ಸೈರಸ್ ಮಿಸ್ತ್ರಿ ವಿವಾದ: ಸುಪ್ರೀಂಕೋರ್ಟ್ ಮೊರೆ ಹೋದ  ಟಾಟಾ ಸನ್ಸ್

ಟಾಟಾ ಗ್ರೂಪ್ ನ ಕಾರ್ಯಾಕಾರಿ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಮತ್ತೆ ನೇಮಿಸಬೇಕು ಎಂಬ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ(ಎನ್‌ಸಿಎಲ್‌ಎಟಿ) ನೀಡಿರುವ ತೀರ್ಪಿನ ವಿರುದ್ದ ಟಾಟಾ ಸನ್ಸ್  ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

Published: 01st January 2020 04:04 PM  |   Last Updated: 01st January 2020 04:04 PM   |  A+A-


Cyrus Mistry

ಸೈರಸ್ ಮಿಸ್ತ್ರಿ

Posted By : Lingaraj Badiger
Source : UNI

ಮುಂಬೈ: ಟಾಟಾ ಗ್ರೂಪ್ ನ ಕಾರ್ಯಾಕಾರಿ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಮತ್ತೆ ನೇಮಿಸಬೇಕು ಎಂಬ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ(ಎನ್‌ಸಿಎಲ್‌ಎಟಿ) ನೀಡಿರುವ ತೀರ್ಪಿನ ವಿರುದ್ದ ಟಾಟಾ ಸನ್ಸ್  ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಎನ್ ಸಿ ಎಲ್ ಎಟಿ ನೀಡಿರುವ ತೀರ್ಪನ್ನು ಪ್ರಶ್ನಿಸಿ, ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿ ಟಾಟಾ ಸನ್ಸ್ ಸುಪ್ರೀಂ ಕೋರ್ಟ್ ಗೆ  ಮನವಿ ಮಾಡಿದೆ.

ಸದ್ಯದಲ್ಲೇ ಟಿಸಿಎಸ್ ಆಡಳಿತ ಮಂಡಳಿ ಸಮಾವೇಶ ನಡೆಯಲಿರುವ ಹಿನ್ನಲೆಯಲ್ಲಿ ನ್ಯಾಯಮಂಡಳಿ ತೀರ್ಪಿನ ವಿರುದ್ದ  ತಕ್ಷಣವೇ ತಡೆಯಾಜ್ಞೆ ಪಡೆದುಕೊಳ್ಳಲು ಟಾಟಾ ಸನ್ಸ್ ಕಂಪನಿ ಬಯಸಿದೆ. ಆದರೆ ರಜೆಯ ನಂತರ ಜನವರಿ ೬ ರಂದು ಸುಪ್ರೀಂ ಕೋರ್ಟ್ ಈ ಆರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಮತ್ತೊಂದೆಡೆ ಟಿಸಿಎಸ್ ಮಂಡಳಿ ಸಭೆ ಜನವರಿ ೯ ರಂದು ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಟಿಸಿಎಸ್ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವ ನಿರೀಕ್ಷೆಯಿದೆ. ಟಾಟಾ ಸನ್ಸ್ ಸಲ್ಲಿಸಿರುವ ಮೇಲ್ಮನವಿಯನ್ನು ಸೈರಸ್ ಮಿಸ್ತ್ರಿ ಹಾಗೂ ಅವರ ಕುಟುಂಬ ತೀವ್ರವಾಗಿ ವಿರೋಧಿಸಿದೆ. ಎನ್‌ಸಿಎಲ್‌ಎಟಿ ನಿರ್ಣಯವನ್ನು ಜಾರಿಗೆ ತರಲು ಸೈರಸ್ ಕುಟುಂಬ ನ್ಯಾಯಾಲಯದಲ್ಲಿ ಒತ್ತಾಯಿಸಲಿದೆ. ಮಿಸ್ತ್ರಿ ಪರ ವಕೀಲರು ಸೈರಸ್ ಕುಟುಂಬ ನ್ಯಾಯಾಲದಲ್ಲಿ ಒತ್ತಾಯಿಸಬಹುದು ಎಂದು ತಜ್ಞರು  ವಿಶ್ಲೇಷಿಸಿದ್ದಾರೆ. 

ಟಾಟಾ ಸನ್ಸ್ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಕಾಯುವ ನಿರೀಕ್ಷೆಯಿದೆ" ಎಂದು ಎಸ್‌ಎಎನ್‌ಡಿಆರ್ ಅಸೋಸಿಯೇಟ್ಸ್ ವಕ್ತಾರ ಮಹಾಪಾತ್ರ ಹೇಳಿದ್ದಾರೆ.

ಟಾಟಾ ಸನ್ಸ್ ೨೦೧೬ ರಲ್ಲಿ ಮಿಸ್ತ್ರಿ ಅವರನ್ನು ಕಾರ್ಯಕಾರಿ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿ, ತಿಂಗಳ ನಂತರ ಎನ್ ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು. ನಟರಾಜನ್ ಚಂದ್ರಶೇಖರನ್ ಅವರು ಟಾಟಾ ಸಮೂಹದ  ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp