ಮೊದಲ ತ್ರೈಮಾಸಿಕದಲ್ಲಿ ಎಸ್ ಬಿಐಗೆ 4,189 ಕೋಟಿ ರೂ.ನಿವ್ವಳ ಲಾಭ

ಕೆಟ್ಟ ಸಾಲಗಳು ಇಳಿಮುಖವಾದ ಕಾರಣ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 81% ರಷ್ಟು ನಿವ್ವಳ ಲಾಭ ಕಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೆಟ್ಟ ಸಾಲಗಳು ಇಳಿಮುಖವಾದ ಕಾರಣ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 81% ರಷ್ಟು ನಿವ್ವಳ ಲಾಭ ಕಂಡಿದೆ.

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕಿನ ಲಾಭ 4,189.34 ಕೋಟಿ ರೂಪಾಯಿಗೆ ತಲುಪಿದೆ. 2019-20ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 2,312.02 ಕೋಟಿ ರೂಪಾಯಿ ಲಾಭ ಗಳಿಸಿತ್ತು .

ಎಸ್ ಬಿಐನ ಸ್ವತಂತ್ರ ಒಟ್ಟು ಆದಾಯವು 2020-21ರ ಮೊದಲ ತ್ರೈಮಾಸಿಕದಲ್ಲಿ 74,457.86 ಕೋಟಿ ರೂ.ಗೆ ಏರಿಕೆಯಾಗಿದೆ.

ಎಸ್ ಬಿಐನ ನಿವ್ವಳ ಲಾಭವು ತೆರಿಗೆ ನಂತರ ಶೇಕಡ 37 ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಬಡ್ಡಿ ಆದಾಯ (NII) ಅಥವಾ ಬಡ್ಡಿ ಗಳಿಕೆ ಮತ್ತು ವೆಚ್ಚದ ನಡುವಿನ ವ್ಯತ್ಯಾಸವು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ 16% ಏರಿಕೆ ಆಗಿದೆ. 26,641.5 ಕೋಟಿ ರುಪಾಯಿ ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಎಸ್ ಬಿಐ 2,312 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com