ಚೀನಾ ಮೊಬೈಲ್, ಟಿವಿ, ಎಲೆಕ್ಟ್ರಾನಿಕ್ ಸರಕುಗಳನ್ನು ತ್ಯಜಿಸಲು ಶೇ.68 ರಷ್ಟು ಮಂದಿ ಒಲವು!

ಲಡಾಖ್ ನ ಭಾರತದ ಗಡಿಯನ್ನು ಅತಿಕ್ರಮಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾ ದೇಶದ ವಿರುದ್ಧ ಭಾರತದಲ್ಲಿ ಅಭಿಪ್ರಾಯ ಹರಳುಗಟ್ಟಲು ಪ್ರಾರಂಭವಾಗಿದೆ.

Published: 24th June 2020 01:32 AM  |   Last Updated: 24th June 2020 01:32 AM   |  A+A-


68.2% willing to junk Chinese mobiles, TVs, electronic goods

ಚೀನಾ ಮೊಬೈಲ್, ಟಿವಿ, ಎಲೆಕ್ಟ್ರಾನಿಕ್ ಸರಕುಗಳನ್ನು ತ್ಯಜಿಸಲು ಶೇ.68 ರಷ್ಟು ಮಂದಿ ಒಲವು!

Posted By : srinivasrao
Source : IANS

ನವದೆಹಲಿ: ಲಡಾಖ್ ನ ಭಾರತದ ಗಡಿಯನ್ನು ಅತಿಕ್ರಮಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾ ದೇಶದ ವಿರುದ್ಧ ಭಾರತದಲ್ಲಿ ಅಭಿಪ್ರಾಯ ಹರಳುಗಟ್ಟಲು ಪ್ರಾರಂಭವಾಗಿದೆ.

ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾದ ಮೊಬೈಲ್, ಟಿವಿ, ಎಲೆಕ್ಟ್ರಾನಿಕ್ ಸರಕುಗಳನ್ನು ತ್ಯಜಿಸಲು ಅಥವಾ ಖರೀದಿಸುವುದನ್ನು ಬಿಡಲು ದೇಶದ ಶೇ.68.2 ರಷ್ಟು ಜನರು ಒಲವು ತೋರಿದ್ದಾರೆ ಎನ್ನುತ್ತಿದೆ ಐಎಎನ್ಎಸ್ ಸಿ ವೋಟರ್ ಸ್ನ್ಯಾಪ್ ಸಮೀಕ್ಷೆ. ಈ ಸಮೀಕ್ಷೆಯ ಪ್ರಕಾರ ಶೇ.68.2 ರಷ್ಟು ಮಂದಿ, ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದರೆ, ಶೇ.31.8 ರಷ್ಟು ಮಂದಿ ಇದರಿಂದೆಲ್ಲಾ ಏನೂ ಆಗುವುದಿಲ್ಲ. ಎಲೆಕ್ಟ್ರಾನಿಕ್ ಉದ್ಯಮ ಎಂದಿನಂತೆಯೇ ಮುಂದುವರೆಯಲಿದ್ದು, ಜನ ಎಂದಿನಂತೆಯೇ ಚೀನಾದ ಉತ್ಪನ್ನಗಳನ್ನು ಖರೀದಿಸಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಯಸ್ಸಿನ ಆಧಾರದಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಎಲ್ಲಾ ವಯೋಮಾನದ ಜನರು- ಮಧ್ಯಮ ವಯಸ್ಸಿನ (45-60) ಶೇ.75 ರಷ್ಟು ಮಂದಿ, 25-45 ವಯಸ್ಸಿನ ಶೇ.66 ರಷ್ಟು ಮಂದಿ, 60 ಹಾಗೂ ಮೇಲ್ಪಟ್ಟ ವಯಸ್ಸಿನ ಶೇ. 79 ರಷ್ಟು ಮಂದಿ, 25 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಶೇ.60.9 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ಎಲ್ಲಾ ಶೈಕ್ಷಣಿಕ ವರ್ಗದಲ್ಲಿಯೂ ಚೀನಾ ವಿರೋಧಿ ಭಾವನೆ ಸ್ಪಷ್ಟವಾಗಿದೆ. ಕಡಿಮೆ ವಿದ್ಯಾರ್ಹತೆ ಹೊಂದಿರುವ ಶೇ.70 ರಷ್ಟು ಮಂದಿ, ಮಧ್ಯಮ ವಿದ್ಯಾರ್ಹತೆ ಹೊಂದಿರುವ ಶೇ.65 ರಷ್ಟು ಮಂದಿ, ಹೆಚ್ಚು ಶಿಕ್ಷಣ, ವಿದ್ಯಾರ್ಹತೆ ಹೊಂದಿರುವ ಶೇ.64.6 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಒಲವು ತೋರಿದ್ದಾರೆ. ಇನ್ನು ಆದಾಯದ ವಿಭಾಗದಲ್ಲಿಯೂ ಚೀನಾ ವಿರೋಧಿ ಭಾವನೆ ದೃಢವಾಗಿದ್ದು, ಕಡಿಮೆ, ಮಧ್ಯಮ, ಹೆಚ್ಚು ಆದಾಯ ಹೊಂದಿರುವ ಶೇ.68 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನು ವಿರೋಧಿಸುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದವರನ್ನೂ ಸಹ ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿದ್ದು, ವಿಪಕ್ಷಗಳಿಗೆ ಮತಚಲಾವಣೆ ಮಾಡಿದ್ದ ಶೇ.58.2 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನ ಬಹಿಷ್ಕರಿಸುವ ಪರವಾಗಿದ್ದರೆ, ಎನ್ ಡಿಎಗೆ ಮತ ಹಾಕಿದ್ದ ಶೇ.78 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನು ವಿರೋಧಿಸಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ. ಇನ್ನು ಶೇ.74 ರಷ್ಟು ಪುರುಷರು ಚೀನಾ ಉತ್ಪನ್ನಗಳು ಬೇಡ ಎನ್ನುತ್ತಿದ್ದರೆ, ಶೇ.61.7 ರಷ್ಟು ಮಹಿಳೆಯರು ಈ ನಿಲುವು ಹೊಂದಿದ್ದಾರೆ.

Stay up to date on all the latest ವಾಣಿಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp