ಗುಣಮಟ್ಟ ಕೊರತೆ: ಚೀನಾದ ಆಟಿಕೆಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ 

ಚೀನಾದ ಆಟಿಕೆಗಳಿಂದ ದೇಶೀಯ ಆಟಿಕೆ ಮಾರುಕಟ್ಟೆಗಳಿಗೆ ಹೊಡೆತವಾಗುತ್ತಿದೆ ಅಲ್ಲದೆ ಚೀನಾದ ಆಟಿಕೆಗಳ ಗುಣಮಟ್ಟ ಕಳಪೆಯಾಗಿವೆ ಎಂಬ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮೇಡ್ ಇನ್ ಚೀನಾ ಆಟಿಕೆಗಳಿಗೆ ಅಧಿಕ ತೆರಿಗೆ ವಿಧಿಸಲು ಚಿಂತಿಸುತ್ತಿದೆ.
ಗುಣಮಟ್ಟ ಕೊರತೆ: ಚೀನಾದ ಆಟಿಕೆಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ 

ನವದೆಹಲಿ: ಚೀನಾದ ಆಟಿಕೆಗಳಿಂದ ದೇಶೀಯ ಆಟಿಕೆ ಮಾರುಕಟ್ಟೆಗಳಿಗೆ ಹೊಡೆತವಾಗುತ್ತಿದೆ ಅಲ್ಲದೆ ಚೀನಾದ ಆಟಿಕೆಗಳ ಗುಣಮಟ್ಟ ಕಳಪೆಯಾಗಿವೆ ಎಂಬ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮೇಡ್ ಇನ್ ಚೀನಾ ಆಟಿಕೆಗಳಿಗೆ ಅಧಿಕ ತೆರಿಗೆ ವಿಧಿಸಲು ಚಿಂತಿಸುತ್ತಿದೆ.


ಭಾರತದ ಉನ್ನತ ಆಟಿಕೆ ಉತ್ಪಾದಕರು ಸಹ ಸರ್ಕಾರದ ಮುಂದೆ ಇದೇ ಮನವಿಯನ್ನು ಮುಂದಿಟ್ಟಿದ್ದರು. ಭಾರತದ ಮಾರುಕಟ್ಟೆಯಲ್ಲಿ ಚೀನಾದ ಆಟಿಕೆಗಳು ತುಂಬು ತುಳುಕಿ ದೇಶೀಯ ಮಾರುಕಟ್ಟೆಗೆ ಹೊಡೆತ ಬಿದ್ದಿದೆ. ಹೀಗಾಗಿ ಚೀನಾದ ಆಟಿಕೆಗಳನ್ನು ನಿಷೇಧಿಸುವಂತೆ ನಮಗೆ ಮನವಿಗಳು ಬಂದಿವೆ. ಸಂಪೂರ್ಣ ನಿಷೇಧ ಸಾಧ್ಯವಿಲ್ಲದಿದ್ದರೂ ಚೀನಾದ ಆಟಿಕೆಗಳಿಗೆ ಅಧಿಕ ತೆರಿಗೆ ವಿಧಿಸುವ ಮೂಲಕ ಕಡಿವಾಣ ಹಾಕಲು ನಾವು ಪರಿಗಣಿಸುತ್ತಿದ್ದೇವೆ ಎಂದು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


ಕೈಗಾರಿಕಾ ಅಂದಾಜಿನ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಸುಮಾರು ಶೇಕಡಾ 85ರಷ್ಟು ಆಟಿಕೆಗಳು ಆಮದು ಆಟಿಕೆಗಳಾಗಿದ್ದು ಚೀನಾದಿಂದ ಹಡಗು ಮೂಲಕ ಆಮದಾಗುತ್ತವೆ. ದೇಶೀಯ ಆಟಿಕೆ ಕೈಗಾರಿಕೆಗಳಲ್ಲಿ ಅಸಂಘಟಿತ ವಲಯಗಳಿಂದ ಆಟಿಕೆಗಳು ತಯಾರಾಗುತ್ತವೆ. ಅವುಗಳಲ್ಲಿ ಸುಮಾರು 4 ಸಾವಿರ ಸಣ್ಣ ಮತ್ತು ಮಧ್ಯಮವರ್ತಿಗಳಿಂದ ಬರುವಂಥವು. ಆದರೆ ಶೇಕಡಾ 75ರಷ್ಟು ಚೀನಾದಿಂದ ಆಮದಾಗಿ ನಮಗೆ ವ್ಯಾಪಾರಕ್ಕೆ ತೊಂದರೆಯಾಗುತ್ತವೆ ಎಂದು ದೇಶೀಯ ಮಾರಾಟಗಾರರು ಹೇಳುತ್ತಾರೆ.


ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಕೈಗಾರಿಕೆಗಳು ಒಟ್ಟಾಗಿ ಭಾರತೀಯ ಗುಣಮಟ್ಟ ಮಂಡಳಿ ನಡೆಸಿದ ಅಧ್ಯಯನ ಪ್ರಕಾರ ಚೀನಾದ ಬಹುತೇಕ ಆಟಿಕೆಗಳು ಭಾರತದ ಸುರಕ್ಷತೆ ಮಾನದಂಡದಲ್ಲಿ ವಿಫಲವಾಗಿದ್ದು ಮಕ್ಕಳ ಆರೋಗ್ಯಕ್ಕೂ ಹಾನಿಕರ ಎಂದು ಹೇಳಿದೆ. ಚೀನಾದಿಂದ ಆಮದಾಗುವ ಶೇಕಡಾ 67 ಆಟಿಕೆಗಳು ಗುಣಮಟ್ಟ ಮಾನದಂಡದಲ್ಲಿ ವಿಫಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com