ಚಿನಿವಾರ ಪೇಟೆಗೂ ತಟ್ಟಿದ ಅಮೆರಿಕಾ-ಚೀನಾ ಬಿಕ್ಕಟ್ಟು ಬಿಸಿ: 51 ಸಾವಿರ ಗಡಿ ದಾಟಿದ ಚಿನ್ನ

ದಿನೇ ದಿನೇ ಗಗನಮುಖಿ ಆಗುತ್ತಿರುವ ಚಿನ್ನದ ದರ ಮತ್ತೊಮ್ಮೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಗ್ರಾಂ ಚಿನ್ನಕ್ಕೆ ರೂ 4,961 ದಾಖಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ದಿನೇ ದಿನೇ ಗಗನಮುಖಿ ಆಗುತ್ತಿರುವ ಚಿನ್ನದ ದರ ಮತ್ತೊಮ್ಮೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಗ್ರಾಂ ಚಿನ್ನಕ್ಕೆ ರೂ 4,961 ದಾಖಲಾಗಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನ ರೂ.49,560 ಇದ್ದರೆ, 24 ಕ್ಯಾರಟ್ 10 ಗ್ರಾಂ ಚಿನ್ನ ರೂ.50,760ಕ್ಕೆ ತಲುಪಿದೆ. 

ಇನ್ನು ಮುಂಬೈ ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನ ರೂ.49,610 ಇದ್ದರೆ, 24 ಕ್ಯಾರಟ್ 10 ಗ್ರಾಂ ಚಿನ್ನ ರೂ.50,610 ಕ್ಕೆ ತಲುಪಿದೆ. 

ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನ ರೂ.48,110 ಇದ್ದರೆ, 24 ಕ್ಯಾರಟ್ 10 ಗ್ರಾಂ ಚಿನ್ನ ರೂ.52,480 ಕ್ಕೆ ತಲುಪಿದೆ.

ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ, ರಾಜತಾಂತ್ರಿಕ ಚಿಕ್ಕಟ್ಟು, ಕೊರೋನಾ ಬಿಕ್ಕಟ್ಟು ಇನ್ನೂ ನಿವಾರಣೆಯಾಗದೇ ಇರುವುದು, ಚಿನ್ನದ ಮೇಲಿನ ಹೂಡಿಕೆ ಹಾಗೂ ಹಣದುಬ್ಬರದ ನಿರೀಕ್ಷೆಗಳು ಚಿನ್ನದ ದರ ಏರಿಕೆಗೆ ಕಾರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com