ವೇತನ ರಹಿತ ರಜೆಯ ಗರಿಷ್ಟ ಮಿತಿಯನ್ನು 5 ವರ್ಷಗಳವರೆಗೆ ವಿಸ್ತರಿಸಿದ ಏರ್ ಇಂಡಿಯಾ 

ಏರ್ ಇಂಡಿಯಾ ವೇತನ ರಹಿತ ರಜೆಯ ಗರಿಷ್ಟ ಮಿತಿಯನ್ನು 5 ವರ್ಷಗಳವರೆಗೆ ವಿಸ್ತರಿಸಿದೆ. ಸಂಸ್ಥೆಯ ಖಾಸಗೀಕರಣದ ಪ್ರಕ್ರಿಯೆ ವಿಳಂಬವಾಗುತ್ತಿರುವುದರ ನಡುವೆ ಏರ್ ಇಂಡಿಯಾ ಈ ಯೋಜನೆಯನ್ನು ಘೋಷಣೆ ಮಾಡಿದೆ. 
ವೇತನ ರಹಿತ ರಜೆಯ ಗರಿಷ್ಟ ಮಿತಿಯನ್ನು 5 ವರ್ಷಗಳವರೆಗೆ ವಿಸ್ತರಿಸಿದ ಏರ್ ಇಂಡಿಯಾ
ವೇತನ ರಹಿತ ರಜೆಯ ಗರಿಷ್ಟ ಮಿತಿಯನ್ನು 5 ವರ್ಷಗಳವರೆಗೆ ವಿಸ್ತರಿಸಿದ ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ವೇತನ ರಹಿತ ರಜೆಯ ಗರಿಷ್ಟ ಮಿತಿಯನ್ನು 5 ವರ್ಷಗಳವರೆಗೆ ವಿಸ್ತರಿಸಿದೆ. ಸಂಸ್ಥೆಯ ಖಾಸಗೀಕರಣದ ಪ್ರಕ್ರಿಯೆ ವಿಳಂಬವಾಗುತ್ತಿರುವುದರ ನಡುವೆ ಏರ್ ಇಂಡಿಯಾ ಈ ಯೋಜನೆಯನ್ನು ಘೋಷಣೆ ಮಾಡಿದೆ. 

6 ತಿಂಗಳಿನಿಂದ 5 ವರ್ಷದ ವರೆಗೆ ವೇತನ ರಹಿತ ರಜೆಯನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆ ಹೇಳಿದೆ. ವೈಮಾನಿಕ ಸಂಸ್ಥೆಯ ಮ್ಯಾನೇಜ್ಮೆಂಟ್ ಕೆಲವು ಮಾನದಂಡಗಳ ಆಧಾರದಲ್ಲಿ ಯಾವುದೇ ಉದ್ಯೋಗಿಯನ್ನು ರಜೆಯ ಮೇಲೆ ಕಳುಹಿಸುವ ಆಯ್ಕೆಯನ್ನು ಹೊಂದಿರಲಿದೆ.


ಉದ್ಯೋಗಿ ಎದುರಿಸುತ್ತಿರುವ ಸಂದರ್ಭ, ದಕ್ಷತೆ, ಸಾಮರ್ಥ್ಯ, ಕಾರ್ಯಕ್ಷಮತೆಯ ಗುಣಮಟ್ಟ, ನೌಕರನ ಆರೋಗ್ಯ, ಆ ನೌಕರನ ಈ ಹಿಂದಿನ ಕರ್ತವ್ಯದ ಲಭ್ಯತೆ ಯ ಉದಾಹರಣೆಗಳನ್ನು ಪರಿಗಣಿಸಿ, ಸಂಸ್ಥೆ ಉದ್ಯೋಗಿಗೆ ದೀರ್ಘಾವಧಿ ರಜೆ ನೀಡುವುದರ ಕುರಿತು ತೀರ್ಮಾನಿಸಲಿದೆ. ಇದೇ ವೇಳೆ ಏರ್ ಇಂಡಿಯಾದ ಯೂನಿಯನ್ ಗಳು ಈ ಬೆಳವಣಿಗೆಗೆ ಸಂಬಂಧಿಸಿದಂತೆ ಆನ್ ಲೈನ್ ಸಭೆ ನಡೆಸಲು ತೀರ್ಮಾನಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಯೂನಿಯನ್ ನಾಯಕರೊಬ್ಬರು ಐಎಎನ್ಎಸ್ ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ ಡಬ್ಲ್ಯೂ ಪಿ ಬೋರ್ಡ್ ನಾದ್ಯಂತ ಎಲ್ಲಾ ಉದ್ಯೋಗಿಗಳಿಗೂ ಅನ್ವಯಿಸಬೇಕು, ಹೊರೆಯನ್ನು ಎಲ್ಲಾ ಉದ್ಯೋಗಿಗಳೂ ಹೊರಬೇಕು, ಇದು ಮಾರುಕಟ್ಟೆ ಪ್ರಮಾಣಿಕೃತವಾಗಿಲ್ಲ, ಮ್ಯಾನೇಜ್ಮೆಂಟ್ ತನಗೆ ಇಷ್ಟ ಬಂದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ. 2019 ರ ನವೆಂಬರ್ 1 ವರೆಗೆ ಏರ್ ಇಂಡಿಯಾದಲ್ಲಿ ಫಿಕ್ಸ್ಡ್ ಟರ್ಮ್ ಕಾಂಟ್ರ್ಯಾಕ್ಟ್ ಸಿಬ್ಬಂದಿಗಳೂ ಸೇರಿ 14,000 ಉದ್ಯೋಗಿಗಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com