ಲಾಕ್‌ಡೌನ್ ಅವಧಿಯಲ್ಲಿ ನೌಕರರ ಭವಿಷ್ಯನಿಧಿ ಸಂಸ್ಥೆಯಿಂದ 36.02 ಲಕ್ಷ ಅರ್ಜಿಗಳು ಇತ್ಯರ್ಥ

ಇಪಿಎಫ್ಒ ಈ ವರ್ಷದ ಏಪ್ರಿಲ್ ಮತ್ತು ಮೇ ಕೊನೆಯವರೆಗೆ ಎರಡು ತಿಂಗಳಲ್ಲಿ 36.02 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸಿ ತನ್ನ ಸದಸ್ಯರಿಗೆ 11,540 ಕೋಟಿ ರೂ ವಿತರಿಸಿದೆ.  
ಭವಿಷ್ಯ ನಿಧಿ ಕೇಂದ್ರ ಕಚೇರಿ
ಭವಿಷ್ಯ ನಿಧಿ ಕೇಂದ್ರ ಕಚೇರಿ

ನವದೆಹಲಿ: ಕೋವಿಡ್-19 ಲಾಕ್ ಡೌನ್ ನ ಸವಾಲಿನ ಅವಧಿಯಲ್ಲೂ ತನ್ನ ಸದಸ್ಯರ ಜೀವನ ಸುಲಭಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿರುವ ಶಾಸನಬದ್ಧ ಸಂಸ್ಥೆಯಾದ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಈ ವರ್ಷದ ಏಪ್ರಿಲ್ ಮತ್ತು ಮೇ ಕೊನೆಯವರೆಗೆ ಎರಡು ತಿಂಗಳಲ್ಲಿ 36.02 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸಿ ತನ್ನ ಸದಸ್ಯರಿಗೆ 11,540 ಕೋಟಿ ರೂ ವಿತರಿಸಿದೆ.  

ಈ 15.54 ಲಕ್ಷ ಅರ್ಜಿಗಳ ಪೈಕಿ 4580 ಕೋಟಿ ರೂ. ಮೊತ್ತವು ಇತ್ತೀಚೆಗೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ಜಾರಿಗೊಳಿಸಲಾದ ಕೋವಿಡ್ -19 ಮುಂಗಡಕ್ಕೆ ಸಂಬಂಧಿಸಿದೆ. ಈ ಕಷ್ಟದ ಸಮಯದಲ್ಲಿ ಕೋವಿಡ್ -19 ಮುಂಗಡ ಇಪಿಎಫ್ಒ ಸದಸ್ಯರಿಗೆ ನೆರವಾಗಿದೆ. ವಿಶೇಷವಾಗಿ ಮಾಸಿಕ ವೇತನ 15,000 ರೂ.ಗಿಂತ ಕಡಿಮೆ ಇರುವ ಸದಸ್ಯರು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com