ಫುಡ್‌ ರಿಟೇಲ್‌ ಕ್ಷೇತ್ರ ಪ್ರವೇಶಿಸುವ ಫ್ಲಿಪ್‌ಕಾರ್ಟ್ ಪ್ರಸ್ತಾವನೆ ತಿರಸ್ಕರಿಸಿದ ಭಾರತ

ವಾಲ್‌ ಮಾರ್ಟ್‌ ನಿಯಂತ್ರಣದಲ್ಲಿರುವ ಬೆಂಗಳೂರು ಮೂಲದ ಆನ್‌ಲೈನ್‌ ರಿಟೇಲರ್‌ ಫ್ಲಿಪ್‌ಕಾರ್ಟ್‌ ಭಾರತದಲ್ಲಿ ಆಹಾರ ವಸ್ತುಗಳನ್ನು ಮಾರಾಟಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ (ಡಿಪಿಐಐಟಿ) ತಿರಸ್ಕರಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಫ್ಲೀಪ್ ಕಾರ್ಟ್
ಫ್ಲೀಪ್ ಕಾರ್ಟ್

ನವದೆಹಲಿ: ವಾಲ್‌ ಮಾರ್ಟ್‌ ನಿಯಂತ್ರಣದಲ್ಲಿರುವ ಬೆಂಗಳೂರು ಮೂಲದ ಆನ್‌ಲೈನ್‌ ರಿಟೇಲರ್‌ ಫ್ಲಿಪ್‌ಕಾರ್ಟ್‌ ಭಾರತದಲ್ಲಿ ಆಹಾರ ವಸ್ತುಗಳನ್ನು ಮಾರಾಟಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ (ಡಿಪಿಐಐಟಿ) ತಿರಸ್ಕರಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ನಿಯಂತ್ರಕ ಸಮಸ್ಯೆಯನ್ನು ಉಲ್ಲೇಖಿಸಿ ಫುಡ್‌ ರಿಟೇಲ್‌ ಕ್ಷೇತ್ರ ಪ್ರವೇಶಿಸುವ ಫ್ಲಿಪ್‌ಕಾರ್ಟ್ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

‌ಕೇಂದ್ರ ಸರ್ಕಾರ ಫುಡ್ ರಿಟೇಲ್‌ನಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಇದೆ. ಹೀಗಾಗಿ ಕಳೆದ ವರ್ಷ ಫ್ಲಿಪ್‌ಕಾರ್ಟ್ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿಯ ವಕ್ತಾರರು, ಫ್ಲಿಪ್‌ಕಾರ್ಟ್ ಅನುಮತಿಗಾಗಿ ಮತ್ತೆ ಅರ್ಜಿ ಸಲ್ಲಿಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com