ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ: 1000 ಕ್ಕೂ ಹೆಚ್ಚು ಆಮದು ಉತ್ಪನ್ನಗಳನ್ನು ಕೈಬಿಟ್ಟ ಕೆಪಿಕೆಬಿ ಕ್ಯಾಂಟೀನ್

ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ (ಕೆಪಿಕೆಬಿ)ದಿಂದ ನಡೆಯುವ ಅರೆಸೈನಿಕ ಪಡೆಗಳ ಕ್ಯಾಂಟೀನ್ ಗಳಲ್ಲಿ 1000 ಕ್ಕೂ ಹೆಚ್ಚಿನ ಆಮದು ಉತ್ಪನ್ನಗಳನ್ನು ಕೈಬಿಡಲಾಗಿದೆ. 
ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ: 1000 ಕ್ಕೂ ಹೆಚ್ಚು ಆಮದು ಉತ್ಪನ್ನಗಳನ್ನು ಕೈಬಿಟ್ಟ ಕೆಪಿಕೆಬಿಕ್ಯಾಂಟೀನ್!
ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ: 1000 ಕ್ಕೂ ಹೆಚ್ಚು ಆಮದು ಉತ್ಪನ್ನಗಳನ್ನು ಕೈಬಿಟ್ಟ ಕೆಪಿಕೆಬಿಕ್ಯಾಂಟೀನ್!

ನವದೆಹಲಿ: ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ (ಕೆಪಿಕೆಬಿ)ದಿಂದ ನಡೆಯುವ ಅರೆಸೈನಿಕ ಪಡೆಗಳ ಕ್ಯಾಂಟೀನ್ ಗಳಲ್ಲಿ 1000 ಕ್ಕೂ ಹೆಚ್ಚಿನ ಆಮದು ಉತ್ಪನ್ನಗಳನ್ನು ಕೈಬಿಡಲಾಗಿದೆ. 

ಮೈಕ್ರೋ ವೇವ್ ಓವೆನ್, ಫುಟ್ ವೇರ್,  ಟಾಮಿ ಹಿಲ್​ಫಿಗರ್ ಶರ್ಟ್ ಗಳಂತಹ ಬ್ರಾಂಡೆಡ್​ ಶರ್ಟ್ ಗಳ ಉತ್ಪನ್ನಗಳನ್ನೂ ಸೇರಿ ಒಟ್ಟಾರೆ 1000 ಕ್ಕೂ ಹೆಚ್ಚು ಆಮದು ಉತ್ಪನ್ನಗಳಿಗೆ ಕೆಪಿಕೆಬಿ ಕ್ಯಾಂಟೀನ್ ಗಳಲ್ಲಿ ಕಡಿವಾಣ ಹಾಕಲಾಗಿದೆ. 

ಜೂ.1 ರಿಂದ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಕೆಪಿಕೆಬಿ ಕ್ಯಾಂಟೀನ್ ಗಳಲ್ಲಿ ದೇಶಿ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಾಲಾಗಿದೆ. ಇವೆಲ್ಲದರ ಹೊರತಾಗಿ ಸ್ಕೇಚೆರ್ಸ್, ಫೆರೆರೊ, ರೆಡ್ ಬುಲ್, ವಿಕ್ಟ್ರೋನೆಕ್ಸ್​, ಸಫೀಲೋ (ಪೊಲಾರೈಡ್ ಕ್ಯಾರೆರಾ) ಸೇರಿ ಏಳು ಕಂಪನಿಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಉತ್ಪನ್ನಗಳನ್ನು ತೆಗೆದುಹಾಕಲಾಗಿದೆ.

ಉತ್ಪನ್ನಗಳ ಸಂಬಂಧ ಮಾಹಿತಿ ಕೇಳಿದ್ದರೂ ಮಾಹಿತಿ ನೀಡದ ಸಂಸ್ಥೆಗಳ ಉತ್ಪನ್ನಗಳನ್ನೂ ಸಹ ಕೆಪಿಕೆಬಿ ನಿಲ್ಲಿಸಿದೆ. ಸಿಐಎಸ್​ಎಫ್, ಎಸ್​ಎಸ್​ಬಿ, ಎನ್​ಎಸ್​ಜಿ ಮತ್ತು ಅಸ್ಸಾಂ ರೈಫಲ್ಸ್​ನ 10 ಲಕ್ಷ ಸಿಬ್ಬಂದಿ ಸಿಆರ್​ಪಿಎಫ್​, ಬಿಎಸ್​ಎಫ್, ಐಟಿಬಿಪಿ ಸೇರಿದಂತೆ ಒಟ್ಟು 50 ಲಕ್ಷ ಕುಟುಂಬ ಸದಸ್ಯರು ಕೇಂದ್ರೀಯ ಪೊಲೀಸ್ ಕ್ಯಾಂಟೀನ್ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. 

ಉತ್ಪನ್ನಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿರುವ ಕೆಪಿಕೆಬಿ, ಮೊದಲ ವರ್ಗದಲ್ಲಿ ಸಂಪೂರ್ಣವಾಗಿ ಭಾರತದಲ್ಲಿ ತಯಾರಾದ ಉತ್ಪನ್ನ, 2 ನೇ ವರ್ಗದಲ್ಲಿ ಆಮದು ಮಾಡಿಕೊಂಡ ಕಚ್ಚಾ ಪದಾರ್ಥಗಳಿಂದ ಭಾರತದಲ್ಲಿ ತಯಾರಿಸಿದ ಉತ್ಪನ್ನ ಹಾಗೂ ಮೂರನೇ ವರ್ಗದಲ್ಲಿ ಸಂಪೂರ್ಣವಾಗಿ ಆಮದು ಮಾಡಿಕೊಂಡ ಉತ್ಪನ್ನಗಳನ್ನು ಸೇರಿಸಿದ್ದು, ಕ್ಯಾಟಗರಿ-3ರಲ್ಲಿ ಬರುವ ಉತ್ಪನ್ನಗಳ ಮಾರಾಟವನ್ನು ಜೂನ್ 1ರಿಂದ ಕೈಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com