2019 ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಂಚನೆ ಪ್ರಕರಣ ಏರಿಕೆ! 

2019 ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಂಚನೆಯ ಪ್ರಕರಣಗಳು ಶೇ.15 ರಷ್ಟು ಏರಿಕೆಯಾಗಿದ್ದು, ವಂಚನೆಯಾಗಿರುವ ಮೊತ್ತ ಶೇ.74 ರಷ್ಟು ಏರಿಕೆಯಾಗಿದೆ ಎಂದು ಆರ್ ಬಿ ಐ ಹೇಳಿದೆ. 
2019 ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಂಚನೆ ಪ್ರಕರಣ ಏರಿಕೆ!
2019 ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಂಚನೆ ಪ್ರಕರಣ ಏರಿಕೆ!

ಮುಂಬೈ: 2019 ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಂಚನೆಯ ಪ್ರಕರಣಗಳು ಶೇ.15 ರಷ್ಟು ಏರಿಕೆಯಾಗಿದ್ದು, ವಂಚನೆಯಾಗಿರುವ ಮೊತ್ತ ಶೇ.74 ರಷ್ಟು ಏರಿಕೆಯಾಗಿದೆ ಎಂದು ಆರ್ ಬಿ ಐ ಹೇಳಿದೆ. 

ಟ್ರೆಂಡ್ ಆಂಡ್ ಪ್ರೊಗ್ರೆಸ್ ಆಫ್ ಬ್ಯಾಂಕಿಂಗ್ ಇನ್ ಇಂಡಿಯಾ-2018-19 ಎಂಬ ವರದಿಯಲ್ಲಿ ಆರ್ ಬಿಐ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ. 2018 ರ ಹಣಕಾಸು ವರ್ಷದಲ್ಲಿ 5,916 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿತ್ತು. 2019 ರಲ್ಲಿ ಬರೊಬ್ಬರಿ 6,801 ಪ್ರಕರಣಗಳು ಬೆಳಕಿಗೆ ಬಂದಿವೆ, 2018 ರಲ್ಲಿ 41,167 ಕೋಟಿ ರೂಪಾಯಿ ಮೊತ್ತದ ವಂಚನೆ ನಡೆದಿತ್ತು. 2019 ರಲ್ಲಿ ಇದು 71,543 ಕೋಟಿಗೆ ಏರಿಕೆಯಾಗಿದೆ. 

2018-19 ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಹೆಚ್ಚಿನ ವಂಚನೆಯನ್ನು ವರದಿ ಮಾಡಿದ್ದು ಶೇ.55 ರಷ್ಟು ಪ್ರಕರಣಗಳು ಹಾಗೂ ಶೇ.90 ರಷ್ಟು ಹಣ ಇದರಲ್ಲಿತ್ತು. ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳು ಹಾಗೂ ವಿದೇಶಿ ಬ್ಯಾಂಕ್ ಗಳದ್ದು ಶೇ.30.7 ಹಾಗೂ ಶೇ.11.2 ರಷ್ಟು ಅನುಪಾತದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com