ಲಕ್ಷ್ಮಿ ಮಿತ್ತಲ್
ಲಕ್ಷ್ಮಿ ಮಿತ್ತಲ್

ಆರ್ಸಿಲರ್ ಮಿತ್ತಲ್ ಮತ್ತು ನಿಪ್ಪಾನ್ ನಿಂದ ಒಡಿಶಾದಲ್ಲಿ 2,000 ಕೋಟಿ ರೂ ಹೂಡಿಕೆ - ಲಕ್ಷ್ಮಿ ಮಿತ್ತಲ್

ಜಾಗತಿಕ ಉಕ್ಕು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ಕಂಪೆನಿ ಒಡಿಶಾದಲ್ಲಿ ರೂ .2000 ಕೋಟಿ ಹೂಡಿಕೆ ಮಾಡಲಿವೆ ಎಂದು ಕಂಪೆನಿ ಸಿಇಒ ಲಕ್ಷ್ಮಿನಿವಾಸ್ ಮಿತ್ತಲ್ ತಿಳಿಸಿದ್ದಾರೆ.

ಭುವನೇಶ್ವರ: ಜಾಗತಿಕ ಉಕ್ಕು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ಕಂಪೆನಿ ಒಡಿಶಾದಲ್ಲಿ ರೂ .2000 ಕೋಟಿ ಹೂಡಿಕೆ ಮಾಡಲಿವೆ ಎಂದು ಕಂಪೆನಿ ಸಿಇಒ ಲಕ್ಷ್ಮಿನಿವಾಸ್ ಮಿತ್ತಲ್ ತಿಳಿಸಿದ್ದಾರೆ. 

ಶನಿವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸಿಂಗ್ ಚರ್ಚೆಯಲ್ಲಿ ಮಾತನಾಡಿದ ಮಿತ್ತಲ್ ಈ ವಿಷಯ ತಿಳಿಸಿದ್ದಾರೆ. 50,000 ಕೋಟಿ ರೂ ಮೊತ್ತದೊಂದಿಗೆ ಎಸ್ಸಾರ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡ ಜಾಗತಿಕ ದೈತ್ಯ ಉಕ್ಕಿನ ಕಂಪನಿಯಾದ ಆರ್ಸೆಲರ್ ಮಿತ್ತಲ್, ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಉಕ್ಕು ಯೋಜನೆಗಳನ್ನು ವಿಸ್ತರಿಸಲು ಯೋಜಿಸಿದೆ. ಪರದೀಪ್ ನಲ್ಲಿರುವ ಸ್ಥಾವರದ ಸಾಮರ್ಥ್ಯವನ್ನು 6 ಎಂಟಿಪಿಎಯಿಂದ 12 ಎಂಟಿಪಿಎ ವರೆಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಮಿತ್ತಲ್ ತಿಳಿಸಿದ್ದಾರೆ.

ಅದೇ ರೀತಿ ಒಡಿಶಾದ ಕಿಯೋಂಜರ್ ಜಿಲ್ಲೆಯ ಡಬುನಾದಲ್ಲಿರುವ ಘಟಕದ ಸಾಮರ್ಥ್ಯವನ್ನು 5 ಎಂಟಿಪಿಎಯಿಂದ 16 ಎಂಟಿಪಿಎಗೆ ಹೆಚ್ಚಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.   

Related Stories

No stories found.

Advertisement

X
Kannada Prabha
www.kannadaprabha.com