ಟಾಟಾ ಗ್ರೂಪ್ ಗೆ ಸೈರಸ್ ಮಿಸ್ತ್ರಿ ಮರು ನೇಮಕ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಟಾಟಾ ಗ್ರೂಪ್ ನ ಕಾರ್ಯಕಾರಿ ನಿರ್ದೇಶಕರಾಗಿ ಸೈರಸ್ ಮಿಸ್ತ್ರಿಯವರನ್ನು ಮರು ನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(ಎನ್ ಸಿಎಲ್ಎಟಿ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯೊಡ್ಡಿದೆ.
ಸೈರಸ್ ಮಿಸ್ತ್ರಿ
ಸೈರಸ್ ಮಿಸ್ತ್ರಿ

ನವದೆಹಲಿ: ಟಾಟಾ ಗ್ರೂಪ್ ನ ಕಾರ್ಯಕಾರಿ ನಿರ್ದೇಶಕರಾಗಿ ಸೈರಸ್ ಮಿಸ್ತ್ರಿಯವರನ್ನು ಮರು ನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(ಎನ್ ಸಿಎಲ್ಎಟಿ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯೊಡ್ಡಿದೆ.


ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಬಿ ಆರ್ ಗವೈ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠ, ಎನ್ ಸಿಎಲ್ ಎಟಿಯ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಲು ಒಪ್ಪಿಕೊಂಡು ಮಿಸ್ತ್ರಿ ಮತ್ತು ಇತರರಿಗೆ ಇಂದು ನೊಟೀಸ್ ಜಾರಿ ಮಾಡಿದೆ.


ಎನ್ ಸಿಎಲ್ ಎಟಿ, ಸೈರಸ್ ಇನ್ವೆಸ್ಟ್ ಮೆಂಟ್ ಪ್ರೈವೆಟ್ ಲಿಮಿಟೆಡ್ ಮತ್ತು ಮಿಸ್ತ್ರಿಯವರ ಪರ ಡಿಸೆಂಬರ್ 18ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಟಾಟಾ ಸನ್ಸ್ ಪ್ರೈವೆಟ್ ಲಿಮಿಟೆಡ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿತ್ತು.


ಇನ್ನು, ಎನ್ ಚಂದ್ರಶೇಖರನ್ ಅವರ ನೇಮಕ ಅಕ್ರಮ ಎಂದು ನ್ಯಾಯಮಂಡಳಿ ಆದೇಶ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com