4 ತಿಂಗಳಲ್ಲಿ ಶೇ.67ರಷ್ಟು ಬೆಳವಣಿಗೆ ಹಿನ್ನೆಲೆ: ಬೆಂಗಳೂರಿನಲ್ಲಿ ಹೊಸ ಜೂಮ್ ಟೆಕ್ ಸೆಂಟರ್ ಸ್ಥಾಪನೆ ಶೀಘ್ರ

ಗೂಗಲ್, ಮೈಕ್ರೋಸಾಫ್ಟ್ ಮತ್ತು ಜಿಯೋ ಮುಂತಾದ ಟೆಕ್ ಸಂಸ್ಥೆಗಳ ಪ್ರತಿಸ್ಪರ್ಧಿ  ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಸಂಸ್ಥೆ ಜೂಮ್ ತನ್ನ ಭಾರತೀಯ ಹಾಗೂ  ಜಾಗತಿಕ ಸೇವೆಗಳ ಇನ್ನಷ್ಟು ಉತ್ತಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ  ಶೀಘ್ರದಲ್ಲೇ ತನ್ನ ಮೊದಲ ಟೆಕ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಿದೆ.

Published: 21st July 2020 02:56 PM  |   Last Updated: 21st July 2020 03:08 PM   |  A+A-


ಜೂಮ್

Posted By : Raghavendra Adiga
Source : The New Indian Express

ಬೆಂಗಳೂರು: ಗೂಗಲ್, ಮೈಕ್ರೋಸಾಫ್ಟ್ ಮತ್ತು ಜಿಯೋ ಮುಂತಾದ ಟೆಕ್ ಸಂಸ್ಥೆಗಳ ಪ್ರತಿಸ್ಪರ್ಧಿ ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಸಂಸ್ಥೆ ಜೂಮ್ ತನ್ನ ಭಾರತೀಯ ಹಾಗೂ  ಜಾಗತಿಕ ಸೇವೆಗಳ ಇನ್ನಷ್ಟು ಉತ್ತಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ತನ್ನ ಮೊದಲ ಟೆಕ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಿದೆ. ಈ ವಿಚಾರವನ್ನು ಸಂಸ್ಥೆಯ ಪ್ರಾಡಕ್ಟ್ ಆಂಡ್ಎಂಜಿನಿಯರಿಂಗ್ ವಿಭಾಗದ ಡೈರೆಕ್ಟರ್ ವೆಲ್ಚಾಮಿ ಶಂಕರಲಿಂಗಂ ಬಹಿರಂಗಪಡಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಜೂಮ್ ಬೆಂಗಳೂರು ಟೆಕ್ ಕೇಂದ್ರಕ್ಕೆ ಡೆವೊಪ್ಸ್ ಎಂಜಿನಿಯರ್‌ಗಳು, ಐಟಿ, ಸೆಕ್ಯುರಿಟಿ ಮತ್ತು ಬಿಸಿನೆಸ್ ಆಪರೇಶನ್‌ಗಳನ್ನು ನೇಮಕ ಮಾಡಲು ಪ್ರಾರಂಭಿಸಿದೆ. ಈ ವರ್ಷ ಜನವರಿಯಿಂದ ಏಪ್ರಿಲ್ ನಡುವೆ ದೇಶದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಸೇವೆಯು ಶೇ.  6700 ರಷ್ಟು ಬೆಳವಣಿಗೆಯನ್ನು ಕಂಡಿದೆ.  "ಜನವರಿ-ಏಪ್ರಿಲ್ ನಡುವೆ ಭಾರತದಲ್ಲಿ ಪೇಯ್ಡ್  ಬಳಕೆದಾರರ ಸಂಖ್ಯೆ 4 ಪಟ್ಟು ಹೆಚ್ಚಾಗಿದೆ" ಎಂದು ಶಂಕರಲಿಂಗಂ ಹೇಳೀದ್ದಾರೆ.

ಜೂಮ್ ತನ್ನ ಅಸ್ತಿತ್ವದಲ್ಲಿರುವ ಮುಂಬೈ ಕಚೇರಿಯನ್ನು ಅದರ ಗಾತ್ರಕ್ಕಿಂತ ಮೂರು ಪಟ್ಟು ವಿಸ್ತರಿಸಲಿದೆ. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಜೂಮ್ ಭಾರತದಲ್ಲಿ ಮುಂಬೈ ಮತ್ತು ಹೈದರಾಬಾದ್‌ನಲ್ಲೂ ಡೇಟಾ ಕೇಂದ್ರಗಳನ್ನು ಹೊಂದಿದೆ. ಮತ್ತು ಕೊರೋನಾ ಸಂಕಟದ ಈ ಅವಧಿಯಲ್ಲಿ ಸಂಸ್ಥೆ ಭಾರತದಲ್ಲಿನ ತನ್ನೆಲ್ಲಾ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸ ಮಾಡಲು ನಿರ್ದೇಶಿಸಿದೆ. 

"ಭಾರತವು ಜೂಮ್ ಗೆ ಮಹತ್ವದ ತಾಣವಾಗಿದೆ. ಮತ್ತು ಇಲ್ಲಿಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸಬೇಕೆಂದು ನಾವು  ಆಶಿಸುತ್ತೇವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತದ 2,300 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ನಮ್ಮ ಸೇವೆಗಳನ್ನು ಉಚಿತವಾಗಿ ನೀಡಲು ನಾವು ಹೆಮ್ಮೆಪಡುತ್ತೇವೆ ಮತ್ತು ಈ ಮೂಲಕ ನಮ್ಮ ಸಂಸ್ಥೆ ಈ ದೇಶದಲ್ಲಿ ಇನ್ನಷ್ಟು ಹೆಚ್ಚು ಕೆಲಸ ಮಾಡುವುದನ್ನು ನೋಡಲಿದ್ದೇವೆ. ಈ ನಿಟ್ಟಿನಲ್ಲಿ ನಾವು ಭಾರತದ ಜನರು ಮತ್ತು ಸರ್ಕಾರದೊಂದಿಗೆ ಕೈ ಜೋಡಿಸಲಿದ್ದೇವೆ."ಜೂಮ್ ಸಿಇಒ ಎರಿಕ್ ಎಸ್. ಯುವಾನ್ ಹೇಳಿದರು.

"ಮುಂದಿನ ಕೆಲವು ವರ್ಷಗಳಲ್ಲಿ ತಂತ್ರಜ್ಞಾನ ಕೇಂದ್ರಕ್ಕೆ ಪ್ರಮುಖ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಾವು ಯೋಜಿಸುತ್ತಿದ್ದೇವೆ, ಭಾರತದ ಉನ್ನತ-ವಿದ್ಯಾವಂತ ಎಂಜಿನಿಯರಿಂಗ್ ಪ್ರತಿಭಾನ್ವಿತರಿಗೆ ನಾವು ಉದ್ಯೋಗ ನೀಡಲಿದ್ದು ಇದು ಸಂಸ್ಥೆಯ ಮುಂದಿನ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ, ”ಎಂದು ಅವರು ಹೇಳಿದರು.

Stay up to date on all the latest ವಾಣಿಜ್ಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp