ಮಾರ್ಚ್ ನಂತರ ಡೆಬಿಟ್, ಕ್ರೆಡಿಟ್ ಕಾರ್ಡುಗಳಲ್ಲಿ ಭಾರೀ ಬದಲಾವಣೆ: ಆರ್ ಬಿಐ ಹೊಸ ಆದೇಶದಲ್ಲಿ ಏನಿದೆ? 

ಮಾರ್ಚ್ 16ರ ನಂತರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳ ಬಳಕೆಯಲ್ಲಿ ಮಹತ್ತರ ಬದಲಾವಣೆಯುಂಟಾಗಲಿದೆ.
ಮಾರ್ಚ್ ನಂತರ ಡೆಬಿಟ್, ಕ್ರೆಡಿಟ್ ಕಾರ್ಡುಗಳಲ್ಲಿ ಭಾರೀ ಬದಲಾವಣೆ: ಆರ್ ಬಿಐ ಹೊಸ ಆದೇಶದಲ್ಲಿ ಏನಿದೆ? 

ಹೈದರಾಬಾದ್: ಮಾರ್ಚ್ 16ರ ನಂತರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳ ಬಳಕೆಯಲ್ಲಿ ಮಹತ್ತರ ಬದಲಾವಣೆಯುಂಟಾಗಲಿದೆ.


ಗ್ರಾಹಕರು ಬಳಸುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳು ಹೆಚ್ಚು ಸುರಕ್ಷಿತವಾಗಿರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಸೋಮವಾರ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ಹೊರಡಿಸಿದ್ದು ಅದರ ಪ್ರಕಾರ, ಮುಂದಿನ ಮಾರ್ಚ್ 16ರ ನಂತರ ಎಲ್ಲಾ ಹೊಸ ಮತ್ತು ಹಳೆಯ ಡೆಬಿಟ್, ಕ್ರೆಡಿಟ್ ಕಾರ್ಡುಗಳು ದೇಶದೊಳಗೆ ಮಾತ್ರ ಸಕ್ರಿಯವಾಗಿರುತ್ತವೆ.


ಅಂತಾರಾಷ್ಟ್ರೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಹೊಂದಿರುವವರು, ಬ್ಯಾಂಕುಗಳಿಗೆ ತಮ್ಮ ಕಾರ್ಡುಗಳನ್ನು ಆಕ್ಟಿವೇಟ್ ಮಾಡಿ ಎಂದು ಮನವಿ ಸಲ್ಲಿಸಿದರೆ ಮಾತ್ರ ಅದು ಸಕ್ರಿಯವಾಗುತ್ತದೆ. ಎಟಿಎಂಗಳಲ್ಲಿ ಮತ್ತು ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಗಳಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡುಗಳ ವಿತರಣೆ ಮತ್ತು ಮರು ವಿತರಣೆ ಮಾಡುವ ಸಂದರ್ಭಗಳಲ್ಲಿ ಭಾರತದೊಳಗೆ ಮಾತ್ರ ಕಾರ್ಡು ವಹಿವಾಟುಗಳಿಗೆ ಬ್ಯಾಂಕುಗಳು ಅನುವು ಮಾಡಿಕೊಡುತ್ತವೆ.


ಇನ್ನು ಮುಂದೆ ಅಂತಾರಾಷ್ಟ್ರೀಯ ವಹಿವಾಟು ಆಗಿರಲಿ, ಆನ್ ಲೈನ್ ಮತ್ತು ಸಂಪರ್ಕರಹಿತ ವಹಿವಾಟುಗಳಾಗಿರಲಿ ಗ್ರಾಹಕರು ಯಾವ ಸೇವೆ ತಮಗೆ ಬೇಕೆಂದು ಬ್ಯಾಂಕುಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಪಡೆದುಕೊಳ್ಳಬೇಕಾಗುತ್ತದೆ.


ವಿದೇಶಿ ಪ್ರಯಾಣ ಸಂದರ್ಭದಲ್ಲಿ ಅಥವಾ ಸಂಪರ್ಕರಹಿತ ವಹಿವಾಟುಗಳಿಗೆ ಪಾವತಿ ಮಾಡಿರದಿದ್ದರೆ, ಆನ್ ಲೈನ್ ವಹಿವಾಟು ನಡೆಸಿರದಿದ್ದರೆ ಅಂತಹ ಗ್ರಾಹಕರ ಸೇವೆಗಳನ್ನು ಡಿ ಆಕ್ಟಿವೇಟ್ ಮಾಡಲಾಗುತ್ತದೆ. 


ಇಲ್ಲಿ ಇನ್ನೊಂದು ಆಸಕ್ತಿಕರ ಸಂಗತಿಯೆಂದರೆ ಗ್ರಾಹಕರು ಕಾರ್ಡುಗಳನ್ನು ವಹಿವಾಟು ನಡೆಸುವ ಅಗತ್ಯವಿರುವಾಗ ಸ್ವಿಚ್ ಆನ್ ಮಾಡಿಕೊಳ್ಳಬಹುದು, ಬೇಡೆಂದಾಗ ಸ್ವಿಚ್ ಆಫ್ ಮಾಡಬಹುದು. ಅಂದರೆ ಉದಾಹರಣೆಗೆ ಎಟಿಎಂ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಮತ್ತು ಮಾಡಿದ ನಂತರ ಬ್ಲಾಕ್ ಮಾಡುವುದು, ಅನ್ ಬ್ಲಾಕ್ ಮಾಡುವುದು ಮಾಡಬಹುದು.


ಇದರಿಂದಾಗುವ ಲಾಭವೆಂದರೆ ಅಕಸ್ಮಾತ್ ಯಾರಾದರೂ ತಮ್ಮ ಡೆಬಿಟ್, ಕ್ರೆಡಿಟ್ ಕಾರ್ಡು ಕಳೆದುಕೊಂಡಾಗ ಅದನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳಲು ಆಗುವುದಿಲ್ಲ. ಕಾರ್ಡುದಾರರಿಗೆ ಪ್ರತಿನಿತ್ಯ ನಡೆಸುವ ವಹಿವಾಟಿನ ಮಿತಿಯನ್ ನಿಗದಿಪಡಿಸಿಕೊಳ್ಳಬಹುದು. ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ ಮತ್ತು ಇತರ ಸೇವೆಗಳಲ್ಲಿ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತವೆ.


ಈಗಿರುವ ಕಾರ್ಡುದಾರರಲ್ಲಿ ಅವರ ಕಾರ್ಡುಗಳನ್ನು ಡಿ ಆಕ್ಟಿವೇಟ್ ಮಾಡಬೇಕೆ ಮತ್ತು ಮರು ಬಳಕೆ ಮಾಡಲು ಅನುವು ಮಾಡಿಕೊಡಬಹುದೇ ಅಥವಾ ಅಂತಾರಾಷ್ಟ್ರೀಯ ಬಳಕೆ ಆಯ್ಕೆಯನ್ನು ಡಿ ಆಕ್ಟಿವೇಟ್ ಮಾಡಬೇಕೆ ಎಂದು ಬ್ಯಾಂಕುಗಳು ನಿರ್ಧರಿಸುತ್ತವೆ. 


ಬ್ಯಾಂಕುಗಳ ಈ ನಿಯಮ ಪ್ರಿಪೇಡ್ ಗಿಫ್ಟ್ ಕಾರ್ಡುಗಳು ಮತ್ತು ಮಾಸ್ ಟ್ರಾನ್ಸಿಟ್ ಸಿಸ್ಟಮ್ ಗಳ ಬಳಕೆದಾರರಿಗೆ ಅನ್ವಯವಾಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com