2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ

2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. 
2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ
2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: 2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. 

ಜೂ.24 ರಂದು ಕೇಂದ್ರ ಸರ್ಕಾರ ವಿಸ್ತರಣೆಯ ಆದೇಶವನ್ನು ಪ್ರಕಟಿಸಿದ್ದು, 2020 ರ ಜು.31 ವರೆಗೆ ಗಡುವು ವಿಸ್ತರಿಸಲಾಗಿದೆ.
ಇದೇ ವೇಳೆ ಆಧಾರ್ ಹಾಗೂ ಪ್ಯಾನ್ (PAN) ಜೋಡಣೆಗೆ ನೀಡಲಾಗಿದ್ದ ಗಡುವನ್ನೂ 2021 ರ ಮಾರ್ಚ್ 31 ವರೆಗೂ ವಿಸ್ತರಿಸಲಾಗಿದೆ.

ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಐಟಿ ಕಾಯ್ದೆಯ ಅಡಿ ತೆರಿಗೆ ಕಡಿತಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗೆ ವಿಧಿಸಲಾಗಿದ್ದ ಕಾಲಮಿತಿಯನ್ನು ಜು.31 ವರೆಗೆ ವಿಸ್ತರಿಸಿದೆ. 2019-20 ರ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಈಗಾಗಲೇ 2020 ರ ನವೆಂಬರ್ 30 ವರೆಗೆ ವಿಸ್ತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com