'ಭಾರತದ ಆರ್ಥಿಕ ಚೇತರಿಕೆ 'ವಿ'ಕಾರವಾಗದೇ, ಯು, ಡಬ್ಲ್ಯೂ ಆಕಾರದಲ್ಲಿರಲಿದೆ'

ಭಾರತದ ಆರ್ಥಿಕತೆಯ ಮೇಲೆ ಕೋವಿಡ್-19 ಗಾಢವಾದ ಪರಿಣಾಮ ಬೀರಲಿದ್ದು, ವಿ ಆಕಾರದ ಚೇತರಿಕೆ ಬದಲು ಯು ಅಥವಾ ಡಬ್ಲ್ಯು ಆಕಾರದ ಚೇತರಿಕೆ ಕಾಣಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. 
'ಭಾರತದ ಆರ್ಥಿಕ ಚೇತರಿಕೆ 'ವಿ'ಕಾರವಾಗದೇ, ಯು, ಡಬ್ಲ್ಯೂ ಆಕಾರದಲ್ಲಿರಲಿದೆ'
'ಭಾರತದ ಆರ್ಥಿಕ ಚೇತರಿಕೆ 'ವಿ'ಕಾರವಾಗದೇ, ಯು, ಡಬ್ಲ್ಯೂ ಆಕಾರದಲ್ಲಿರಲಿದೆ'

ಭಾರತದ ಆರ್ಥಿಕತೆಯ ಮೇಲೆ ಕೋವಿಡ್-19 ಗಾಢವಾದ ಪರಿಣಾಮ ಬೀರಲಿದ್ದು, ವಿ ಆಕಾರದ ಚೇತರಿಕೆ ಬದಲು ಯು ಅಥವಾ ಡಬ್ಲ್ಯು ಆಕಾರದ ಚೇತರಿಕೆ ಕಾಣಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. 

ಕೋವಿಡ್-19 ಪ್ರಸರಣವಾಗುವುದಕ್ಕೂ ಮುನ್ನವೇ ಭಾರತೀಯ ಆರ್ಥಿಕತೆ ನಿಧಾನಗತಿಯಲ್ಲಿದ್ದು ಜಿಡಿಪಿ ಶೇ.4.5 ರಷ್ಟರಲ್ಲಿತ್ತು ಎಂದು ಸೆಂಟ್ರಮ್ ಇನ್ಸ್ಟಿಟ್ಯೂಷನಲ್ ರಿಸರ್ಚ್ ಸೆಂಟರ್ ಹೇಳಿದೆ.

ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ ಹಾಗೂ ಆರ್ ಬಿಐ ದಿಟ್ಟ ಕ್ರಮಗಳನ್ನು ಕೈಗೊಂಡ ಪರಿಣಾಮ ಭಾರತದ ಆರ್ಥಿಕತೆ ಚೇತರಿಕೆ ಕಾಣುವ ಲಕ್ಷಣಗಳಿದ್ದಾಗಲೇ ಕೋವಿಡ್-19 ಪ್ರಸರಣ ಪ್ರಾರಂಭವಾಗಿತ್ತು.  ಕೋವಿಡ್-19 ಪ್ರಾರಂಭವಾಗುತ್ತಿದ್ದಂತೆಯೇ ಭಾರತ ಬಹುಬೇಗ ಲಾಕ್ ಡೌನ್ ಘೋಷಿಸಿತ್ತು. ಇದರಿಂದ ಪ್ರಕರಣಗಳು ಅತಿ ಹೆಚ್ಚಾಗುವುದು ಕಡಿಮೆಯಾಯಿತು. ಆದರೆ ಆರ್ಥಿಕ ಚೇತರಿಕೆಯೂ ಅತ್ಯಂತ ನಿಧಾನಗತಿಯಲ್ಲೇ ಇರಲಿದೆ ಎಂದು ಸೆಂಟ್ರಮ್ ಭಾರತದ ಆರ್ಥಿಕ ಪರಿಸ್ಥಿತಿಯನ್ನು ವಿಶ್ಲೇಷಿಸಿದೆ.

ಕಳೆದ 2 ವರ್ಷಗಳಲ್ಲಿ ದಾಖಲಾಗಿರುವ ನೀರಸ ಬೆಳವಣಿಗೆಯಿಂದ ಆರ್ಥಿಕ ಕ್ಷೇತ್ರದ ಬೇಡಿಕೆಗಳನ್ನು ಬೆಂಬಲಿಸಲು ಸರ್ಕಾರದ ಬಳಿಯೂ ಅತ್ಯಂತ ಕಡಿಮೆ ಮೂಲಸೌಕರ್ಯಗಳಿವೆ. ಈ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ ಮೇಲೆ ಕೋವಿಡ್-19 ಪ್ರಬಲ ಪರಿಣಾಮ ಬೀರಲಿದ್ದು, ಚೇತರಿಕೆ ಸಾಕಷ್ಟು ಮುಂದುವರೆದ ದೇಶಗಳಲ್ಲಿ ನಿರೀಕ್ಷಿಸಿರುವ ವಿ ರೇಖೆಗಿಂತಲೂ ಭಾರತದಲ್ಲಿ ಭಿನ್ನವಾಗಿರಲಿದ್ದು ಬಹುಶಃ ಹೆಚ್ಚಿನ ಪ್ರಮಾಣದಲ್ಲಿ ಯು ಅಥವಾ ಡಬ್ಲ್ಯು ರೇಖೆಯಲ್ಲಿರಲಿವೆ ಎಂದು ಸೆಂಟ್ರಮ್ ಹೇಳಿದೆ. ಆರ್ಥಿಕ ಕುಸಿತ, ಪುನಶ್ಚೇತನಗಳ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಯು, ವಿ, ಡಬ್ಲ್ಯು ಎಂಬ ಆಕಾರಗಳೊಂದಿಗೆ ವಿಶ್ಲೇಷಿಸುವ ಪರಿಪಾಠವಿದೆ.

