ಕಾಂಟ್ಯಾಕ್ಟ್‏ಲೆ‏ಸ್ ಕ್ಲಾಸ್ & ಕನಿಷ್ಠ ಬ್ಯಾಂಡ್‍ವಿಡ್ತ್ ಅಗತ್ಯತೆ ಮೂಲಕ ಶಾಲಾ ಶಿಕ್ಷಣ ಪರಿವರ್ತನೆ

ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡೇ ಸಂಪರ್ಕ ರಹಿತ ವರ್ಚುವಲ್ ಕ್ಲಾಸ್‍ರೂಂಗಳಲ್ಲಿ ಕಲಿಯುವುದು. ಗ್ರೋಥ್‍ಕೋಡ್ ಸೃಷ್ಟಿಸಿದ ಆನ್‍ಲೈನ್ ವರ್ಚುವಲ್ ಪ್ಲಾಟ್‍ಫಾರಂ ಪ್ರೊಲೀಯರ್ ಇನ್‍ಸ್ಟಿಟ್ಯೂಷನ್ ಇದನ್ನು ಸಾಧ್ಯವಾಗಿಸಿದೆ.

Published: 14th July 2020 05:49 PM  |   Last Updated: 14th July 2020 05:49 PM   |  A+A-


online classes

ಆನ್ಲೈನ್ ತರಗತಿ

Posted By : Prasad SN
Source : Online Desk

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದ್ದರೂ ಕುಟುಂಬದವರಿಗೆ ಆತಂಕದ ವಾತಾವರಣ ಇದ್ದೇ ಇದೆ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ಆಗಸ್ಟ್ ಬಳಿಕ ನಿರ್ಧಾರ ಕೈಗೊಳ್ಳಲಾಗುದೆಂದು ಪ್ರಕಟಿಸಲಾಗಿದ್ದು, ಹಲವು ನಿರ್ಬಂಧಗಳ ಹೊರತಾಗಿಯೂ ಪ್ರತಿದಿನ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುವುದರಿಂದ ಇರುವ ಅಪಾಯ ಸಾಧ್ಯತೆ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡೇ ಸಂಪರ್ಕ ರಹಿತ ವರ್ಚುವಲ್ ಕ್ಲಾಸ್‍ರೂಂಗಳಲ್ಲಿ ಕಲಿಯುವುದು. ಗ್ರೋಥ್‍ಕೋಡ್ ಸೃಷ್ಟಿಸಿದ ಆನ್‍ಲೈನ್ ವರ್ಚುವಲ್ ಪ್ಲಾಟ್‍ಫಾರಂ ಪ್ರೊಲೀಯರ್ ಇನ್‍ಸ್ಟಿಟ್ಯೂಷನ್ ಇದನ್ನು ಸಾಧ್ಯವಾಗಿಸಿದೆ. ಇದು ಶಾಲಾ ಕಾಲೇಜುಗಳು ಶಿಕ್ಷಣ ನೀಡುವ ವಿಧಾನವನ್ನು ಪರಿವರ್ತಿಸಲು ಇದು ಸಾಧ್ಯವಾಗಿಸುತ್ತದೆ.

ಈ ಬಗ್ಗೆ ವಿವರ ನೀಡಿದ ಗ್ರೋಥ್‍ಕೋಡ್ ಟೆಕ್ನಾಲಜಿ ಸೊಲ್ಯೂಶನ್ಸ್‍ನ ಸಹಸಂಸ್ಥಾಪಕ ರವಿ ಕೃಷ್ಣಮೂರ್ತಿ, “ಪ್ರೊಲೀಯರ್ ಇನ್‍ಸ್ಟಿಟ್ಯೂಟಷ್‍ನಿಂದಾಗಿ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ತರಗತಿ ತಪ್ಪಿಸಿಕೊಳ್ಳುವುದಿಲ್ಲ. ಪಾಠಗಳನ್ನು ವೈಯಕ್ತಿಕ ಕಲಿಕಾರ್ಥಿಗಳಿಗೆ ಯಾವುದೇ ಸಮಯದಲ್ಲಿ, ಎಲ್ಲೇ ಇದ್ದರೂ ವಿತರಿಸಲಾಗುತ್ತದೆ. ಆದ್ದರಿಂದ ನಿಗದಿತ ವೇಳಾಪಟ್ಟಿಗೆ ಸೀಮಿತವಾಗಬೇಕಿಲ್ಲ. ಈ ಪ್ರಕ್ರಿಯೆಯ ದೊಡ್ಡ ಪ್ರಯೋಜನವೆಂದರೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿರ್ದಿಷ್ಟ ದಿನ, ನಿಗದಿತ ಸಮಯದವರೆಗೆ ಮುಖಾಮುಖಿಯಾಗಿರುವ ಅಗತ್ಯವಿಲ್ಲ. ಅದು ಪಾಠದ ಕಲಿಕೆಗೆ ಇರಬಹುದು, ಮೌಲ್ಯಮಾಪನ ಅಥವಾ ಅಭಿಪ್ರಾಯ ನೀಡುವುದಕ್ಕೆ ಇರಬಹುದು” ಎಂದು ಹೇಳಿದರು.

“ಕಲಿಕೆಯಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಸಲ್ಲಿಕೆಯ ಸಮಯದ ಸೌಲಭ್ಯಗಳು, ಹಾಲಿ ಇರುವ ಎಲೆಕ್ಟ್ರಾನಿಕ್ ಸೌಲಭ್ಯಗಳನ್ನೇ ಬಳಸಿಕೊಳ್ಳುವ ಅನುಕೂಲತೆ ಇದ್ದು, ಕುಟುಂಬದ ಆರ್ಥಿಕ ಸ್ಥಿತಿ ಒತ್ತಡಕ್ಕೀಡಾಗಿರುವ ಸನ್ನಿವೇಶದಲ್ಲಿ ಕಲಿಕೆಗಾಗಿ ಲ್ಯಾಪ್‍ಟಾಪ್, ಟ್ಯಾಬ್ ಖರೀದಿಸುವ ಅಗತ್ಯವಿಲ್ಲ. ಇದಕ್ಕೆ ಅಗತ್ಯವಾದ ಬ್ಯಾಂಡ್‍ವಿಡ್ತ್ ಕೂಡಾ ಕನಿಷ್ಠವಾಗಿರುವುದರಿಂದ, ಪ್ರೊಲೀಯರ್ ಇನ್‍ಸ್ಟಿಟ್ಯೂಟ್, ಆನ್‍ಲೈನ್ ಕಲಿಕೆಗೆ ಇರುವ ದೊಡ್ಡ ತಡೆಯನ್ನು ನಿವಾರಿಸಿದೆ” ಎಂದು ವಿವರಿಸಿದರು.

ಇದರ ಲಭ್ಯತೆ ಹಾಗೂ ಕಾರ್ಯನಿರ್ವಹಣೆ ಸುಲಭವಾಗಿದ್ದು, ಯಾವುದೇ ಸ್ಮಾಟ್‍ಫೋನ್ ಸಾಧನ ಅಥವಾ ವೈಯಕ್ತಿಕ ಕಂಪ್ಯೂಟರ್‍ಗಳನ್ನು ಬಳಸಬಹುದಾಗಿದೆ. ಆನ್‍ಲೈನ್ ಉಪನ್ಯಾಸಗಳಿಗೆ ಅಗತ್ಯ ಬ್ಯಾಂಡ್‍ವಿಡ್ತ್ ಪಡೆಯಲು ಮೈಲುಗಟ್ಟಲೆ ತೆರಳಬೇಕಾದ ವಿದ್ಯಾರ್ಥಿಗಳಿಗೆ ಇದು ನಿಜಕ್ಕೂ ವರದಾನ.

ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ಯಾಕೇಜ್‍ಗಳನ್ನು ಪ್ರೊಲೀಯರ್ ಇನ್‍ಸ್ಟಿಟ್ಯೂಟ್ ಹೊಂದಿದೆ. ಶಿಕ್ಷಕರು ವೈಟ್‍ಬೋರ್ಡ್ ಬಳಸಬಹುದು. ಹಲವು ಕೋನಗಳಲ್ಲಿ ಪಾಠವನ್ನು ಮಾಡಬಹುದಾಗಿದೆ. ಜತೆಗೆ ಸೂಕ್ತ ಎನಿಸಿದ ವಿಡಿಯೊ ಅಂಶಗಳನ್ನೂ ಸೇರಿಸಬಹುದಾಗಿದೆ. ಸ್ಲೈಡ್, ಚಿತ್ರಗಳು, ಗ್ರಾಫಿಕ್ಸ್ ಕೂಡಾ ಬಳಸಬಹುದು. ಇಡೀ ಪಠ್ಯಕ್ರಮ ಆನ್‍ಲೈನ್‍ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಪುನರ್ ಮನನ ಮಾಡಲು ಅವಕಾಶವಿದೆ.

Stay up to date on all the latest ವಾಣಿಜ್ಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp