ಮತ್ತೆ ಕರ್ನಾಟಕಕ್ಕೆ ಜಿಎಸ್ಟಿ ಪರಿಹಾರ ವಿಳಂಬ, ಆತಂಕ ವ್ಯಕ್ತಪಡಿಸಿದ ಅಧಿಕಾರಿಗಳು!

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರವನ್ನು ರಾಜ್ಯಕ್ಕೆ ನೀಡುವಲ್ಲಿ ಮತ್ತೊಮ್ಮೆ ವಿಳಂಬ ಮಾಡಿದೆ. ಅಕ್ಟೋಬರ್-ನವೆಂಬರ್ ತಿಂಗಳ ಸುಮಾರು 3,300 ಕೋಟಿ ರೂ. ಡಿಸೆಂಬರ್ 31ರೊಳಗೆ ಪಾವತಿಸಲು ನಿರ್ಧರಿಸಲಾಗಿತ್ತು. ಆದರೂ ಇಲ್ಲಿಯವರೆಗೂ ಪಾವತಿಯಾಗಿಲ್ಲ.
ಜಿಎಸ್ಟಿ
ಜಿಎಸ್ಟಿ

ಬೆಂಗಳೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರವನ್ನು ರಾಜ್ಯಕ್ಕೆ ನೀಡುವಲ್ಲಿ ಮತ್ತೊಮ್ಮೆ ವಿಳಂಬ ಮಾಡಿದೆ. ಅಕ್ಟೋಬರ್-ನವೆಂಬರ್ ತಿಂಗಳ ಸುಮಾರು 3,300 ಕೋಟಿ ರೂ. ಡಿಸೆಂಬರ್ 31ರೊಳಗೆ ಪಾವತಿಸಲು ನಿರ್ಧರಿಸಲಾಗಿತ್ತು. ಆದರೂ ಇಲ್ಲಿಯವರೆಗೂ ಪಾವತಿಯಾಗಿಲ್ಲ.

ಇನ್ನು ಡಿಸೆಂಬರ್-ಜನವರಿಯ ಪರಿಹಾರ ಮೊತ್ತ ಅಂದಾಜು 3,200 ಕೋಟಿ ರೂ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಪಾವತಿಸಲು ನಿರ್ಧರಿಸಲಾಗಿದೆ. ಆದರೆ ಸತತ ಪಾವತಿ ವಿಳಂಬದಿಂದಾಗಿ ರಾಜ್ಯ ತಲ್ಲಣಗೊಂಡಿದೆ. ಸಂವಹನದ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. 

ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಹಲವು ಪತ್ರಗಳನ್ನು ರವಾನಿಸಿದ್ದು ಸ್ವೀಕೃತಿ ಪತ್ರ ಮಾತ್ರ ಬರುತ್ತಿದ್ದು ಪರಿಹಾರ ವಿಳಂಬಕ್ಕೆ ಯಾವುದೇ ಸ್ಪಷ್ಟೀಕರಣ ಸಿಕ್ಕಿಲ್ಲ. ಈ ಬಾಕಿ ಹಣವನ್ನು ಯಾವಾಗ ಪಡೆಯಬಹುದು ಎಂಬ ಭರವಸೆ ಕೂಡ ಇಲ್ಲ ಎಂದು ರಾಜ್ಯದ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. 

ಇನ್ನ ರಾಜ್ಯ ಸರ್ಕಾರ ಮಾರ್ಚ್ 5ರಂದು 2020-21ರ ಹಣಕಾಸು ಬಜೆಟ್ ಅನ್ನು ಮಂಡಿಸಲು ನಿರ್ಧರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com