ಚೀನಾ ಕಂಪನಿಗಳಿಗೆ ಮತ್ತೊಂದು ಶಾಕ್! ಬಿಎಸ್‌ಎನ್‌ಎಲ್ 4ಜಿ ಟೆಂಡರ್ ರದ್ದು
ಚೀನಾದ ಯಾವುದೇ ಉಪಕರಣಗಳನ್ನು ಬಳಸಬೇಡಿ ಎಂದು ಹೇಳಿದ ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ 4ಜಿ ಟೆಲಿಕಾಂ ನೆಟ್‌ವರ್ಕ್ ಅಪ್ ಗ್ರೇಡ್ ಗಾಗಿ ಒಪ್ಪಿಕೊಂಡಿದ್ದ ಬಹು ಕೋಟಿ ಟೆಂಡರ್ ಅನ್ನು ರದ್ದುಪಡಿಸಿದೆ.
Published: 01st July 2020 10:09 PM | Last Updated: 01st July 2020 10:09 PM | A+A A-

ಬಿಎಸ್ಎನ್ಎಲ್
ನವದೆಹಲಿ: ಚೀನಾದ ಯಾವುದೇ ಉಪಕರಣಗಳನ್ನು ಬಳಸಬೇಡಿ ಎಂದು ಹೇಳಿದ ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ 4ಜಿ ಟೆಲಿಕಾಂ ನೆಟ್‌ವರ್ಕ್ ಅಪ್ ಗ್ರೇಡ್ ಗಾಗಿ ಒಪ್ಪಿಕೊಂಡಿದ್ದ ಬಹು ಕೋಟಿ ಟೆಂಡರ್ ಅನ್ನು ರದ್ದುಪಡಿಸಿದೆ.
ಚೀನಾದ ಗಡಿಯಲ್ಲಿ ಉದ್ವಿಗ್ನತೆ ಬಳಿಕ ಚೀನಾದ ಸರಕು ಮತ್ತು ಸೇವೆಗಳ ವಿರುದ್ಧ ಹೆಚ್ಚುತ್ತಿರುವ ಆಕ್ರೋಶದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಚೀನಾದೊಂದಿಗಿನ 4ಜಿ ಟೆಂಡರ್ ರದ್ದುಗೊಳಿಸುವಂತೆ ಬಿಎಸ್‌ಎನ್‌ಎಲ್ ಬುಧವಾರ ನೋಟಿಸ್ ನೀಡಿದೆ.
ಶೀಘ್ರವೇ ಹೊಸ ಟೆಂಡರ್ ಕರೆಯಲಾಗುತ್ತದೆ ಮತ್ತು ಇದು ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆ ನೀಡುತ್ತದೆ ಎಂದು ಈ ಬೆಳವಣಿಗೆಗಳ ಮೂಲದ ಬಗ್ಗೆ ನಿಖರ ಮಾಹಿತಿ ತಿಳಿದಿರುವ ಮೂಲಗಳು ಹೇಳಿದೆ.
ಏತನ್ಮಧ್ಯೆ, 4ಜಿ ಅಪ್‌ಗ್ರೇಡ್‌ನಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಸರ್ಕಾರ ಈ ಹಿಂದೆ ಬಿಎಸ್‌ಎನ್‌ಎಲ್‌ಗೆ ನಿರ್ದೇಶನ ನೀಡಿತ್ತು ಮತ್ತು ನಿರ್ದೇಶನದ ಅನುಷ್ಠಾನದ ಅನುಸಾರ ಕಂಪನಿಯು ಹೊಸ ಟೆಂಡರ್ ನೀಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಅಭಿವೃದ್ಧಿ ಹೊಂದುತ್ತಿರುವ ಭಾರತೀಯರ ಸಾಮರ್ಥ್ಯ ಹಾಗೂ ಆಂತರಿಕ ತಂತ್ರಜ್ಞಾನವನ್ನು ಗಮನದಲ್ಲಿಟ್ಟುಕೊಂಡು, ಹೊಸ ಟೆಂಡರ್ ಕರೆಯಲಾಗುತ್ತದೆ
ಸುಮಾರು ಹದಿನೈದು ದಿನಗಳ ಹಿಂದೆ, ಟೆಲಿಕಾಂ ಇಲಾಖೆಯು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳನ್ನು ತಮ್ಮ 4ಜಿ ಅಪ್‌ಗ್ರೇಡ್‌ನಲ್ಲಿ ಚೀನಾದ ಟೆಲಿಕಾಂ ಉಪಕರಣಗಳ ಬಳಕೆಯನ್ನು ದೂರವಿಡುವಂತೆ ಕೇಳಿಕೊಂಡಿದ್ದು, ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಿಲುವನ್ನು ಗಟ್ಟಿ ಮಾಡುವಂತೆ ಮಾಡಿದೆ.