'ವಿ' ಆಕಾರ: ಆರ್ಥಿಕ ಕುಸಿತದಲ್ಲಿ ಅತಿ ಹೆಚ್ಚು ಕುಸಿತದೊಂದಿಗೆ ಶೀಘ್ರಗತಿಯ ಚೇತರಿಕೆಯೂ ಕಂಡುಬರಲಿದೆ. 

ಡಬ್ಲ್ಯೂ ಆಕಾರದ ಆರ್ಥಿಕ ಕುಸಿತದಲ್ಲಿ ವಿ ಆಕಾರದಂತೆ ಅತಿ ಹೆಚ್ಚಿನ ಕುಸಿತ ಕಂಡುಬರಲಿದೆ. ಆದರೆ ಚೇತರಿಕೆ ಲಕ್ಷಣಗಳು ಗೋಚರಿಸಿ ಮತ್ತೊಮ್ಮೆ ಆರ್ಥಿಕತೆ ಮುಗ್ಗರಿಸಲಿದೆ. ಆರ್ಥಿಕತೆ ಪೂರ್ಣಪ್ರಮಾಣದಲ್ಲಿ ಚೇತರಿಕೆ ಕಾಣುವುದಕ್ಕೂ ಮುನ್ನವೇ ಎರಡನೇ ಬಾರಿ ಕುಸಿಯುವುದರಿಂದ ಇದನ್ನು ಡಬಲ್ ಡಿಪ್ ಕುಸಿತ ಎಂದೂ ಕರೆಯಲಾಗುತ್ತದೆ.

ಇನ್ನು 'ಯು' ಆಕಾರದ ಚೇತರಿಕೆಯಲ್ಲಿ ಆರ್ಥಿಕತೆ ತೀವ್ರ ಕುಸಿತ ಕಂಡಿರುವ ಆರ್ಥಿಕತೆ ನಿರ್ದಿಷ್ಟ ಅವಧಿಯವರೆಗೆ ನಿಶ್ಚಲವಾಗಿದ್ದು, ಇದರ ಬೆನ್ನಲ್ಲೇ ತನ್ನ ಹಿಂದಿನ ಸ್ಥಿತಿಗೆ  ಆರೋಗ್ಯ ಪೂರ್ಣ ಚೇತರಿಕೆ ಕಾಣಲಿದೆ. ಯು ಮಾದರಿಯ ಚೇತರಿಕೆ ವಿ ಮಾದರಿಗೆ ಸಾಕಷ್ಟು ಸಾಮ್ಯತೆ ಹೊಂದಿದೆ. ಆದರೆ ಯು ಮಾದರಿಯಲ್ಲಿ ಹೆಚ್ಚು ಸಮಯ ಕುಸಿತದಲ್ಲೇ ಇರಲಿದೆ. ವಿ ಮಾದರಿಯಲ್ಲಿ ಶೀಘ್ರಗತಿಯಲ್ಲಿ ಚೇತರಿಕೆ ಕಾಣಲಿದೆ.

ಭಾರತದಲ್ಲಿ ನವೆಂಬರ್ ವೇಳೆಗೆ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಲಿವೆ. ಇದು ಜನರನ್ನು ಮನೆಯಲ್ಲಿರಲು ಪ್ರೇರೇಪಿಸಿ ಆರ್ಥಿಕತೆಯ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ಸೆಂಟ್ರಮ್ ವರದಿ ಹೇಳಿದೆ. ಇನ್ನು ಕೆಲವು ಕ್ಷೇತ್ರಗಳಲ್ಲಿ 2020 ರ ಆರ್ಥಿಕತೆ ಹಳಿಗೆ ಬರಲು 2 ವರ್ಷಗಳೇ ಹಿಡಿಯುತ್ತವೆ.

ಭಾರತ ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ಕೈಗೊಂಡಿರುವ ಕ್ರಮಗಳ ಪರಿಣಾಮ ನಗರ ಪ್ರದೇಶಗಳ ಆರ್ಥಿಕತೆಗಿಂತ ಗ್ರಾಮೀಣ ಪ್ರದೇಶ, ಕೃಷಿ ಕ್ಷೇತ್ರದ ಆರ್ಥಿಕತೆ ಬೇಗ ಪುಟಿದೇಳಲಿದೆ. ರೈತರಿಗೆ ಇದರಿಂದ ಹೆಚ್ಚಿನ ಸಾಹಾಯವಾಗಲಿದ್ದು, ಕೋವಿಡ್-19 ರ ಪರಿಣಾಮವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಲಿದೆ ಈ ಟ್ರೆಂಡ್ 2021 ರಲ್ಲಿ ಆರ್ಥಿಕ ಕುಸಿತದ ನಡುವೆಯೂ ಭಾರತಕ್ಕೆ ಆಶಾಕಿರಣವಾಗಿ ಹೊರಹೊಮ್ಮಲಿದೆ ಎಂದು ಸೆಂಟ್ರಮ್ ಇನ್ಸ್ಟಿಟ್ಯೂಷನಲ್ ರಿಸರ್ಚ್ ಸೆಂಟರ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com