ನಿಪ್ಪಾನ್ ಪೇಂಟ್ ನಿಂದ ದೇಶಾದ್ಯಂತ ಆರು ಸಾವಿರಕ್ಕೂ ಹೆಚ್ಚು ಪೇಂಟರ್ ಗಳಿಗೆ ಆರೋಗ್ಯ ವಿಮೆ

ನಿಪ್ಪಾನ್ ಪೇಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಭಾರತದಾದ್ಯಂತ ತನ್ನ ಪೇಂಟರ್ ಪಾಲುದಾರರಿಗಾಗಿ ಆರೋಗ್ಯ ವಿಮಾ ಪಾಲಿಸಿಯನ್ನು ರೂಪಿಸಿದೆ. ಈ ಉಪಕ್ರಮದ ಅಡಿಯಲ್ಲಿ, 6000 ಕ್ಕೂ ಹೆಚ್ಚು ಪೇಂಟರ್ ಗಳನ್ನು ಕೋವಿಡ್-19 ವಿರುದ್ಧ ರಕ್ಷಿಸಲಾಗುವುದು.
ನಿಪ್ಪಾನ್ ಪೇಂಟ್
ನಿಪ್ಪಾನ್ ಪೇಂಟ್

ಚೆನ್ನೈ: ನಿಪ್ಪಾನ್ ಪೇಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಅಲಂಕಾರಿಕ ವಿಭಾಗ), ಭಾರತದಾದ್ಯಂತ ತನ್ನ ಪೇಂಟರ್ ಪಾಲುದಾರರಿಗಾಗಿ ಆರೋಗ್ಯ ವಿಮಾ ಪಾಲಿಸಿಯನ್ನು ರೂಪಿಸಿದೆ. ಈ ಉಪಕ್ರಮದ ಅಡಿಯಲ್ಲಿ, 6000 ಕ್ಕೂ ಹೆಚ್ಚು ಪೇಂಟರ್ ಗಳನ್ನು ಕೋವಿಡ್-19 ವಿರುದ್ಧ ರಕ್ಷಿಸಲಾಗುವುದು.

ಪೇಂಟರ್ ಕೋವಿಡ್-19 ಸೋಂಕಿಗೆ ಒಳಗಾದಾಗ, ಪ್ರತಿ ವಿಮೆ ಮಾಡಿದ ಪೇಂಟರ್ 20,000 ರೂ.ಗಳ ಫ್ಲಾಟ್ ಬೆನಿಫಿಟ್ ಮೌಲ್ಯದೊಂದಿಗೆ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಒಂದು ವರ್ಷದವರೆಗೆ ಮಾನ್ಯತೆಯನ್ನು ಹೊಂದಿರುವ ಪಾಲಿಸಿಯು ವಿಮೆ ಪಡೆದ ಎಲ್ಲಾ ಪೇಂಟರ್ ಗಳ ಆಸ್ಪತ್ರೆಗೆ ದಾಖಲು ಮತ್ತು ಕೋವಿಡ್-19 ಗೆ ಸಂಬಂಧಿಸಿದ ಇತರ ಚಿಕಿತ್ಸಾ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಇದರ ಕುರಿತು ಮಾತನಾಡಿದ ನಿಪ್ಪಾನ್ ಪೇಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಅಲಂಕಾರಿಕ ವಿಭಾಗ) ಅಧ್ಯಕ್ಷ ಎಸ್.ಮಹೇಶ್ ಆನಂದ್, "ಕೋವಿಡ್-19 ನಿಸ್ಸಂದೇಹವಾಗಿ ಸಾರ್ವಜನಿಕರ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡಿದೆ. ಆದರೆ ಇದು ದೈನಂದಿನ ವೇತನದ ಮೇಲೆ ಅವಲಂಬಿತರಾಗಿರುವ ಪೇಂಟರ್ ಗಳಂತಹ ಕಾರ್ಮಿಕರು ಹೆಚ್ಚು ಪರಿಣಾಮ ಬೀರಿದೆ. ಹೆಚ್ಚಿನ ಸಂಬಳ ಪಡೆಯುವ ನೌಕರರು ತಮ್ಮ ಕಂಪನಿಗಳ ಆರೋಗ್ಯ ವಿಮಾ ಪಾಲಿಸಿಗಳ ವ್ಯಾಪ್ತಿಗೆ ಒಳಪಟ್ಟರೆ, ಅಸಂಘಟಿತ ವಲಯದ ಅಡಿಯಲ್ಲಿ ಬರುವ ಪೇಂಟರ್ ಗಳಂತಹ ಕಾರ್ಮಿಕರು ಕೋವಿಡ್-19 ಗೆ ಸಂಬಂಧಿಸಿದ ಅಪಾಯಗಳಿಗೆ ಹೆಚ್ಚು ಒಡ್ಡಿಕೊಳ್ಳುತ್ತಾರೆ. ಈ ಅಂಶವನ್ನು ಪರಿಗಣಿಸಿ , ಯಾವುದೇ ಕೋವಿಡ್-19 ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ನಮ್ಮ ಪೇಂಟರ್ ಸ್ನೇಹಿತರನ್ನು ಒಳಗೊಳ್ಳುವ ಆರೋಗ್ಯ ವಿಮಾ ಪಾಲಿಸಿಯನ್ನು ಹೊರತರಲು ನಿಪ್ಪಾನ್ ಪೇಂಟ್ ಸಂತೋಷವಾಗಿದೆ. ಭಾರತವು ನಿಧಾನವಾಗಿ ವ್ಯಾಪಾರ-ವಹಿವಾಟು ಪುನರಾರಂಭಿಸಲು ತಯಾರಿ ನಡೆಸುತ್ತಿರುವಾಗ, ಅಂತಹ ಉಪಕ್ರಮಗಳಿಗೆ ಇನ್ನೂ ಬಲವಾದ ಅವಶ್ಯಕತೆಯಿದೆ." ಎಂದರು.

ಈ ಕೋವಿಡ್ ವಿಮಾ ರಕ್ಷಣೆಯ ಹೊರತಾಗಿ, ನಿಪ್ಪಾನ್ ಪೇಂಟ್ ಕಂಪನಿಯು ಪೇಂಟರ್ ಗಳಿಗೆ ನಿಪ್ಪಾನ್ ಪೇಂಟ್‌ನ ಅಮುಧಾ ಸುರಭಿ (ಡಿಜಿಟಲ್ ಕರೆನ್ಸಿ ಕಾರ್ಡ್) ಮತ್ತು ಇ-ವೋಚರ್‌ಗಳನ್ನು ಸಹ ಒದಗಿಸಿದೆ, ಇದು ಅವರಿಗೆ ಮತ್ತು ಅವರ ಕುಟುಂಬಗಳಿಗೆ ತಮ್ಮ ನೆರೆಹೊರೆಯ ಕಿರಾನಾ ಮತ್ತು ಕಿರಾಣಿ ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ.

ಸರ್ಕಾರದ ಸುರಕ್ಷತಾ ಮಾರ್ಗಸೂಚಿಗಳಿಗೆ ಹೆಚ್ಚುವರಿಯಾಗಿ ನಿಪ್ಪಾನ್ ಪೇಂಟ್ ಪ್ರೊ-ಸೇಫ್ಟಿ ಪೇಂಟರ್ ಸರ್ಟಿಫಿಕೇಶನ್ ಅನ್ನು ಮತ್ತಷ್ಟು ಪ್ರಾರಂಭಿಸಿದೆ. ಇದು ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್‌ಗಳ ಪರಿಶೀಲನಾಪಟ್ಟಿ.

ಪೇಂಟರ್ ಗಳು ಪೇಂಟ್ ಮಾಡಲು ಕ್ಲೈಂಟ್ ಮನೆಗಳಿಗೆ ಭೇಟಿ ನೀಡಬೇಕಾಗಿರುವುದರಿಂದ, ಸುರಕ್ಷತಾ ಕ್ರಮವಾಗಿ ಈ ಹೆಚ್ಚುವರಿ ಪದರವು ಎರಡೂ ಕಡೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಅಗತ್ಯವಿರುವ ಎಲ್ಲ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡುವ ಪೇಂಟರ್ ಗಳಿಗೆ ಸುರಕ್ಷಿತ ಪೇಂಟ್ ಅಭ್ಯಾಸಗಳನ್ನು ಉತ್ತೇಜಿಸಲು ಪ್ರೊ-ಸೇಫ್ಟಿ ಪೇಂಟರ್ ಸರ್ಟಿಫಿಕೇಶನ್ ಅನ್ನು ನೀಡಲಾಗುತ್ತದೆ. ಕ್ಲೈಂಟ್ ಮನೆಗೆ ಪ್ರವೇಶಿಸುವ ಮೊದಲು ಸುರಕ್ಷತಾ ಪ್ರೋಟೋಕಾಲ್ ಅನ್ನು ಅನುಸರಿಸಲು ಪೇಂಟರ್ ಗಳನ್ನು ಪ್ರೋತ್ಸಾಹಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com