ಕೊನೆಗೂ ಇಳಿದ ಚಿನ್ನದ ದರ, ಬರೋಬ್ಬರಿ ಸಾವಿರ ರೂ. ಕಡಿತ

ಗಗನದತ್ತ ಮುಖ ಮಾಡಿ ಮಧ್ಯಮ ವರ್ಗದ ಜನರ ಆತಂಕಕ್ಕೆ ಕಾರಣವಾಗಿದ್ದ ಚಿನ್ನದ ದರ ಕೊನೆಗೂ ಇಳಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಗನದತ್ತ ಮುಖ ಮಾಡಿ ಮಧ್ಯಮ ವರ್ಗದ ಜನರ ಆತಂಕಕ್ಕೆ ಕಾರಣವಾಗಿದ್ದ ಚಿನ್ನದ ದರ ಕೊನೆಗೂ ಇಳಿಕೆಯಾಗಿದೆ.

42, 500ರೂ ಗಡಿ ದಾಟಿದ್ದ ಚಿನ್ನದ ಬೆಲೆ ಇದೀಗ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಗುರುವಾರ ಬೆಳಿಗ್ಗೆಯಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಕ್ಷೀಣಿಸಲು ಪ್ರಾರಂಭಿಸಿದವು. ಇದರ ಬೆನ್ನಲ್ಲೇ ಶುಕ್ರವಾರವೂ ಕೂಡ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 1,010 ರೂ. ಇಳಿದು 41,150 ರೂ.ಗೆ ತಲುಪಿದೆ. 

ಅಂತೆಯೇ ಬೆಳ್ಳಿಯ ಬೆಲೆಗಳೂ ಕೂಡ ಕುಸಿತ ಕಂಡಿದ್ದು, ಬೆಳ್ಳಿ 1,735 ರೂ. ಕಡಿಮೆಯಾಗಿ ಕೆಜಿಗೆ 47,825 ರೂ. ಆಗಿದೆ.

ಇನ್ನೂ ಕಡಿಮೆಯಾಗುವ ಸಾಧ್ಯತೆ
ಪ್ರಸ್ತುತ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ದರ, ಮುಂದಿನ ದಿನಗಳಲ್ಲಿ ಮತ್ತಷ್ಚು ಕಡಿಮೆಯಾಗುವ ಸಾಧ್ಯತೆ ಇದೆ. ತಾರಕ್ಕೇರಿದ್ದ ಇರಾನ್-ಅಮೆರಿಕ ಸಂಘರ್ಷಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಎರಡೂ ದೇಶಗಳು ಕ್ರಮ ಕೈಗೊಂಡ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ ಕೂಡ ತಿಳಿಯಾಗಿದೆ. ಇದಲ್ಲದೆ ವಿಶ್ವದ ಅತಿದೊಡ್ಡ ಚಿನ್ನದ ಇಟಿಎಫ್ ನಿಧಿಯಾದ ಎಸ್‌ಪಿಡಿಆರ್‌ನ ಹೋಲ್ಡಿಂಗ್ಸ್ ಸಹ ಮಾರಾಟವನ್ನು ಪ್ರಾರಂಭಿಸಿದೆ. ಅದಕ್ಕಾಗಿಯೇ ಚಿನ್ನದ ಬೆಲೆ ಇನ್ನೂ ಕುಸಿಯಬಹುದು ಎಂದು ಹೇಳಲಾಗಿದೆ. 2020 ರ ಮೊದಲ 10 ದಿನಗಳಲ್ಲಿ ಚಿನ್ನದ ಬೆಲೆ ಶೇ 5.5 ರಷ್ಟು ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com