ಕೇಂದ್ರದಿಂದ ಜಿಎಸ್‌ಟಿ ಪರಿಹಾರ ಮೊತ್ತ ಬಿಡುಗಡೆ, ಕರ್ನಾಟಕಕ್ಕೆ 18,628 ಕೋಟಿ ರೂ.!

2019-20ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ 1,65,302 ಕೋಟಿ ರೂ ಜಿಎಸ್ ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದ್ದು, ಇದೇ ಅವಧಿಯಲ್ಲಿ  95,444 ಕೋಟಿ ರೂ. ಸೆಸ್(ಹೆಚ್ಚುವರಿ ಕರ) ಸಂಗ್ರಹಿಸಲಾಗಿದೆ.
ಜಿಎಸ್ ಟಿ
ಜಿಎಸ್ ಟಿ

ನವದೆಹಲಿ: 2019-20ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ 1,65,302 ಕೋಟಿ ರೂ ಜಿಎಸ್ ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದ್ದು, ಇದೇ ಅವಧಿಯಲ್ಲಿ  95,444 ಕೋಟಿ ರೂ. ಸೆಸ್(ಹೆಚ್ಚುವರಿ ಕರ) ಸಂಗ್ರಹಿಸಲಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಮಾರ್ಚ್ 2020ನೇ ಅವಧಿಯ 13,806 ಕೋಟಿ ರೂ.ಜಿಎಸ್ ಟಿ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಗಣನೆಗೆ ತೆಗೆದುಕೊಂಡು, 2019-20ರವರೆಗಿನ ಸಂಪೂರ್ಣ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.

2019-20ರ ಪರಿಹಾರವನ್ನು ಬಿಡುಗಡೆ ಮಾಡಲು  2017-18 ಮತ್ತು 2018-19ರ ಅವಧಿಯಲ್ಲಿ ಸಂಗ್ರಹಿಸಲಾದ ಸೆಸ್ ಮೊತ್ತದ ಬಾಕಿ ಹಣವನ್ನು ಸಹ ಬಳಸಿಕೊಳ್ಳಲಾಗಿದೆ. ಇದಲ್ಲದೆ, ಕೇಂದ್ರ ಸರ್ಕಾರ 33,412 ಕೋಟಿ ರೂ ಮೊತ್ತವನ್ನು ಕನ್ಸಾಲಿಟೇಟೆಡ್ ನಿಧಿಯಿಂದ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ.

2019-20ರ ಹಣಕಾಸು ವರ್ಷಕ್ಕೆ ಬಿಡುಗಡೆಯಾದ ಜಿಎಸ್ ಟಿ ಪರಿಹಾರ ಮೊತ್ತ ಇಂತಿದೆ. ಆಂಧ್ರಪ್ರದೇಶಕ್ಕೆ 3028 ಕೋಟಿ ರೂ. ಅಸ್ಸಾಂಕ್ಕೆ 1284 ಕೋಟಿ ರೂ., ಬಿಹಾರಕ್ಕೆ 5464 ಕೋಟಿ ರೂ., ಹರಿಯಾಣಕ್ಕೆ 6617 ಕೋಟಿ, ಹಿಮಾಚಲ ಪ್ರದೇಶಕ್ಕೆ 2,477 ಕೋಟಿ ಮತ್ತು ಜಮ್ಮು-ಕಾಶ್ಮೀರಕ್ಕೆ 3281 ಕೋಟಿ ರೂ. ಜಾರ್ಖಂಡ್ ಗೆ 2,219 ಕೋಟಿ ರೂ., ಕರ್ನಾಟಕಕ್ಕೆ 18,628 ಕೋಟಿ ರೂ., ಕೇರಳಕ್ಕೆ 8111 ಕೋಟಿ ರೂ., ಮಧ್ಯಪ್ರದೇಶಕ್ಕೆ 6538 ಕೋಟಿ ರೂ, ಮಹಾರಾಷ್ಟ್ರಕ್ಕೆ 19,233 ರೂ., ಮೇಘಾಲಯಕ್ಕೆ 157 ಕೋಟಿ ರೂ. , ತಮಿಳುನಾಡಿಗೆ 12,305 ಕೋಟಿ ರೂ, ತೆಲಂಗಾಣ 3054 ಕೋಟಿ ರೂ, ತ್ರಿಪುರಾ 293 ಕೋಟಿ ರೂ, ಉತ್ತರ ಪ್ರದೇಶ 9,123 ಕೋಟಿ, ಉತ್ತರಾಖಂಡ 3375 ಕೋಟಿ ಮತ್ತು ಪಶ್ಚಿಮ ಬಂಗಾಳಕ್ಕೆ 6,200 ಕೋಟಿ ರೂ.ನೀಡಲಾಗಿದೆ.

ಉಳಿದಂತೆ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಯಾವುದೇ ಪರಿಹಾರವನ್ನು ಒದಗಿಸಿಲ್ಲ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ಸೋಮವಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com