ಜಗತ್ತಿನ 50 ಅಗ್ರ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಲಿಸ್ಟ್ ನಲ್ಲಿರೋ ಏಕೈಕ ಭಾರತೀಯ ಸಂಸ್ಥೆ!
ವಿಶ್ವದ ಅಗ್ರ ಬಿಲೇನಿಯರ್ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 13 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದದದದದದದದ ಬಳಿಕ ರ ಜಾಗತಿಕವಾಗಿ ಅಗ್ರ 50 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ. ಸ್ಟಾಕ್ ಮಾರುಕಟ್ಟೆಯ ಅಂಕಿಅಂಶಗಳ ಪ್ರಕಾರ ಆಯಿಲ್ ನಿಂದ ಟೆಲಿಕಾಂ ವ
Published: 23rd July 2020 07:42 PM | Last Updated: 23rd July 2020 07:53 PM | A+A A-

ಮುಖೇಶ್ ಅಂಬಾನಿ
ನವದೆಹಲಿ: ವಿಶ್ವದ ಅಗ್ರ ಬಿಲೇನಿಯರ್ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 13 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದ ಬಳಿಕ ರ ಜಾಗತಿಕವಾಗಿ ಅಗ್ರ 50 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ. ಸ್ಟಾಕ್ ಮಾರುಕಟ್ಟೆಯ ಅಂಕಿಅಂಶಗಳ ಪ್ರಕಾರ ಆಯಿಲ್ ನಿಂದ ಟೆಲಿಕಾಂ ವರೆಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ಸಂಥೆ ಜಾಗತಿಕವಾಗಿ 48 ನೇ ಸ್ಥಾನದಲ್ಲಿದೆ.
ಜಾಗತಿಕವಾಗಿ, ಸೌದಿ ಮೂಲದ ಅರಾಮ್ಕೊ 1.7 ಟ್ರಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಯಾಗಿದ್ದು, ಆಪಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಆಲ್ಫಾಬೆಟ್ ನಂತರದ ಸ್ಥಾನದಲ್ಲಿದೆ.
ರಿಲಯನ್ಸ್ ಗುರುವಾರ ಬಿಎಸ್‌ಇಯಲ್ಲಿ 2,060.65 ರೂ.ಗೆ ತಲುಪಿದ್ದು, ಹಿಂದಿನ ದಿನದ ಮುಕ್ತಾಯಕ್ಕಿಂತ ಶೇಕಡಾ 2.82 ರಷ್ಟು ಏರಿಕೆಯಾಗಿದೆ. ಇದು ಸಂಸ್ಥೆಗೆ 13 ಲಕ್ಷ ಕೋಟಿ ರೂ. ಮೌಲ್ಯವನ್ನು ಹೆಚ್ಚಿಸಿದೆ.ಇತ್ತೀಚಿನ ಹಕ್ಕುಗಳ ಸಂಚಿಕೆಯಲ್ಲಿ ಬಿಡುಗಡೆಯಾದ ಮತ್ತು ಪ್ರತ್ಯೇಕವಾಗಿ ವಹಿವಾಟು ನಡೆಸುತ್ತಿರುವ ಸಂಸ್ಥೆಯ ಭಾಗಶಃ-ಪಾವತಿಯಾದ ಷೇರುಗಳ ಜೊತೆಯಲ್ಲಿ, ಕಂಪನಿಯು ಒಟ್ಟು 13.5 ಲಕ್ಷ ಕೋಟಿ ರೂ. ಅಥವಾ 181 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮೊತ್ತವನ್ನು ಹೊಂದಿದೆ. ಇನ್ನು ಬೇರಾವ ಭಾರತೀಯ ಕಂಪನಿಯು ಈ ಮೌಲ್ಯವನ್ನು ಹೊಂದಿಲ್ಲ
ರಿಲಯನ್ಸ್ ಏಷ್ಯಾದ 10 ನೇ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿದ ಕಂಪನಿಯಾದರೆ ಚೀನಾದ ಅಲಿಬಾಬಾ ಗ್ರೂಪ್ ಜಾಗತಿಕವಾಗಿ 7 ನೇ ಸ್ಥಾನದಲ್ಲಿದೆ
ಟಾಪ್ 100 ಸಂಸ್ಥೆಗಳಲ್ಲಿರುವ ಏಕೈಕ ಭಾರತೀಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್. ಬಿಎಸ್‌ಇನಲ್ಲಿ ಅದರ ಎಂಡ್ ರೇಟ್ 2,170.75 ರೂ. ಆಗಿದೆ, ಟಿಸಿಎಸ್ ಮಾರುಕಟ್ಟೆ ಬಂಡವಾಳ 8.14 ಲಕ್ಷ ಕೋಟಿ ರೂ. ಅಥವಾ ಸುಮಾರು 109 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.