ರತನ್ ಟಾಟಾ ವಿರುದ್ಧದ 3 ಸಾವಿರ ಕೋಟಿ ರೂ. ಮಾನಹಾನಿ ಕೇಸ್ ಹಿಂಪಡೆದ ನುಸ್ಲಿ ವಾಡಿಯಾ

ಬಾಂಬೆ ಡೈಯಿಂಗ್ ಅಧ್ಯಕ್ಷ ನುಸ್ಲಿ ವಾಡಿಯಾ ಅವರು ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಹಾಗೂ ಇತರರ ವಿರುದ್ಧ ದಾಖಲಿಸಿದ್ದ ಮಾನಹಾನಿ ಕೇಸ್ ಗಳನ್ನು ಹಿಂಪಡೆದಿದ್ದಾರೆ.
ರತನ್ ಟಾಟ
ರತನ್ ಟಾಟ

ಮುಂಬೈ: ಬಾಂಬೆ ಡೈಯಿಂಗ್ ಅಧ್ಯಕ್ಷ ನುಸ್ಲಿ ವಾಡಿಯಾ ಅವರು ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಹಾಗೂ ಇತರರ ವಿರುದ್ಧ ದಾಖಲಿಸಿದ್ದ ಮಾನಹಾನಿ ಕೇಸ್ ಗಳನ್ನು ಹಿಂಪಡೆದಿದ್ದಾರೆ.

ರತನ್ ಟಾಟಾ ಹಾಗೂ ಇತರರು ವಾಡಿಯಾ ಅವರನ್ನು ಅವಮಾನಮಾಡುವ ಉದ್ದೇಶ ಇರಲಿಲ್ಲ ಎಂಬ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಸುಪ್ರೀಂ ಪೀಠ, ಮಾನಹಾನಿ ಪ್ರಕರಣ ಹಿಂಪಡೆಯಲು ಅನುಮತಿ ನೀಡಿದೆ.

ಕಳೆದ ಜನವರಿ 6 ರಂದು ಸುಪ್ರೀಂ ಕೋರ್ಟ್, ವಾಡಿಯಾ ಹಾಗೂ ಟಾಟಾ ಅವರಿಗೆ ಒಟ್ಟಿಗೆ ಕುಳಿತು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವಂತೆ ಇಬ್ಬರಿಗೂ ಸೂಚಿಸಿತ್ತು. ಇದೀಗ ಪರಸ್ಪರ ಚರ್ಚಿಸಿ ಪ್ರಕರಣ ಹಿಂಪಡೆದುಕೊಂಡಿದ್ದಾರೆ.

ಟಾಟಾ ಸಂಸ್ಥೆಯ ವಿವಿಧ ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದ ನುಸ್ಲಿ ವಾಡಿಯಾ ಅವರನ್ನು ನಿರ್ದೇಶಕ ಮಂಡಳಿಯನ್ನು ತೆಗೆದು ಹಾಜಲಾಗಿತ್ತು. ಬಳಿಕ ಟಾಟಾ ತನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ವಾಡಿಯಾ ಅವರು 3 ಸಾವಿರ ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com