ವಿದೇಶಿ ವಿನಿಮಯ ಮೀಸಲು 1.27 ಬಿಲಿಯನ್ ಡಾಲರ್ ನಷ್ಟು ಏರಿಕೆ!

ಕಳೆದ ವಾರ ತೀವ್ರ ಕುಸಿತ ಕಂಡಿದ್ದ ಭಾರತದ ವಿದೇಶಿ ವಿನಿಮಯ ಮೀಸಲು ಈ ವಾರ 1.27 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ.
ಭಾರತದ ವಿದೇಶಿ ವಿನಿಮಯ ಮೀಸಲು
ಭಾರತದ ವಿದೇಶಿ ವಿನಿಮಯ ಮೀಸಲು

ನವದೆಹಲಿ: ಕಳೆದ ವಾರ ತೀವ್ರ ಕುಸಿತ ಕಂಡಿದ್ದ ಭಾರತದ ವಿದೇಶಿ ವಿನಿಮಯ ಮೀಸಲು ಈ ವಾರ 1.27 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ.

506.84 ಬಿಲಿಯಬ್ ಡಾಲರ್ ಗೆ ಏರಿಕೆಯಾಗಿದೆ ಎಂದು ಆರ್ ಬಿಐ ನ ಅಂಕಿಂಶಗಳಿಂದ ತಿಳಿದುಬಂದಿದೆ. ಜೂ.19 ರಂದು ಮುಕ್ತಾಯಗೊಂಡಿದ್ದ ಕಳೆದ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 2.08 ಬಿಲಿಯನ್ ಡಾಲರ್ ನಷ್ಟು ಇಳಿಕೆಯಾಗಿ 505.57 ಬಿಲಿಯನ್ ಡಾಲರ್ ಗೆ ಕುಸಿದಿತ್ತು.

ಚಿನ್ನದ ಮೀಸಲು 707 ಮಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 33.52 ಬಿಲಿಯನ್ ಡಾಲರ್ ನಷ್ಟಾಗಿದೆ. ಐಎಂಎಫ್ ನಿಂದ ವಿಶೇಷವಾಗಿ ಹಿಂತೆಗೆಯಬಹುದಾದ ಹಕ್ಕುಗಳ ಮೊತ್ತ 3ಮಿಲಿಯನ್ ಡಾಲರ್ ನಷ್ಟು ಕಡಿಮೆ ಮಾಡಲಾಗಿದ್ದು 1.44 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಆದರೆ ಐಎಂಎಫ್ ನಲ್ಲಿ ದೇಶದ ಮೀಸಲು ಸ್ಥಿತಿ 3 ಮಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 4.27 ಬಿಲಿಯನ್ ಗೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com