'ಚಿಂಗಾರಿ' ಸೈಟ್ ನಲ್ಲಿ ಲೋಪ: ಭದ್ರತಾ ಸಂಶೋಧಕರ ಆರೋಪ!

ಟಿಕ್ ಟಾಕ್ ಗೆ ಪರ್ಯಾಯವೆಂದೇ ಬಿಂಬಿಸಲಾಗುತ್ತಿದ್ದ ಚಿಂಗಾರಿ ಆಪ್ ನ ಸೈಟ್ ನಲ್ಲಿ ಲೋಪವಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ. 
ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆಪ್ ಗೆ ಭಾರಿ ಬೇಡಿಕೆ: ಗಂಟೆಗೆ 1 ಲಕ್ಷ ಡೌನ್ ಲೋಡ್
ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆಪ್ ಗೆ ಭಾರಿ ಬೇಡಿಕೆ: ಗಂಟೆಗೆ 1 ಲಕ್ಷ ಡೌನ್ ಲೋಡ್

ನವದೆಹಲಿ: ಟಿಕ್ ಟಾಕ್ ಗೆ ಪರ್ಯಾಯವೆಂದೇ ಬಿಂಬಿಸಲಾಗುತ್ತಿದ್ದ ಚಿಂಗಾರಿ ಆಪ್ ನ ಸೈಟ್ ನಲ್ಲಿ ಲೋಪವಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ. 

ಫ್ರೆಂಚ್ ನ ಭದ್ರತಾ ಸಂಶೋಧಕ ಎಲಿಯಟ್ ಆಲ್ಡರ್ಸನ್ ಪ್ರಕಾರ ಸಾಮಾಜಿಕ ಜಾಲತಾಣ ಆಪ್ ನ ಹಿಂದಿರುವ ಕಂಪನಿ ಗ್ಲೋಬಸ್ಸಾಫ್ಟ್ ನ ವೆಬ್ ಸೈಟ್ ಭದ್ರತಾ ವಿಷಯದಲ್ಲಿ ಲೋಪವನ್ನೆಸಗಿದೆ. ಆದರೆ ಈ ಆರೋಪವನ್ನು ಚಿಂಗಾರಿ ಆಪ್ ಕಂಪನಿ ನಿರಾಕರಿಸಿದ್ದು, ಆಪ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದೆ. 

ಭದ್ರತಾ ಸಂಶೋಧಕರ ಪ್ರಕಾರ ವೆಬ್ ಸೈಟ್ ನ ಡ್ರಾಪ್ ಸ್ಕ್ರಿಪ್ಟ್ ಗೆ ದುರುದ್ದೇಶಪೂರಿತ ಕೋಡ್ ಸೇರಿಸಲಾಗಿದ್ದು, ಬಳಕೆದಾರರನ್ನು ಬೇರೆ ವೆಬ್ ತಾಣಗಳಿಗೆ ರಿಡೈರೆಕ್ಟ್ ಮಾಡುತ್ತಿವೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿಂಗಾರಿಯ ಸಹಸ್ಥಾಪಕ ಹಾಗೂ ಚೀಫ್ ಪ್ರೊಡ್ಯೂಸರ್ ಸುಮಿತ್ ಘೋಷ್, ಚಿಂಗಾರಿ ಆಪ್ ನ್ನು ಗ್ಲೋಬಸ್ಸಾಫ್ಟ್ ಸಂಸ್ಥೆಯೇ ಮಾಡಿಕೊಟ್ಟಿರುವುದಾದರೂ ಆಪ್ ನ ಭದ್ರತಾ ಅಥವಾ ಗೌಪ್ಯತೆಯ ಅಂಶಗಳೊಂದಿಗೆ ರಾಜಿಯಾಗಿಲ್ಲ, ಬಳಕೆದಾರರ ಡಾಟಾ ಪ್ರತ್ಯೇಕವಾದ ಸುರಕ್ಷಿತವಾದ ಎಡಬ್ಲ್ಯು ಎಸ್ ಸರ್ವರ್ ನಲ್ಲಿ ಭದ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com