ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಕೈಗಾರಿಕೋದ್ಯಮಿಗಳು ಒಟ್ಟಾಗಬೇಕಿದೆ: ಸಜ್ಜನ್ ಜಿಂದಾಲ್

ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಕೈಗಾರಿಕೋದ್ಯಮಿಗಳು ಒಟ್ಟಾಗಲು ಜೆಎಸ್‌ಡಬ್ಲ್ಯೂ ಗ್ರೂಪ್ ಮಾಲೀಕ ಸಜ್ಜನ್ ಜಿಂದಾಲ್ ಕರೆ ನೀಡಿದ್ದಾರೆ.
ಸಜ್ಜನ್ ಜಿಂದಾಲ್
ಸಜ್ಜನ್ ಜಿಂದಾಲ್

ನವದೆಹಲಿ: ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಕೈಗಾರಿಕೋದ್ಯಮಿಗಳು ಒಟ್ಟಾಗಲು ಜೆಎಸ್‌ಡಬ್ಲ್ಯೂ ಗ್ರೂಪ್ ಮಾಲೀಕ ಸಜ್ಜನ್ ಜಿಂದಾಲ್ ಕರೆ ನೀಡಿದ್ದಾರೆ.

ಭಾರತೀಯ ಯೋಧರನ್ನು ಎಲ್‌ಎಸಿಯಲ್ಲಿ ಚೀನಿಯರು ಹತ್ಯೆಗೈದಿದ್ದು ಇಂತಹ ದುಷ್ಟ ನಡೆಯ ನಂತರವೂ ಚೀನಾ ಜೊತೆ ವ್ಯವಹಾರವು ಎಂದಿನಂತೆ ಹೋಗಲು ಸಾಧ್ಯವಿಲ್ಲ ಸಜ್ಜನ್ ಜಿಂದಾಲ್ ಹೇಳಿದ್ದಾರೆ.

14 ಬಿಲಿಯನ್ ಡಾಲರ್ ಗ್ರೂಪ್ ಸಿಮೆಂಟ್ ವ್ಯವಹಾರವನ್ನು ನೋಡಿಕೊಳ್ಳುವ ಸಜ್ಜನ್ ಜಿಂದಾಲ್ ಅವರ ಮಗ ಪಾರ್ತ್ ಜಿಂದಾಲ್ ಗುರುವಾರ ಮುಂದಿನ 24 ತಿಂಗಳಲ್ಲಿ 400 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ವಾರ್ಷಿಕ ಆಮದನ್ನು ಚೀನಾದಿಂದ ನಿಲ್ಲಿಸುವುದಾಗಿ ಹೇಳಿದ್ದರು.

ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಉಲ್ಲೇಖಿಸಿದ ಅವರು, ಈ ನಿರ್ಧಾರವೂ ಚೀನಾ ಭಾರತದ ನೆಲದಲ್ಲಿ ಮಾಡಿದ ದುಷ್ಕೃತ್ಯದ ಪರಿಣಾಮವಾಗಿದೆ ಎಂದು ಹೇಳಿದರು.

ಸಜ್ಜನ್ ಜಿಂದಾಲ್ ಅವರು "ನಮ್ಮ ಸೈನಿಕರು ಎಲ್‌ಎಸಿಯಲ್ಲಿ(ವಾಸ್ತವಿಕ ನಿಯಂತ್ರಣದ ರೇಖೆ) ಹತ್ಯೆಯಾದ ನಂತರವೂ ನಮ್ಮ ವ್ಯವಹಾರಕ್ಕಾಗಿ ಅಗ್ಗದ ಚೀನೀ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ನಾವು ಹಣವನ್ನು ಸಂಪಾದಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಎಲ್ಲಾ ಕೈಗಾರಿಕೋದ್ಯಮಿಗಳು ಒಗ್ಗೂಡಿ ಬಲಿಷ್ಠ ಆತ್ಮ ನಿರ್ಭರ ಭಾರತ್‌ಗೆ ಒತ್ತು ನೀಡಬೇಕಿದೆ. "ಗುಣಮಟ್ಟ ಮತ್ತು ಪ್ರಮಾಣವನ್ನು ಸಾಧಿಸುವಲ್ಲಿ ನಮ್ಮ ದೇಶೀಯ ಉತ್ಪಾದಕರಿಗೆ ಬೆಂಬಲ ನೀಡೋಣ. ನಾವು ನಮ್ಮ ಸ್ವಂತ ಉತ್ಪನ್ನಗಳಿಗೆ ನಿಷ್ಠೆಯನ್ನು ತೋರಿಸಬೇಕಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com