ಸತತ 19ನೇ ದಿನವೂ ತೈಲೋತ್ಪನ್ನಗಳ ದರ ಏರಿಕೆ; ಇಂದಿನ ಪೆಟ್ರೋಲ್‌, ಡೀಸೆಲ್‌ ದರ ಇಂತಿದೆ

ತೈಲೋತ್ಪನ್ನಗಳ ದರ ಸತತ 19ನೇ ದಿನವೂ ಏರಿಕೆಯಾಗಿದ್ದು, ಗುರುವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತೈಲೋತ್ಪನ್ನಗಳ ದರ ಸತತ 19ನೇ ದಿನವೂ ಏರಿಕೆಯಾಗಿದ್ದು, ಗುರುವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.

ಹೌದು.. ದೇಶಾದ್ಯಂತ ನಿರಂತರವಾಗಿ ಏರಿಕೆಯಾಗುತ್ತಿರುವ ಇಂಧನ ದರದಲ್ಲಿ ಗುರುವಾರ ಮತ್ತೆ ಹೆಚ್ಚಳವಾಗಿದ್ದು, ಪೆಟ್ರೋಲ್‌, ಡೀಸೆಲ್ ಕ್ರಮವಾಗಿ 16 ಪೈಸೆ ಮತ್ತು 14 ಪೈಸೆ ಏರಿಕೆಯಾಗಿದೆ. 

ಪ್ರಸ್ತುತ ಬೆಳಗ್ಗೆ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ 75.96 ರೂಗೆ ಏರಿಕೆಯಾಗಿದ್ದು, ಪೆಟ್ರೋಲ್‌ ಬೆಲೆ 82.35 ರೂ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಡೀಸೆಲ್‌ ದರ 80.02 ಮತ್ತು ಪೆಟ್ರೋಲ್‌ ದರ 79.92ಕ್ಕೆ ಏರಿಕೆಯಾಗಿದೆ. ಇತ್ತ ಮುಂಬೈನಲ್ಲಿ ಡೀಸೆಲ್‌ ದರ 77.76 ರೂ ಮತ್ತು ಪೆಟ್ರೋಲ್‌ ದರ 86.54  ರೂಗೆ ಹೆಚ್ಚಳವಾಗಿದೆ. 

ಈ ತಿಂಗಳ 7ರಿಂದ ಆರಂಭವಾದ ಇಂಧನಗಳ ದಿನನಿತ್ಯದ ಬೆಲೆ ಪರಿಷ್ಕರಣೆಯು ಸತತ 19 ದಿನವೂ ಮುಂದುವರೆದಿದೆ. ಇದರಿಂದಾಗಿ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 10.63ರೂ ಮತ್ತು ಪೆಟ್ರೋಲ್‌  8.21ರೂ ರಷ್ಟು ಏರಿಕೆಯಾಗಿದೆ. 

ಕೇಂದ್ರ ಸರ್ಕಾರ ಮಾರ್ಚ್‌ 14ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ರೂ 3 ಹೆಚ್ಚಿಸಿತು. ಮತ್ತೆ ಮೇ 5ರಂದು ಪ್ರತಿ ಲೀಟರ್‌ ಪೆಟ್ರೋಲ್‌ ಮೇಲಿನ ತೆರಿಗೆ ರೂ10 ಹಾಗೂ ಡೀಸೆಲ್‌ಗೆ ರೂ13 ಹೆಚ್ಚಳ ಮಾಡಿತ್ತು. ಇದರಿಂದಾಗಿ ಸರ್ಕಾರಕ್ಕೆ ರೂ2 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ವರಮಾನ ಸಂಗ್ರಹವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com