2021ರಲ್ಲಿ ಭಾರತದ ಜಿಡಿಪಿ ಶೇ.5.3ಕ್ಕೆ ಇಳಿಕೆ, 2022ಕ್ಕೆ ಮತ್ತೆ ಚೇತರಿಕೆ: ಇಂಡ್-ರಾ ವರದಿ 

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 5.3 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ, ಇದು ಭಾರತದ ಆರ್ಥಿಕ ಇತಿಹಾಸದಲ್ಲಿ ಅತಿ ಕಡಿಮೆ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಯಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ(ಐಆರ್ ಆರ್) ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 5.3 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ, ಇದು ಭಾರತದ ಆರ್ಥಿಕ ಇತಿಹಾಸದಲ್ಲಿ ಅತಿ ಕಡಿಮೆ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಯಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ(ಐಆರ್ ಆರ್) ಹೇಳಿದೆ.

ಕೋವಿಡ್-19 ಸೋಂಕು ಬಂದ ನಂತರ ದೇಶದ ಆರ್ಥಿಕ ಬೆಳವಣಿಗೆ ದರ ಕುಸಿತ ಕಂಡುಬಂದಿದ್ದು ಉತ್ಪಾದನೆ, ಪೂರೈಕೆ, ಉದ್ಯಮ ವಲಯಗಳಲ್ಲಿ ಭಾರೀ ನಷ್ಟ ಮತ್ತು ಕುಸಿತ ಕಂಡುಬಂದಿದೆ. ವಿಮಾನಯಾನ, ಪ್ರವಾಸೋದ್ಯಮ, ಆತಿಥ್ಯ ವಲಯಗಳ ಮೇಲಂತೂ ಕೊರೋನಾ ಲಾಕ್ ಡೌನ್ ಉಂಟುಮಾಡಿರುವ ಆರ್ಥಿಕ ನಷ್ಟದಿಂದ ಹೊರಬರಲು ಇನ್ನು ಒಂದು ವರ್ಷ ಬೇಕಾಗಬಹುದು ಎಂದು ಐಆರ್ಆರ್ ಅಂದಾಜಿಸಿದೆ.

2022ರ ವೇಳೆಗೆ ಭಾರತದ ಜಿಡಿಪಿ ಮತ್ತೆ ಚೇತರಿಕೆ ಕಂಡು ಶೇಕಡಾ 5ರಿಂದ 6ರಷ್ಟು ಏರಿಕೆ ಕಂಡುಬರಲಿದೆ, ದೇಶೀಯ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಪರಿಸ್ಥಿತಿ ಸಹಜತೆಗೆ ಬರಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ಭಾರತದ ಆರ್ಥಿಕ ಪ್ರಗತಿಯ ದರ ಸೂಚಿಸುವ ಇಂಡ್-ರಾ ಪ್ರಕಾರ ಭಾರತದ ಜಿಡಿಪಿ 2021ನೇ ಸಾಲಿನ ಹಣಕಾಸು ವರ್ಷದಲ್ಲಿ ಶೇಕಡಾ 5.3ರಷ್ಟಿರುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com