ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 13 ಸಾವಿರ ಕೋಟಿ ರೂ. ಲಾಭ

ವಿಶ್ವದ ಐದನೇ ಕುಬೇರ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ (ಆರ್ ಐ ಎಲ್) 2020- 21ನೇ ಸಾಲಿನ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಆರ್ಥಿಕ ಸಾಧನೆ ಮಾಡಿ 13,ಸಾವಿರದ 248 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್
ರಿಲಯನ್ಸ್ ಇಂಡಸ್ಟ್ರೀಸ್

ನವದೆಹಲಿ: ವಿಶ್ವದ ಐದನೇ ಕುಬೇರ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ (ಆರ್ ಐ ಎಲ್) 2020- 21ನೇ ಸಾಲಿನ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಆರ್ಥಿಕ ಸಾಧನೆ ಮಾಡಿ 13,ಸಾವಿರದ 248 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ಹೌದು.. ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೂನ್ ತ್ರೈಮಾಸಿಕದಲ್ಲಿ ಭರ್ಜರಿ ಲಾಭಗಳಿಸಿದೆ. 2020ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ. 31ರಷ್ಟು ಏರಿಕೆ ದಾಖಲಿಸಿದ್ದು 13,233 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲೆ ಬೆಲೆ ಕುಸಿದಿದ್ದರೂ ಭಾರತದಲ್ಲಿ ತೈಲೆ ಬೆಲೆ ಗಗನ ಮುಟ್ಟಿರುವುದು ಸಹ ಕಂಪನಿ ಲಾಭ ಶರವೇಗದಲ್ಲಿ ಏರಿಕೆಯಾಗಲು ಒಂದು ಕಾರಣವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಕಂಪನಿ 10ಸಾವಿರ 104 ಕೋಟಿ ರುಪಾಯಿ ಲಾಭ ಗಳಿಸಿತ್ತು ರಿಲಯನ್ಸ್.ಈ ವರ್ಷ ಇನ್ನು ಮೂರು ಸಾವಿರಕೋಟಿ ರೂಪಾಯಿ ಹೆಚ್ಚಿನ ಲಾಭ ಗಳಿಸಿದೆ. 

ಈ ದಾಖಲೆಯ ನಿವ್ವಳ ಲಾಭವು ಆರ್‌ಐಎಲ್‌ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿನ ಲಾಭ ಗಳಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 10,141 ಕೋಟಿ ರೂಪಾಯಿ ಆಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 31ರಷ್ಟು ಏರಿಕೆ ಕಂಡಿದೆ. ಇನ್ನು ರಿಲಯನ್ಸ್ ಜಿಯೋ ಲಾಭದಲ್ಲಿ ಶೇ. 183ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯ ನಿವ್ವಳ ಲಾಭ 2,520 ಕೋಟಿ ರೂಪಾಯಿ. ಕಳೆದ ವರ್ಷದ ಈ ತ್ರೈಮಾಸಿಕದಲ್ಲಿ ಜಿಯೋ 891 ಕೋಟಿ ನಿವ್ವಳ ಲಾಭ ಕಂಡಿತ್ತು.

ಆರ್‌ಐಎಲ್‌ 53,124 ಕೋಟಿ ರೂ. ಮೊತ್ತದ ಭಾರತದ ಈವರೆಗಿನ ಅತಿದೊಡ್ಡ ರೈಟ್ಸ್ ಇಶ್ಯೂವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಈ ತ್ರೈಮಾಸಿಕದ ವಿಶೇಷ ಸಾಧನೆಗಳಲ್ಲೊಂದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ರೈಟ್ಸ್ ಇಶ್ಯೂ ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್‌ ಮತ್ತು ಜಿಯೋ-ಬಿಪಿಯಲ್ಲಿನ ಹೂಡಿಕೆಗಳಿಂದ ಸಂಸ್ಥೆಯು 2,12,809 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದು ಈ ಮಟ್ಟದ ಬಂಡವಾಳ ಹೂಡಿಕೆಯು ಭಾರತದ ಬಂಡವಾಳ ಮಾರುಕಟ್ಟೆಗಳ ಇತಿಹಾಸದಲ್ಲೇ ಅಭೂತಪೂರ್ವ ಸಾಧನೆಯೆಂದು ಸಂಸ್ಥೆ ಹೇಳಿ ಕೊಂಡಿದೆ. 

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಮಸ್ಯೆಯ ಹೊರತಾಗಿಯೂ ಕೂಡ ಸಂಸ್ಥೆಯ ರೀಫೈನಿಂಗ್ ಮತ್ತು ಪೆಟ್ರೋಕೆಮಿಕಲ್ ವ್ಯವಹಾರ ಶೇ.90ಕ್ಕೂ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದೆ. ರಿಲಯನ್ಸ್ ಸಮೂಹದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಇನ್‌ಫೋಕಾಮ್ ಆರ್ಥಿಕ ವರ್ಷ 2020-21ರ ಮೊದಲ ತ್ರೈಮಾಸಿಕದಲ್ಲಿ 2,520 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com