ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಸತತ 5ನೇ ದಿನವೂ ಗ್ರಾಹಕರಿಗೆ ತಪ್ಪದ ಬರೆ!

ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ.

ಪ್ರತಿ ಲೀಟರ್ ಗೆ ತಲಾ 60 ಪೈಸೆ ಹೆಚ್ಚಳ ಮಾಡಲಾಗಿದೆ. ಪರಿಷ್ಕರಣೆಯಲ್ಲಿ 82 ದಿನಗಳ ವಿರಾಮ ಕೊನೆಯಾದ ನಂತರ ಸತತ ಐದನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಂಡಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ  73.40 ರೂ. ನಿಂದ 74 ರೂ. ಗೆ ಹಾಗೂ ಡೀಸೆಲ್ ದರ ಲೀಟರ್ ಗೆ 71.62 ರಿಂದ 72.22 ರೂಪಾಯಿಗೆ  ಹೆಚ್ಚಿಸಲಾಗಿದೆ ಎಂದು ಸರಕಾರಿ ತೈಲ ಕಂಪೆನಿಗಳು ಹೇಳಿವೆ.

ಒಟ್ಟಾರೆ ಕಳೆದ ಐದು ದಿನಗಳಿಂದ ದೇಶದಲ್ಲಿ ಪೆಟ್ರೋಲ್ 2.74 ರೂ. ಮತ್ತು ಡಿಸೇಲ್ 2.83 ರೂ. ಏರಿಕೆಯಾಗಿದೆ.

ಮಹಾ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಇಂದಿನ ಬೆಲೆ

* ಮುಂಬೈನಲ್ಲಿ ಪೆಟ್ರೋಲ್ ಬೆಲೆ 80.98 ರೂ. ಡಿಸೇಲ್ 70.92 ರೂ.

* ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 77.96 ರೂ. ಡಿಸೇಲ್ 70.64 ರೂ.

* ಹೈದರಾಬಾದ್ ನಲ್ಲಿ ಪೆಟ್ರೋಲ್ ಬೆಲೆ 76.82 ರೂ. ಡಿಸೇಲ್ 70.59 ರೂ.

* ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 76.39 ರೂ. ಡಿಸೇಲ್ 68.66 ರೂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com