ಅನಿಲ್ ಅಂಬಾನಿ ಒಡೆತನದ ಕೇಂದ್ರ ಕಚೇರಿಯನ್ನು ವಶಕ್ಕೆ ಪಡೆದುಕೊಂಡ ಯೆಸ್ ಬ್ಯಾಂಕ್ 

ಸಾಲವನ್ನು ಹಿಂತಿರುಗಿಸಲಾಗದ ಹಿನ್ನೆಲೆಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಒಡೆತನದ ಮುಂಬೈಯ ಉಪನಗರ ಸಾಂತಕ್ರೂಝ್ ನಲ್ಲಿರುವ ಕೇಂದ್ರ ಕಚೇರಿಯನ್ನು ಯೆಸ್ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿದೆ. 
ಅನಿಲ್ ಅಂಬಾನಿ
ಅನಿಲ್ ಅಂಬಾನಿ

ಮುಂಬೈ: ಸಾಲವನ್ನು ಹಿಂತಿರುಗಿಸಲಾಗದ ಹಿನ್ನೆಲೆಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಒಡೆತನದ ಮುಂಬೈಯ ಉಪನಗರ ಸಾಂತಕ್ರೂಝ್ ನಲ್ಲಿರುವ ಕೇಂದ್ರ ಕಚೇರಿಯನ್ನು ಯೆಸ್ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿದೆ. 

ಅನಿಲ್ ಅಂಬಾನಿ ಗ್ರೂಪ್ ಕಂಪೆನಿ ಯೆಸ್ ಬ್ಯಾಂಕಿನಿಂದ 2 ಸಾವಿರದ 892 ಕೋಟಿ ರೂಪಾಯಿ ಸಾಲ ಪಡೆದಿತ್ತು. ಇದನ್ನು ಹಿಂತಿರುಗಿಸಿರಲಿಲ್ಲ. ಹೀಗಾಗಿ ಕೇಂದ್ರ ಕಚೇರಿಯನ್ನು ಸ್ವಾಧೀನಪಡಿಸಿಕೊಂಡಿದ್ದು ಅದರ ಜೊತೆಗೆ ದಕ್ಷಿಣ ಮುಂಬೈಯ ರಿಲಯನ್ಸ್ ಇನ್ಪ್ಫ್ರಾಸ್ಟ್ರಕ್ಚರ್ ಗೆ ಸೇರಿದ ಎರಡು ಫ್ಲಾಟ್ ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಯೆಸ್ ಬ್ಯಾಂಕ್ ನಿನ್ನೆ ಪತ್ರಿಕೆಯಲ್ಲಿ ನೀಡಿದ ಜಾಹೀರಾತಿನಲ್ಲಿ ತಿಳಿಸಿದೆ.

ಇತ್ತೀಚೆಗೆ ಅನಿಲ್ ಧೀರುಬಾಯಿ ಅಂಬಾನಿ ಗ್ರೂಪ್ ಗೆ ಸೇರಿದ ಬಹುತೇಕ ಕಂಪೆನಿಗಳು ಸಾಂತಕ್ರೂಝ್ ಕಚೇರಿಯಿಂದ ಹೊರಬಂದು ರಿಲಯನ್ಸ್ ಸೆಂಟರ್ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್ ದಿವಾಳಿತನ ಮತ್ತು ಷೇರುಗಳ ಮಾರಾಟ ಮೂಲಕ ಕಂಪೆನಿ ಭಾರೀ ಸುದ್ದಿಯಲ್ಲಿದೆ. 

ಕಳೆದ ಮೇ 6ರಂದು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ನಿಂದ 2 ಸಾವಿರದ 892.44 ಕೋಟಿ ರೂಪಾಯಿ ಸಾಲ ಬಾಕಿಯನ್ನು ವಶಪಡಿಸಿಕೊಳ್ಳಬೇಕಾಗಿತ್ತು. ಸಾಲ ಹಿಂತಿರುಗಿಸದಿದ್ದಾಗ ಕಂಪೆನಿಗೆ 60 ದಿನಗಳ ನೊಟೀಸ್ ನೀಡಲಾಗಿತ್ತು. ಅದಕ್ಕೂ ಕಂಪೆನಿ ಭರಿಸಲು ಸಾಧ್ಯವಾಗದಿದ್ದಾಗ ಮೊನ್ನೆ ಜುಲೈ 22ರಂದು ಮೂರು ಆಸ್ತಿಗಳನ್ನು ವಶಪಡಿಸಿಕೊಂಡಿದ್ದು, ನಾಗರಿಕರು ಈ ಆಸ್ತಿಗಳ ಜೊತೆ ವ್ಯವಹಾರ ಮಾಡದಂತೆ ಸೂಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com