ದಾರೆ.
ದೇಶಾದ್ಯಂತ ಏಪ್ರಿಲ್ ತಿಂಗಳಿಂದ ಬಿ.ಎಸ್ - 6 ಗುಣಮಟ್ಟದ ಇಂಧನ ಪೂರೈಕೆ
ದೇಶಾದ್ಯಂತ ಏಪ್ರಿಲ್ ತಿಂಗಳಿಂದ ಬಿ.ಎಸ್ - 6 ಗುಣಮಟ್ಟದ ಇಂಧನ ಪೂರೈಕೆ

ಬೆಂಗಳೂರು: ದೇಶ ಬಿಎಸ್-4 ರಿಂದ ನೇರವಾಗಿ ಬಿಎಸ್-6 ಇಂಧನ ಗುಣಮಟ್ಟಕ್ಕೆ ಜಿಗಿದಿದ್ದು, ಬಿಎಸ್-6 ಗುಣಮಟ್ಟವನ್ನು ಬರುವ ಏಪ್ರಿಲ್ 1ರಿಂದ ದೇಶದಾದ್ಯಂತ ಜಾರಿಗೊಳಿಸುತ್ತಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ರಾಜ್ಯ ಮುಖ್ಯಸ್ಥ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ಕರ್ನಾಟಕದ ತೈಲ ಕಂಪನಿಗಳ ರಾಜ್ಯ ಮಟ್ಟದ ಸಮನ್ವಯಾಧಿಕಾರಿ ಡಿ.ಎಲ್. ಪ್ರಮೋದ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಿಎಸ್-6 ವಾಹನ ಇಂಧನ ಪೂರೈಕೆಯನ್ನು ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಹೊಂದಿಕೊಂಡ ಹರಿಯಾಣ ರಾಜ್ಯಗಳ 20 ಜಿಲ್ಲೆಗಳಲ್ಲಿ ಆರಂಭಿಸಿದೆ. ಬಿಎಸ್-6 10ಪಿಪಿಎಂ ಗಂಧಕ ಅಂಶವನ್ನು ಹೊಂದಿದ್ದು, ಇದು ಬಿಎಸ್-6ನಲ್ಲಿದ್ದ 50ಪಿಪಿಎಂ ಗಂಧಕಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ ಎಂದು ತಿಳಿಸಿದರು.

ಇಂಡಿಯನ್ ಆಯಿಲ್ ಶುದ್ಧೀಕರಣ ಘಟಕಗಳು, ಕೊಳವೆ ಮಾರ್ಗಗಳು, ದಾಸ್ತಾನು ಟರ್ಮಿನಲ್ ಗಳು ಮತ್ತು ಚಿಲ್ಲರೆ ಮಳಿಗೆಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಬಿಎಸ್- 6 ಇಂಧನ ಪೂರೈಕೆಯ ಖಾತ್ರಿಗೆ ಅಗತ್ಯವಾದ ಕಠಿಣ ಗುಣಮಟ್ಟ ನಿಯಂತ್ರಣ ಕ್ರಮಗಳಿಗೆ ಅನುಗುಣವಾಗಿದೆ. ಬಿಎಸ್- 6 ಪರಿವರ್ತನೆಗೆ ಇಂಡಿಯನ್ ಆಯಿಲ್ ಗೆ ಅಂದಾಜು 17,000 ಕೋಟಿ ರೂ. ಯೋಜಿತ ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com